ಹಿಮಾಚಲಪ್ರದೇಶದ ಈ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪಾಸಿಟಿವ್

ಮನಾಲಿ, ನವೆಂಬರ್ 20: ಹಿಮಾಚಲ ಪ್ರದೇಶದ ಥೋರಂಗ್ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಸೋಂಕು ತಗುಲಿದೆ.52 ವರ್ಷದ ಭೂಷಣ್ ಎಂಬುವವರನ್ನು ಹೊರತುಪಡಿಸಿ ಕೊರೊನಾ ಸೋಂಕು ಇಡೀ ಗ್ರಾಮಕ್ಕೆ ತಗುಲಿದೆ.

ಲಾಹೋಲ್ ಸ್ಪಿರಿಟ್ ವ್ಯಾಲಿ ಇದೀಗ ಹಿಮಾಚಲ ಪ್ರದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಜಿಲ್ಲೆ ಎಂದು ಕುಖ್ಯಾತಿ ಪಡೆದಿದೆ.ಇದೀಗ ಆ ಪ್ರದೇಶಕ್ಕೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ, ಸಂಪೂರ್ಣ ಕಣಿವೆಯನ್ನು ಕಂಟೈನ್ಮೆಂಟ್ ಝೋನ್‌ ಆಗಿ ಪರಿವರ್ತಿಸಲಾಗಿದೆ.

ಯಾರಿಗೂ ಆ ಹಳ್ಳಿಗೆ ಬರಲು ಅನುಮತಿ ಇಲ್ಲ ಎಂದು ತಿಳಿಸಲಾಗಿದೆ.ತೋರಂಗ್ ಸೇರಿದಂತೆ ಮನಾಲಿ ಲೇಹ್ ಹೈವೆಯಲ್ಲಿ 42 ಮಂದಿ ವಾಸವಾಗಿದ್ದಾರೆ ಎಲ್ಲರೂ ಚಳಿಗಾಲವೆಂದು ಕುಲ್ಲುವಿನಿಂದ ವಲಸೆ ಬಂದಿದ್ದಾರೆ.

 Himachal Pradesh : Entire Village In Lahaul Tests Positive For Covid-19

ಕೆಲವು ದಿನಗಳ ಹಿಂದೆ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆಗೊಳಗಾಗಬೇಕೆಂದು ತೀರ್ಮಾನಿಸಿ ಪರೀಕ್ಷೆ ಮಾಡಿಸಿದ್ದರು. ಬಳಿಕ ಎಲ್ಲರಿಗೂ ಕೊರೊನಾ ಪಾಸಿಟಿವ್ ಬಂದಿತ್ತು.

ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.ಸಾರ್ವಜನಿಕರವಾಗಿ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಜನರು ಈ ರೋಗವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಚಳಿಗಾಲವಾಗಿರುವುದರಿಂದ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ಭೂಷಣ್ ಹೇಳಿದ್ದಾರೆ. ಭೂಷಣ್ ಅವರ ಮನೆಯಲ್ಲಿ ಐವರಿಗೆ ಸೋಂಕು ತಗುಲಿದೆ.

ಕಳೆದ ಕೆಲವು ವಾರಗಳ ಹಿಂದೆ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿತ್ತು, ಅದಕ್ಕೆ ಊರಿನ ಪ್ರತಿಯೊಬ್ಬರು ಹಾಜರಾಗಿದ್ದರು. ಎಲ್ಲರಿಗೂ ಸೋಂಕು ತಗುಲಿದೆ. ಜಿಲ್ಲೆಯಲ್ಲಿ 856 ಮಂದಿಗೆ ಸೋಂಕು ತಗುಲಿದೆ.

ಅಕ್ಟೋಬರ್ 28 ರಂದು ರಾಂಗ್ರಿಕ್‌ನಲ್ಲಿ ವಾಸಿಸುವ 39 ನಿವಾಸಿಗಳಿಗೆ ಸೋಂಕು ತಗುಲಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+