ಹಿಮಾಚಲ ಪ್ರದೇಶ: ಕಾಂಗ್ರೆಸಿನಿಂದ 59 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಶಿಮ್ಲಾ, ಅಕ್ಟೋಬರ್ 19: ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಿಗೆ ಹಿಮಾಚಲ ಪ್ರದೇಶ ರಾಜಕೀಯದಲ್ಲಿ ರಂಗು ಕಂಡು ಬಂದಿದೆ. ಬುಧವಾರವಷ್ಟೇ ಬಿಜೆಪಿ 68 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು, ಇದೀಗ ಆಡಳಿತರೂಢ ಕಾಂಗ್ರೆಸ್ 59 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿಶೇಷವೆಂದರೆ ಮುಖ್ಯಮಂತ್ರಿ ವೀರಭದ್ರ ಸಿಂಗ್ ತಮ್ಮ ಕ್ಷೇತ್ರವನ್ನು ಶಿಮ್ಲಾ ಗ್ರಾಮೀಣದಿಂದ ಸೋಲನ್ ಜಿಲ್ಲೆಯ ಅರ್ಕಿಗೆ ಬದಲಾಯಿಸಿದ್ದಾರೆ. ಶಿಮ್ಲಾ ಗ್ರಾಮೀಣ ಸ್ಥಾನಕ್ಕೆ ಇನ್ನೂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿಲ್ಲ. ಅಲ್ಲಿ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.

Himachal Pradesh Elections 2017: Congress announces list of 59 candidates

ಪಂಜಾಬ್ ಉಸ್ತುವಾರಿ ಹೊಣೆ ಹೊತ್ತಿರುವ ಶಾಸಕಿ ಆಶಾ ಕುಮಾರಿ, ಜಿಎಸ್ ಬಾಲಿ, ಮಾಜಿ ರಾಜ್ಯಸಭಾ ಸದಸ್ಯ ವಿಪ್ಲೋವ್ ಠಾಕುರ್ ಕಣಕ್ಕಿಳಿಯಲಿರುವ ಇತರ ಅಭ್ಯರ್ಥಿಗಳಾಗಿದ್ದಾರೆ.

ಇನ್ನು ಮುಖ್ಯಮಂತ್ರಿಗಳ ಜತೆ ಶೀತಲ ಸಮರದಲ್ಲಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ವೀರಭದ್ರ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಇದೇ ನವೆಂಬರ್ 9ರಂದು ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Close on the heels of the BJP announcing its list for the Himachal Pradesh Assembly Elections 2017, the Congress released a list of 59 candidates.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ