ದಯಾ ಮರಣದ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು

Posted By: Gururaj
Subscribe to Oneindia Kannada

ನವದೆಹಲಿ, ಮಾರ್ಚ್ 09 : 'ಜನರಿಗೆ ಗೌರವಪೂರ್ವಕವಾಗಿ ಸಾವನ್ನಪ್ಪುವ ಹಕ್ಕಿದೆ' ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ದಯಾ ಮರಣಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಶುಕ್ರವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಕೆ.ಸಿಕ್ರಿ, ಎ.ಎಮ್.ಖಾನ್ ವಿಲ್ಕರ್, ಡಿ.ವೈ,ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರ ನ್ಯಾಯಪೀಠ ದಯಾ ಮರಣದ ಕುರಿತು ತೀರ್ಪು ನೀಡಿದೆ.

ರಾಷ್ಟ್ರಪತಿಗೆ 'ದಯಾಮರಣ' ಕೋರಿದ ಬೀದರ್ ಶಿಕ್ಷಕನ ಕುಟುಂಬ

ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ತಾನು ಯಾವಾಗ ಕೊನೆಯುಸಿರುಎಳೆಯಬೇಕು ಎಂದು ನಿರ್ಧರಿಸುವ ಹಕ್ಕಿದೆ ಎಂದು ಕೋರ್ಟ್ ಹೇಳಿದೆ. ಐವರು ನ್ಯಾಯಮೂರ್ತಿಗಳು ಸಾಂವಿಧಾನಿಕ ಪೀಠ ಈ ಕುರಿತು ಶುಕ್ರವಾರ ತೀರ್ಪು ನೀಡಿದೆ.

ಶ್ರೀರಂಗಪಟ್ಟಣದ ವಿಕಲಚೇತನ ದಯಾಮರಣ ಕೋರಿದ್ದೇಕೆ?

Historical judgements by supreme court on Euthanasia

ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಸಂಬಂಧಿಕರು, ಸ್ನೇಹಿತರು ದಯಾಮರಣವನ್ನು ಕೋರಿ ಹೈಕೋರ್ಟ್ ಮೆಟ್ಟಿಲೇರಿದರೆ ಕೋರ್ಟ್ ದಯಾಮರಣವನ್ನು ನೀಡಲು ವೈದ್ಯಕೀಯ ತಂಡವನ್ನು ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ಪರೋಕ್ಷ ದಯಾ ಮರಣಕ್ಕೆ ಒಪ್ಪಿಗೆ ನೀಡಿದೆ.

ದಯಾಮರಣದ ಪರ ಮತ್ತು ವಿರುದ್ಧವಾಗಿ ದೇಶದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದವು. ಈ ಕುರಿತು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಅರುಣಾ ಶಾನಭಾಗ ಅವರಿಗೆ ದಯಾ ಮರಣ ಸಿಕ್ಕಿರಲಿಲ್ಲ : ಸುಮಾರು 42 ವರ್ಷಗಳಿಂದ ಮರಣಶಯ್ಯೆಯಲ್ಲಿದ್ದ ಕನ್ನಡತಿ ನರ್ಸ್ ಅರುಣಾ ರಾಮಚಂದ್ರ ಶಾನಭಾಗ ಅವರಿಗೆ ದಯಾ ಮರಣ ಸಿಕ್ಕಿರಲಿಲ್ಲ.

42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ

2015ರ ಮೇ ತಿಂಗಳಿನಲ್ಲಿ ಅವರು ಮೃತಪಟ್ಟಿದ್ದರು. ಅತ್ಯಾಚಾರಕ್ಕೊಳಗಾಗಿದ್ದ ಅರುಣಾಳ ಮಿದುಳಿನಲ್ಲಿ ರಕ್ತಸ್ರಾವವಾಗಿ ದೃಷ್ಟಿ ಕುಂಠಿತವಾಗಿದ್ದಲ್ಲದೆ, ಮಾತನಾಡುವ ಶಕ್ತಿ ಹಾಗೂ ಪರಿಸರದ ಬಗ್ಗೆ ಸಂವೇದನೆಯನ್ನೂ ಘಾಸಿಗೊಳಿಸಿತು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಸಹಾಯದಿಂದ ಸುಮಾರು 40 ಕ್ಕೂ ಅಧಿಕ ವರ್ಷ ಕೋಮಾ ಅವಸ್ಥೆಯಲ್ಲಿ ಕಾಲ ದೂಡಬೇಕಾಯಿತು.

ಅರುಣಾ ಶಾನಭಾಗ ಅವರಿಗೆ ದಯಾಮರಣ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು. ಆದ್ದರಿಂದ, ದಯಾಮರಣ ಸಿಗದೇ ಅವರು ನಕರ ಸದೃಶ ಜೀವನ ನಡೆಸಬೇಕಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Supreme Court has allowed 'living will' but with strict guidelines. The top court has said the guidelines will remain effective till a law is in place.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ