ಮರ್ಯಾದಾ ಹತ್ಯೆ ಶಂಕೆ: ಉದಯಪುರದಲ್ಲಿ ದಂಪತಿ ಕೊಲೆ

ಉದಯಪುರ ನವೆಂಬರ್ 18: ರಾಜಸ್ಥಾನದ ಉದಯಪುರದ ಗೊಗುಂಡಾ ಪೊಲೀಸ್ ಠಾಣೆ ಬಳಿಯ ನಿರ್ಜನ ಪ್ರದೇಶದಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ. ಇದು ಮರ್ಯಾದಾ ಹತ್ಯೆ ಅಥವಾ ವೈಯಕ್ತಿಕ ದ್ವೇಷದ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬಲಿಯಾದವರನ್ನು ವೃತ್ತಿಯಲ್ಲಿ ಶಿಕ್ಷಕ ರಾಹುಲ್ ಮೀನಾ (30) ಮತ್ತು ಸೋನು ಸಿಂಗ್ (28) ಎಂದು ಗುರುತಿಸಲಾಗಿದೆ. ರಾಹುಲ್ ಬುಡಕಟ್ಟು ಸಮುದಾಯದವರಾಗಿದ್ದರೆ, ಸೋನು ರಜಪೂತ ಸಮುದಾಯದವರು. ಇಬ್ಬರೂ ಉದಯಪುರದಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು.

ಮೇಲ್ನೋಟಕ್ಕೆ ಅವರಿಬ್ಬರನ್ನು ಭಾರವಾದ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಲಾಗಿದೆ. ನಂತರ ಹರಿತವಾದ ಆಯುಧದಿಂದ ಇರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Honour killing: Couple murdered in Udaipur

"ಮೀನಾ ಅವರ ಖಾಸಗಿ ಭಾಗಗಳನ್ನು ಕತ್ತರಿಸಲಾಗಿದೆ. ಜೊತೆಗೆ ಮೊಂಡಾದ ಆಯುಧದ ಗಾಯಗಳಿವೆ. ದೇಹವು ಎರಡು ದಿನಗಳ ಹಳೆಯದು ಎಂದು ತೋರುತ್ತದೆ. ಅವರು ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಸಂತ್ರಸ್ತರ ಜಾತಿಯನ್ನು ನೋಡಿದರೆ ಇದು ಮರ್ಯಾದಾ ಹತ್ಯೆಯ ಪ್ರಕರಣವಾಗಿರಬಹುದು ಎಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Honour killing: Couple murdered in Udaipur

"ನವೆಂಬರ್ 15 ರಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಹತ್ಯೆಗಳು ವೈಯಕ್ತಿಕ ದ್ವೇಷದ ಕಾರಣವಾಗಿರಬಹುದು. ಸ್ಥಳದಿಂದ ಸಂಗ್ರಹಿಸಲಾದ ಮೃತದೇಹಗಳು ಮತ್ತು ಸಾಕ್ಷ್ಯಗಳನ್ನು ವೈದ್ಯಕೀಯ ಮತ್ತು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಕಾಸ್ ಶರ್ಮಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+