ಹಿಂದೂ ಅವಹೇಳನ: ಬಾಲಿವುಡ್ ಜಗತ್ತನ್ನು ಹುರಿದು ಮುಕ್ಕಿದ ಟ್ವಿಟ್ಟಿಗರು

Written By:
Subscribe to Oneindia Kannada

ಮುಂಬೈ, ಜ 29: ಪದ್ಮಾವತಿ ಹಿಂದಿ ಚಿತ್ರೀಕರಣದ ವೇಳೆ ಖ್ಯಾತ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲೆ ನಡೆದ ಹಲ್ಲೆಯನ್ನು ಉಲ್ಲೇಖಿಸಿ ಟ್ವಿಟ್ಟಿಗರು ಬಾಲಿವುಡ್ ಚಿತ್ರೋದ್ಯಮದ ಮೇಲೆ ಹರಿಹಾಯ್ದಿದ್ದಾರೆ.

ಚಿತ್ರೀಕರಣದ ಹಂತದಲ್ಲಿರುವ ಬನ್ಸಾಲಿ ಅವರ ಮುಂದಿನ ' ಪದ್ಮಾವತಿ' ಚಿತ್ರದಲ್ಲಿ ರಜಪೂತ್ ಸಂಸ್ಕೃತಿಯನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎಂದು ಗುಂಪೊಂದು ಬನ್ಸಾಲಿ ಅವರಿಗೆ ಕಪಾಳಮೋಕ್ಷ ಮಾಡಿತ್ತು.

ಘಟನೆಯನ್ನು ಬಾಲಿವುಡ್ ಚಿತ್ರೋದ್ಯಮ ತೀವ್ರವಾಗಿ ಟೀಕಿಸಿದ್ದರೆ, ಟ್ವಿಟ್ಟಿಗರು ಚಿತ್ರ ನಿರ್ಮಿಸಲು ನಿಮಗೆ ಹಿಂದೂ ಸಂಸ್ಕೃತಿಯ ಚರಿತ್ರೆ, ಇತಿಹಾಸವೇ ಬೇಕಾ ಎಂದು ಬಾಲಿವುಡ್ ಚಿತ್ರೋದ್ಯಮವನ್ನು ಖಾರವಾಗಿ ಪ್ರಶ್ನಿಸಿದೆ.

ಅಲ್ಲಾವುದ್ದೀನ್ ಖಿಲ್ಜಿ ಎನ್ನುವ ವ್ಯಕ್ತಿ ಹಿಂದೂಗಳಿಗೆ ಎಷ್ಟು ತೊಂದರೆಯನ್ನು ಕೊಟ್ಟಿದ್ದ ಎನ್ನುವುದು ಇತಿಹಾಸದಲ್ಲಿದೆ. ಹಾಗಿದ್ದಾಗ್ಯೂ, ಖಿಲ್ಜಿ ಮತ್ತು ಪದ್ಮಾವತಿ ನಡುವೆ ಚರಿತ್ರೆಯಲ್ಲಿ ಇಲ್ಲದೇ ಇರುವ ಪ್ರಣಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ರಜಪೂತ್ ಸಂಸ್ಕೃತಿಗೆ ಧಕ್ಕೆ ತರುವಂತಹ ಕೆಲಸವನ್ನು ಬನ್ಸಾಲಿ ಮಾಡಿದ್ದಾರೆ ಎಂದು ಜೈಪುರದ ಪ್ರಸಿದ್ಧ ಜೈಗಢ ಕೋಟೆಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಬನ್ಸಾಲಿ ಮೇಲೆ ಕಾರ್ಣಿ ಸೇನಾ ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದರು.

ಮೂರು ಖಾನ್ ಗಳನ್ನು ಸಂತೋಷಗೊಳಿಸುವುದಷ್ಟೇ ಬಾಲಿವುಡ್ ಚಿತ್ರೋದ್ಯಮದ ಸದ್ಯದ ಟ್ರೆಂಡ್, #ShameOnBollywood ಹ್ಯಾಷ್ ಟ್ಯಾಗ್ ನಲ್ಲಿನ ಕೆಲವೊಂದು ಟ್ವೀಟು ಸ್ಯಾಂಪಲ್ ಗಳು ಮುಂದೆ ಓದಿ..

ಬನ್ಸಾಲಿ ನಿರ್ದೇಶನದ ಪದ್ಮಾವತಿ

ಬನ್ಸಾಲಿ ನಿರ್ದೇಶನದ ಪದ್ಮಾವತಿ

ಬನ್ಸಾಲಿ ಪ್ರೊಡಕ್ಷನ್ ಬ್ಯಾನರಡಿಯಲಿ ನಿರ್ಮಾಣವಾಗುತ್ತಿರುವ ಪದ್ಮಾವತಿ ಸಿನಿಮಾವನ್ನು ಸಂಜನ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ರಾಣಿ ಪದ್ಮಿನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ರತನ್ ಸಿಂಗ್ ಪಾತ್ರದಲ್ಲಿ ಶಹೀದ್ ಕಪೂರ್, ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಚಿತ್ರದ ಇತರ ತಾರಾಗಣದಲ್ಲಿ ಅದಿತಿ ರಾವ್, ಆಸ್ ಮೊಹಮ್ಮದ್ ಅಬ್ಬಾಸಿ ಮುಂತಾದವರಿದ್ದಾರೆ.

ನಮ್ಮನ್ನು ದೂರಿಕೊಳ್ಳಬೇಕು

ನಮ್ಮ ಸಂಸ್ಕೃತಿಯನ್ನು ಅವಮಾನಿಸುವ ಚಿತ್ರ ಬಾಲಿವುಡ್ ನಿಂದ ಬರುತ್ತಿದ್ದರೂ, ನಾವು ಮರ್ಯಾದೆ ಇಲ್ಲದೇ ಇವರ ಸಿನಿಮಾ ನೋಡುತ್ತಿದ್ದೇವೆ.

ಶೇಮ್ ಆನ್ ಬಾಲಿವುಡ್

ಶೇಮ್ ಆನ್ ಬಾಲಿವುಡ್

ಹಿಂದೂ ಧರ್ಮವನ್ನು ಮತ್ತು ಚರಿತ್ರೆಯನ್ನು ನಾಶ ಮಾಡುವ ಸಿನಿಮಾ ಮಾಡಿ ಸಿನಿಮಾ ಮಾಡುವ ಬಾಲಿವುಡ್ ಚಿತ್ರೋದ್ಯಮಕ್ಕೆ ನಾಚಿಕೆಯಾಗಬೇಕು.

ಹಿಂದಿನ ಘಟನೆಗೆ ಹೋಲಿಕೆ

ಹಿಂದಿನ ಘಟನೆಗೆ ಹೋಲಿಕೆ

ಬಾಂಬ್ ಬ್ಲಾಸ್ಟಿಗೆ ಜಾತಿಯಿಲ್ಲ, ISIS ಉಗ್ರರು ತಲೆಕಡಿದರೆ ಅದಕ್ಕೆ ಜಾತಿಯಿಲ್ಲ, ಆದರೆ ಬನ್ಸಾಲಿಗೆ ಕಪಾಳಮೋಕ್ಷವಾದರೆ ಅದು ಹಿಂದೂ ಟೆರರಿಸಮ್.

ದಕ್ಷಿಣದ ಚಿತ್ರಗಳೇ ಬೆಟರ್

ದಕ್ಷಿಣದ ಚಿತ್ರಗಳೇ ಬೆಟರ್

ದಕ್ಷಿಣಭಾರತದ ಚಿತ್ರಗಳೇ ಬೆಟರ್, ಅಲ್ಲಿನ ಸಿನಿಮಾಗಳು ಕೊನೇ ಪಕ್ಷ ಹಿಂದೂ ಧರ್ಮವನ್ನು ಅವಮಾನಿಸುವುದಿಲ್ಲ.

ಹಿಂದೂ ತೀವ್ರಗಾಮಿಗಳು

ಹಿಂದೂ ತೀವ್ರಗಾಮಿಗಳು

ಹಿಂದೂಗಳು ಕಪಾಳಮೋಕ್ಷ ಮಾಡಿದರು, ಆದರೆ ಅದೇ ಮುಸ್ಲಿಮರಾದರೆ ತಲೆ ಕಡಿಯುತ್ತಿದ್ದರು.

ವಿವಾದಾತ್ಮಕ ಚಿತ್ರ

ವಿವಾದಾತ್ಮಕ ಚಿತ್ರ

ಬಾಲಿವುಡ್ ಸಿನಿಮಾಗಳು ಮುಸ್ಲಿಂ ಚರಿತ್ರೆಯನ್ನು ವಿಜೃಂಭಿಸುತ್ತವೆ, ಹಿಂದೂ ಚರಿತ್ರೆಯನ್ನಲ್ಲಾ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Director Sanjay Leelaa Bhansali manhandled during Padmavati shooting: Twitterites lambaste Bollywood industry through #ShameOnBollywood hashtag for insulting the Hindu history.
Please Wait while comments are loading...