ಇನ್ಮುಂದೆ ಪೆಟ್ರೋಲ್, ಡೀಸೆಲ್ ನಿಮ್ಮ ಮನೆ ಬಾಗಿಲಿಗೆ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 21 : ಆನ್‍ ಲೈನಲ್ಲಿ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಪಡೆದುಕೊಳ್ಳುವಂತೆ ಇನ್ನು ಮುಂದೆ ಪೆಟ್ರೋಲ್, ಡೀಸೆಲ್ ಬುಕ್ ಮಾಡಿ ಮನೆಯಲ್ಲೇ ತೈಲವನ್ನು ತಮ್ಮ ವಾಹನಗಳಿಗೆ ತುಂಬಿಸಬಹುದು.

ಹೌದು. ಪೆಟ್ರೋಲ್‌ ಪಂಪ್ ಗಳಲ್ಲಿ ಕಾದು ನಿಲ್ಲುವ ಗ್ರಾಹಕರ ಕ್ಯೂ ತಪ್ಪಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಸಚಿವಾಲಯ ಹೊಸ ಯೋಜನೆ ರೂಪಿಸುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಮನೆಗೇ ತಲುಪಿಸಲಿದೆ.[ಕರ್ನಾಟಕದಲ್ಲಿ ಭಾನುವಾರಗಳಂದು ಪೆಟ್ರೋಲ್ ಬಂಕ್ ಬಂದ್ ಆಗಲ್ಲ]

ಮುಂಗಡವಾಗಿ ಬುಕ್ಕಿಂಗ್ ಮಾಡುವ ಗ್ರಾಹಕರ ವಿಳಾಸಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ತಲುಪಿಸುವ ನೂತನ ಕ್ರಮವನ್ನು ಕಂಡುಕೊಂಡಿರುವುದಾಗಿ ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.

Home delivery of petrol, diesel likely as Oil ministry considers idea

ನಿತ್ಯ ತೈಲ ವಿತರಣಾ ಕೇಂದ್ರಗಳಿಗೆ 35 ಕೋಟಿ ಜನರು ಭೇಟಿ ನೀಡುತ್ತಿದ್ದು, ವಾರ್ಷಿಕ ₹2500 ಕೋಟಿ ಮೊತ್ತದ ವಹಿವಾಟು ನಡೆಯುತ್ತಿದೆ ಎಂದು ಪ್ರಕಟಿಸಿದೆ.

ಜಾಗತಿಕ ಮಟ್ಟದಲ್ಲಿ 3ನೇ ಅತಿ ಹೆಚ್ಚು ತೈಲ ಬಳಸುವ ದೇಶವಾಗಿರುವ ಭಾರತದಲ್ಲಿ ನಿತ್ಯವೂ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ನಡೆಯಲಿದ್ದು, ಮೇ 1ರಿಂದ ಐದು ನಗರಗಳಲ್ಲಿ ಪಾಂಡಿಚೇರಿ, ಆಂಧ್ರಪ್ರದೇಶದ ವೈಜಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್ ನ ಜಮ್ಶೆಡ್ಪುರ ಮತ್ತು ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ಗ್ರಾಹಕರ ವಿಳಾಸಕ್ಕೆ ತಲುಪಿಸುವ ಮೂಲಕ ಪೆಟ್ರೋಲ್‌ ಪಂಪ್ ಗಳಲ್ಲಿ ಕಾಯುವುದು ತಪ್ಪಲಿದೆ ಎಂದು ಕೇಂದ್ರ ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a bid to cut long queues outside fuel pumps, the government is likely considering home delivery of petrol and diesel to consumers if they pre-book, the Ministry of Petroleum and Natural Gas tweeted on Friday.
Please Wait while comments are loading...