Honeytrap Case: ಬೆಡ್ ರೂಂ ವಿಡಿಯೋ ಲೀಕ್ ಮಾಡುವುದಾಗಿ ಪತ್ನಿಯಿಂದಲೇ ಪತಿಗೆ ಬೆದರಿಕೆ: ಅಸಲಿ ಕಥೆ ಕೇಳಿ ಧಂಗಾದ ಪೊಲೀಸರು
Honeytrap Case: ಸಾಮಾನ್ಯವಾಗಿ ಇತ್ತೀನ ದಿನಗಳಲ್ಲಿ ಕೆಲವು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಬೆದರಿಕೆ ಹಾಕಿ ಹಣ ಪೀಕುವುದನ್ನು ಕೇಳಿರುತ್ತೇವೆ. ಮೊದಲಿಗೆ ಅಮಾಯಕ ಹುಡುಗರನ್ನು ಹೆಣ್ಣುಮಕ್ಕಳು ಪ್ರೀತಿ, ಪ್ರೇಮವೆಂಬ ಬಲೆಗೆ ಬೀಳಿಸಿ ಅವರ ಜೀವನವನ್ನು ಹಾಳು ಮಾಡಿ, ನಂತರ ಅವರ ಜೊತೆ ದೈಹಿಕ ಸಂಬಂಧ ಬೆಳೆಸಿ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುವುದಾಗಿ ಬೆದರಿಸಿ ಹಣ ಪೀಕಿದ ಪ್ರಕರಣಗಳು ಕೂಡ ನಡೆದಿರುವ ಉದಾಹರಣೆಗಳು ಇವೆ. ಆದರೆ ಇದೀಗ ಇದಕ್ಕೂ ಮೀರಿದ ಪೊಲೀಸರನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ನಡೆದಿದೆ.
ಇಂದಿನ ಸಮಾಜದಲ್ಲಿ ಆಗಾಗ ಹನಿಟ್ಯ್ರಾಪ್‌ನಂತಹ ಪ್ರಕರಣಗಳು ನಡೆಯುತ್ತಿರುವುದನ್ನು ನೀವು ನೋಡುತ್ತಲೇ ಇರುತ್ತೀರ. ಪ್ರೀತಿ, ಪ್ರೇಮ ಎಂದು ನಂಬಿಸಿದ ಕೆಲ ಮಹಿಳೆಯರು ಹನಿಟ್ಯ್ರಾಪ್ ಹೆಸರಿನಲ್ಲಿ ಮೋಸ ಮಾಡಿ ಲಕ್ಷ, ಲಕ್ಷ .. ಕೋಟಿ.. ಕೋಟಿ ರೂಪಾಯಿ ದೋಚುತ್ತಿರುರುವ ಪ್ರಕರಣಗಳು ನಡೆಯುತ್ತಿವೆ. ಆದರೆ ಉತ್ತರ ಪ್ರದೇಶದಲ್ಲಿ ಪತ್ನಿಯೇ ಬೆಡ್ ರೂಂ ವಿಡಿಯೋ ಲೀಕ್ ಮಾಡುವುದಾಗಿ ತನ್ನ ಪತಿಗೆ ಬೆದರಿಕೆ ಹಾಕಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ಮಹಿಳೆಯು ಕೆಲ ತಿಂಗಳುಗಳ ಹಿಂದೆಯಷ್ಟೇ ಪೊಲೀಸ್ ಪೇದೆಯನ್ನು ಮದುವೆ ಆಗಿದ್ದರು. ಪೊಲೀಸ್ ಪೇದೆಗೆ ಆಕೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮೂಲಕ ಪರಿಚಯ ಆಗಿದ್ದಳು. ಇದೇ ಎಫ್‌ಬಿ ಪರಿಚಯ ಪ್ರೀತಿಗೆ ತಿರುಗಿ ಕಳೆದ ಜೂನ್ ತಿಂಗಳಿನಲ್ಲಿ ಇಬ್ಬರೂ ವಿವಾಹ ಆಗಿದ್ದರು.
ಹೀಗೆಯೇ ಕೆಲ ದಿನಗಳ ಬಳಿಕ ಆಕೆ ಬೆಡ್ ರೂಂನಲ್ಲಿನ ಖಾಸಗಿ ಕ್ಷಣಗಳನ್ನು ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಳಂತೆ. ಆ ವಿಡಿಯೋಗಳನ್ನು ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಆರೋಪಿತೆಗೆ ಸಹೋದರ ಹಾಗೂ ಪೋಷಕರೂ ಸಹ ಸಾಥ್ ನೀಡಿದ್ದಾರೆ ಎನ್ನುವ ಭಯಾನಕ ಮಾಹಿತಿಯೊಂದು ಹೊರಬಿದ್ದಿದೆ.
ವಿವಾಹವಾದ ನಂತರ ಪೇದೆಯು ಆರೋಪಿಯ ಪೋಷಕರು ಹಾಗೂ ಸಹೋದರನಿಂದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರಿಂದ ಪದೇ ಪದೇ ಹಣ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಗೀಳಿಗಿಟ್ಟಿದ್ದಾರೆ. ಅಲ್ಲದೆ ಪತ್ನಿ ಸಹ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ. 30 ಲಕ್ಷ ಕೊಡದೇ ಇದ್ದರೇ ಬೆಡ್ ರೂಂನ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಹಾಗೂ ಅತ್ಯಾಚಾರ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಳಂತೆ.
ಈ ಬೆದರಿಕೆಯಿಂದ ಬೇಸತ್ತ ಪೊಲೀಸ್ ಪೇದೆ ಆಕೆಯ ವಿರುದ್ದ ದೂರು ದಾಖಲಿಸಿದ್ದರು. ಪತ್ನಿ ಹಾಗೂ ಆಕೆಯ ಸಹೋದರ, ತಂದೆಯನ್ನು ಆರೋಪಿಗಳ ಪಟ್ಟಿಗೆ ಸೇರಿಸಿದ್ದರು. ಇನ್ನು ದೂರು ದಾಖಲು ಮಾಡಿಕೊಂಡ ಪೊಲೀಸರು ಆರೋಪಿತೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆಯ ಕಥೆ ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಂತ್ರಸ್ತೆ (ಆಕೆ) ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಮದುವೆಯಾಗಿ ಇದೇ ರೀತಿಯಲ್ಲಿ ಹಣ ವಸೂಲಿ ಪೀಕಿದ್ದಳಂತೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡ ಈಕೆ ವಿವಾಹವಾಗಿ ನಂತರ ಖಾಸಗಿ ವಿಡಿಯೋ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿ ಹಣ ಪೀಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಬೆಡ್ ರೂಂ ವಿಡಿಯೋ ತೋರಿಸಿ ಬೆದರಿಕೆ ಹಾಕುತ್ತಿದ್ದ ಐನಾತಿ ಮಹಿಳೆ ಇದೀಗ ಪೊಲೀಸರ ಅತಿಥಿ ಆಗಿದ್ದಾಳೆ ಎಂದು ತಿಳಿದುಬಂದಿದೆ.












Click it and Unblock the Notifications