ಜಗದಲಪುರ-ಭುವನೇಶ್ವರ ಎಕ್ಸ್ ಪ್ರೆಸ್ ರೈಲು ದುರಂತ: ಸಹಾಯವಾಣಿ ಸಂಖ್ಯೆಗಳು

Written By: Ramesh
Subscribe to Oneindia Kannada

ಕುನೇರು (ಆಂಧ್ರಪ್ರದೇಶ), ಜನವರಿ 22 : ಆಂಧ್ರದ ಕುನೇರು ಬಳಿ ಜಗದಲಪುರ-ಭುವನೇಶ್ವರ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಶನಿವಾರ ರಾತ್ರಿ 11 ಗಂಟೆಗೆ ಹಳಿ ತಪ್ಪಿದ ಪರಿಣಾಮ ಸಾವನ್ನಪ್ಪಿರುವ ಸಂಖ್ಯೆ ಏರುತ್ತಲೇ ಇದೆ.

ಘಟನಾ ಸ್ಥಳಕ್ಕೆ ಮೃತರ ಕುಟುಂಬಸ್ಥರು ಆಗಮಿಸಿ ಕಣ್ಣೀರಿಡುತ್ತಿದ್ದಾರೆ. ಹಲವು ಬೋಗಿಗಳು ತೀವ್ರವಾಗಿ ಜಖಂ ಆಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಈ ನಡುವೆ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ 32 ಜನರು ಸಾವಿಗೀಡಾಗಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ವರದಿಯಾಗಿದೆ.[ಹಳಿತಪ್ಪಿದ ಹಿರಾಖಂಡ್ ಎಕ್ಸ್ ಪ್ರೆಸ್ : 23ಕ್ಕೂ ಹೆಚ್ಚು ಜನರ ದುರ್ಮರಣ]

hirakhand express train derail Indian Railways issues helpline numbers

ರೈಲು ದುರಂತ: ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ. ರಾಯಘಡ- ಬಿಎಸ್ ಎನ್ ಎಲ್: 06856-223400, 06856-223500, ಬಿಎಸ್ ಎನ್ ಎಲ್ ಮೊಬೈಲ್ ಸಂಖ್ಯೆ: 09439741181, 09439741071, ಏರ್ಟೆಲ್: 07681878777.

ವಿಜಯನಗರಂ-83331, 83332, 83333, 83334,ಬಿಎಸ್ ಎನ್ ಎಲ್: 08922-221202, 08922-221206, ವಿಶಾಖಪಟ್ಟಣಂ - 83003, 83005, 83006, ಬಿಎಸ್ ಎನ್ ಎಲ್: 0891-2746344, 0891-2746330, ಕುರ್ದಾ ನಿಯಂತ್ರಣ ಕೇಂದ್ರ- 0674 2490670, ಭುವನೇಶ್ವರ ನಿಲ್ದಾಣ-06742543360, ಬೆಹ್ರಾಮ್ ಪುರ್ ರೈಲು ನಿಲ್ದಾಣ-06802229632.

18448 ಜಗದಲಪುರ-ಭುವನೇಶ್ವರ ಎಕ್ಸ್ ಪ್ರೆಸ್ ರೈಲು ಕುನೇರು ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ. ಇಂಜಿನ್, ಲಗ್ಗೇಜ್ ವ್ಯಾನ್, ಎರಡು ಜನರಲ್ ಬೋಗಿ, ಎರಡು ಸ್ಲೀಪರ್ ಬೋಗಿ, ಒಂದು ಎಸಿ ತ್ರಿ ಟಯರ್ ಕೋಚ್ ಮತ್ತು ಎರಡು ಎಸಿ ಟು ಟಯರ್ ಕೋಚ್ ಗಳು ಹಳಿ ತಪ್ಪಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jagdalpur-Bhubneswar Hirakhand Express train derailed; Indian Railways issues helpline numbers for assistance.
Please Wait while comments are loading...