ಡಿ.31ರ ನಂತರ ಹತ್ತಕ್ಕಿಂತ ಹೆಚ್ಚು ಹಳೇ ನೋಟಿದ್ದರೆ ದಂಡ, ಜೈಲು ಶಿಕ್ಷೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 28: ಡಿಸೆಂಬರ್ 31ರ ನಂತರ ಹಳೇ 500, 1000 ರುಪಾಯಿ ನೋಟುಗಳು ಹತ್ತಕ್ಕಿಂತ ಹೆಚ್ಚು ಇಟ್ಟುಕೊಂಡಿದ್ದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಹತ್ತು ಸಾವಿರ ಮೊತ್ತದಷ್ಟು 500, 1000 ರುಪಾಯಿ ಹಳೇ ನೋಟುಗಳನ್ನು ನೀಡುವುದು ಹಾಗೂ ಪಡೆಯುವುದು ಅಪರಾಧ ಎಂದು ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಂಪುಟವು ಹಸಿರು ನಿಶಾನೆ ತೋರಿದೆ.

ಸುಗ್ರೀವಾಜ್ಞೆ ಪ್ರಕಾರ ಒಬ್ಬ ವ್ಯಕ್ತಿ ಗರಿಷ್ಠ ಹತ್ತು ನೋಟುಗಳನ್ನು ಇರಿಸಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೆ 'ದ ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್ ಸೆಸೆಷನ್ ಆಫ್ ಲಯಾಬಲಿಟಿಸ್ ಸುಗ್ರೀವಾಜ್ಞೆ' ಎಂದು ಹೆಸರಿಸಲು ನಿರ್ಧರಿಸಲಾಗಿದೆ. ಹಳೇ ನೋಟುಗಳನ್ನು ಜಮೆ ಮಾಡಲು ಡಿಸೆಂಬರ್ 30 ಕೊನೆ ದಿನ ಎಂದು ಕೂಡ ತೀರ್ಮಾನಿಸಲಾಗಿದ್ದು, ಆ ನಂತರ ಹಳೆ ನೋಟುಗಳನ್ನು ಆಯ್ದ ಆರ್ ಬಿಐ ಕಚೇರಿಗಳಲ್ಲಿ ಮಾತ್ರ ಜಮೆ ಮಾಡಬಹುದಾಗಿದೆ.[ಹೊಸ ನೋಟುಗಳ ಮುದ್ರಣಕ್ಕೆ ಆರ್ ಬಿಐ ಎಷ್ಟು ಖರ್ಚು ಮಾಡ್ತಿದೆ?]

Holding more than 10 notes is punishable after Dec 31

ಒಂದು ವೇಳೆ ಈ ಕಾನೂನು ಮುರಿದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಆದರೆ ಎಷ್ಟು ಮೊತ್ತ ದಂಡವಾಗಿ ಹಾಕಬೇಕು ಎಂಬ ಬಗ್ಗೆ ಅಂತಿಮವಾಗಿ ತೀರ್ಮಾನಿಸಿಲ್ಲ. ಅದರೆ ಮೂಲಗಳ ಪ್ರಕಾರ 50 ಸಾವಿರ ರುಪಾಯಿ ಅಥವಾ ಬಳಿಯಿರುವ ಹಣದ ಐದು ಪಟ್ಟು ಇವೆರಡರಲ್ಲಿ ಯಾವುದೋ ಹೆಚ್ಚೋ ಅಷ್ಟನ್ನು ದಂಡವಾಗಿ ಹಾಕಲಾಗುತ್ತದೆ.

ಕ್ರಿಮಿನಲ್ ಕೇಸು ಹಾಕುವ ಬಗ್ಗೆ ಹಾಗೂ ಇದರ ವಿಚಾರಣೆಯನ್ನು ಮುನ್ಸಿಪಲ್ ಜಡ್ಜ್ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಮ್ಯಾಜಿಸ್ಟ್ರೇಟ್ ದಂಡದ ಪ್ರಮಾಣ ನಿರ್ಧರಿಸುತ್ತಾರೆ ಮತ್ತು ತಪ್ಪಿತಸ್ಥನಿಗೆ ನಾಲ್ಕು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರಿಂದ ವ್ಯವಸ್ಥೆಯೊಳಗೆ ವಾಪಸ್ ಬಂದ ಹಣದ ಬಗ್ಗೆ ನಿರ್ಧರಿಸಲು ಅನುಕೂಲವಾಗುತ್ತದೆ. ಕೇಂದ್ರ ಬಜೆಟ್ ಯೋಜಿಸಲು ನೆರವಾಗುತ್ತದೆ.[2 ಸಾವಿರ ರುಪಾಯಿ ನೋಟಿನ ಆಯುಷ್ಯ ಕೆಲವೇ ವರ್ಷ: ಗುರುಮೂರ್ತಿ]

ಇನ್ನು ಜನವರಿ 1ರಿಂದ ಮಾರ್ಚ್ 31ರ ಮಧ್ಯೆ ಹಳೇ ನೋಟುಗಳನ್ನು ಆರ್ ಬಿಐನ ಆಯ್ದ ಕಚೇರಿಗಳಲ್ಲಿ ಜಮೆ ಮಾಡಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Union Cabinet today cleared the promulgation of an ordinance under which possessing, transferring of receiving an amount of Rs 10,000 in banned 500 and 1,000 notes will be a punishable offence. As per the ordinance the maximum of 10 notes person will be allowed.
Please Wait while comments are loading...