Himachal Pradesh Election 2022 Winners : 40 ಸ್ಥಾನ ಪಡೆದು ಗೆದ್ದ ಬೀಗಿದ ಕಾಂಗ್ರೆಸ್: ECI
ಬೆಂಗಳೂರು, ಡಿಸೆಂಬರ್ 08: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಭಾರಿ ಪೈಪೋಟಿಗೆ ಕಾರಣವಾಗಿದ್ದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಒಟ್ಟು 68 ವಿಧಾನಸಭೆ ಕ್ಷೇತ್ರಗಳಲ್ಲಿ 40ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.
ಇತ್ತ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಒಡ್ಡಿದ್ದ ಬಿಜೆಪಿ ಕಡಿಮೆ ಅಂತರ ಅಂದರೆ 25ಕ್ಷೇತ್ರಗಳಲ್ಲಿ ಜಯ ಸಾಧಿಸಿ ಪರಾಭವಗೊಂಡಿದೆ ಎಂದು ಭಾರತೀಯ ಚುನಾವಣೆ ಆಯೋಗ ಅಧಿಕೃತಿವಾಗಿ ತಿಳಿಸಿದೆ.
ಹಿಮಾಚಲಯ ಪ್ರದೇಶದಲ್ಲಿ ಬಿಜೆಪಿ ಸೋಲಾಗಿದ್ದರು ಸಹ ಪ್ರಧಾನಿ ನರೇಂದ್ರ ಮೋದಿ ಅವರು, ಇಲ್ಲಿನ ಜನರು ಬಿಜೆಪಿಯನ್ನು ಗೆಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಆಗಿಲ್ಲ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದ್ದೇವೆ ಎಂದಿದ್ದಾರೆ.

ಉಳಿದಂತೆ ಮೂರು ವಿಧಾನಸಭೆ ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳಿಗೆ ಪಾಲಾಗಿವೆ. ಗುಜರಾತಿನಲ್ಲಿ 17ಸ್ಥಾನ ಹೊಂದುವ ಮೂಲಕ ತೀವ್ರ ಹಿನ್ನೆಡೆ ಅನುಭವಿಸಿದ ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಸಂಭ್ರಮಾಚರಣೆ ನಡೆಸಿದೆ. ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಪರಸ್ಪರ ಭಾರಿ ಪೈಪೊಟಿ ಎದುರಿಸಿವೆ. ಮತ ಎಣಿಕೆ ವೇಳೆ ಗುರುವಾರ ಮಧ್ಯಾಹ್ನದ ನಂತರ ಒಂದೇ ಒಂದೇ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು ಗೋಚರಿಸುತ್ತಿದ್ದಂತೆ ಕೈ ನಾಯಕರು ಮೊಗದಲ್ಲಿ ಮಂದಹಾಸ ಮೂಡಿತ್ತು. ಪರಿಸ್ಪರ ಅಭಿನಂದನೆ ಹಂಚಿಕೊಂಡರು.












Click it and Unblock the Notifications