ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋ

|
Google Oneindia Kannada News

ಬೆಂಗಳೂರು, ನವೆಂಬರ್ 17: ಚಂದ್ರಯಾನ-2 ವೈಫಲ್ಯಕ್ಕೆ ನಿಜವಾದ ಕಾರಣವೇನು ಎಂಬುದನ್ನು ಇಸ್ರೋ ಬಿಚ್ಚಿಟ್ಟಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಐತಿಹಾಸಿಕ ಚಂದ್ರಯಾನ-2 ನೌಕೆ ಕಡೆಯ ಕ್ಷಣದಲ್ಲಿ ವೈಫಲ್ಯ ಅನುಭವಿಸಲು ಸಾಫ್ಟ್‌ವೇರ್‌ನಲ್ಲಿ ಎದುರಾದ ಅನಿರೀಕ್ಷಿತ ದೋಷ ಕಾರಣ ಎಂದು ತಿಳಿಸಿದ್ದಾರೆ.

ಮಾರ್ಗಸೂಚಿ ಸಾಫ್ಟ್‌ವೇರ್‌ ನಿಷ್ಕ್ರಿಯ

ಮಾರ್ಗಸೂಚಿ ಸಾಫ್ಟ್‌ವೇರ್‌ ನಿಷ್ಕ್ರಿಯ

ಮಾರ್ಗಸೂಚಿಯಾಗಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ದಿಢೀರ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು, ಚಂದ್ರನ ಮೇಲೆ ಅಪ್ಪಳಿಸಲಿದೆ ಎಂದು ಬಾಹ್ಯಾಕಾಶ ಆಯೋಗಕ್ಕೆ ಇಸ್ರೋ ಸಲ್ಲಿಸಿರುವ ಆಂತರಿಕ ವರದಿಯಲ್ಲಿ ಉಲ್ಲೇಖವಾಗಿದೆ.

ಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆ

ಚಂದ್ರನ ಧ್ರುವದಲ್ಲಿ ವಿಕ್ರಮ್ ಇಳಿಸಲು ಮುಂದಾಗಿದ್ದ ಇಸ್ರೋ

ಚಂದ್ರನ ಧ್ರುವದಲ್ಲಿ ವಿಕ್ರಮ್ ಇಳಿಸಲು ಮುಂದಾಗಿದ್ದ ಇಸ್ರೋ

ಈವರೆಗೆ ಯಾವುದೇ ದೇಶವೂ ನೌಕೆ ಇಳಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಿ, ಸೆ.7ರಂದು ಹೊಸ ಇತಿಹಾಸ ಬರೆಯಲು ಇಸ್ರೋ ಮುಂದಾಗಿತ್ತು.

ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದು ಯಾವಾಗ?

ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದು ಯಾವಾಗ?

ಚಂದ್ರನ ಮೇಲ್ಮೈನಿಂದ ಕೇವಲ 500 ಮೀಟರ್ ದೂರದಲ್ಲಿದ್ದಾಗ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತ್ತು. ನೌಕೆಯ ವೈಫಲ್ಯಕ್ಕೆ ಸಾಫ್ಟ್‌ವೇರ್ ದೋಷವನ್ನು ಇಸ್ರೋ ಪತ್ತೆ ಹೆಚ್ಚಿದೆ. ಪ್ರಾಯೋಗಿಕ ಅವಧಿಯಲ್ಲಿ ಈ ಸಾಫ್ಟ್‌ವೇರ್ ದೋಷರಹಿತವಾಗಿ ಕೆಲಸ ಮಾಡಿತ್ತು.

ಚಂದ್ರಲೋಕ ನೋಡಬೇಕೇ: ಇಲ್ಲಿವೆ ನೋಡಿ ಅದರ ಚಿತ್ರ!ಚಂದ್ರಲೋಕ ನೋಡಬೇಕೇ: ಇಲ್ಲಿವೆ ನೋಡಿ ಅದರ ಚಿತ್ರ!

 ಫೋಟೊ ಹಾಗೂ ಥರ್ಮಲ್ ಇಮೇಜ್ ಏನು ಹೇಳುತ್ತೆ?

ಫೋಟೊ ಹಾಗೂ ಥರ್ಮಲ್ ಇಮೇಜ್ ಏನು ಹೇಳುತ್ತೆ?

ಪ್ರಾಯೋಗಿಕ ಅವಧಿಯಲ್ಲಿ ಈ ಸಾಫ್ಟ್‌ವೇರ್ ದೋಷದ ಹಿತವಾಗಿ ಕೆಲಸ ಮಾಡಿತ್ತು. ಆದರೆ ಕಡೆ ಕ್ಷಣದಲ್ಲಿ ಕೈಕೊಟ್ಟಿತು ಎಂದು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ ನಿರ್ದೇಶಕ ವಿ ನಾರಾಯಣನ್ ನೇತೃತ್ವದ ಇಸ್ರೋದ ಆಂತರಿಕ ಸಮಿತಿ ಫೋಟೊ ಹಾಗೂ ಥರ್ಮಲ್ ಇಮೇಜ್‌ಗಳನ್ನು ಆಧರಿಸಿ ಅಂತಿಮ ನಿಲುವಿಗೆ ಬಂದಿದೆ. ಚಂದ್ರನ ಅಂಗಳದಿಂದ 100 ಕಿ.ಮೀ ಎತ್ತರದಲ್ಲಿ ಸುತ್ತುತ್ತಿರುವ ಇಸ್ರೋದ ಆರ್ಬಿಟರ್ ಹಾಗೂ ಅಮೆರಿಕದ ನಾಸಾದಂತಹ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಂದ ಪೋಟೊ ಹಾಗೂ ಥರ್ಮಲ್ ಇಮೇಜ್‌ಗಳನ್ನು ಪಡೆದು,ಅದನ್ನು ವಿಶ್ಲೇಷಣೆಗೊಳಪಡಿಸಿ ಈ ವರದಿಯನ್ನು ನೀಡಿದೆ. ಚಂದ್ರಯಾನ 2 ವೈಫಲ್ಯದಿಂದ ಎದೆಗುಂದದ ಇಸ್ರೋ, ಮುಂದಿನ ವರ್ಷ ಮತ್ತೊಮ್ಮೆ ಚಂದ್ರನ ಮೇಲೆ ನೌಕೆ ಇಳಿಸುವ ಚಂದ್ರಯಾನ 3 ಯೋಜನೆಗೆ ಸಜ್ಜಾಗಿದೆ.

ಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿ

English summary
A last-minute software glitch led to the failure of the Chandrayaan 2 mission. Vikram Lander crash-landed on the moon's surface after its guidance software went kaput, according to an internal report presented to the Space Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X