ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಚುನಾವಣೆ: ಫಲಿತಾಂಶಕ್ಕೂ ಮುನ್ನ ಇವಿಎಂ ಕಳ್ಳತನ- ಬಿಜೆಪಿ ವಿರುದ್ಧ ಆರೋಪ

|
Google Oneindia Kannada News

ಶಿಮ್ಲಾ ನವೆಂಬರ್ 28: 'ಇವಿಎಂಗಳನ್ನು ಟ್ಯಾಂಪರಿಂಗ್ ಮಾಡದೆ ಬಿಜೆಪಿ ಒಂದೇ ಒಂದು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ' ಎಂಬ ಸಂದೇಶದೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಮುಗಿದಿದ್ದು ಫಲಿತಾಂಶ ಇನ್ನೇನು ಪ್ರಕಟವಾಗಬೇಕಿದೆ. ಅದಾಗಲೇ ಇವಿಎಂ ಕಳ್ಳತನದ ಆರೋಪಗಳು ಕೇಳಿ ಬಂದಿವೆ. ಹಿಮಾಚಲ ಪ್ರದೇಶದ ಹಲವು ಖಾಸಗಿ ವಾಹನಗಳಲ್ಲಿ ಅಕ್ರಮವಾಗಿ ಇವಿಎಂ ವಾರ್ಗಾವಣೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸಾಧನೆ ಶೂನ್ಯ: ಹುಬ್ಬಳ್ಳಿಯಲ್ಲಿ ವಿ.ಎಸ್ ಉಗ್ರಪ್ಪ ಆಕ್ರೋಶರಾಜ್ಯದಲ್ಲಿ ಬಿಜೆಪಿ ಸಾಧನೆ ಶೂನ್ಯ: ಹುಬ್ಬಳ್ಳಿಯಲ್ಲಿ ವಿ.ಎಸ್ ಉಗ್ರಪ್ಪ ಆಕ್ರೋಶ

ಹಂಚಿಕೊಳ್ಳಲಾದ ಫೋಟೋದಲ್ಲಿ ವಾಹನದ HP03D2023 ನಂಬರ್ ಪ್ಲೇಟ್ ಹಾಗೂ ಇವಿಎಂ ಇರುವ ದೃಶ್ಯವಿದೆ. ಫೋಟೋದ ಕೆಳ ಭಾಗದಲ್ಲಿ 'ಇವಿಎಂಗಳನ್ನು ಅನ್ನು ಟ್ಯಾಂಪರಿಂಗ್ ಮಾಡದೆ ಬಿಜೆಪಿ ಒಂದೇ ಒಂದು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ' ಎಂದು ಬರೆಯಲಾಗಿದೆ. ನವೆಂಬರ್ 27ರ ಸಂಜೆ ಈ ಫೋಟೋವನ್ನು ಶೇರ್ ಮಾಡಲಾಗಿದೆ.

Himachal Pradesh Election: Allegation of EVM theft

ರವಿಂದ್ರ ಕುಮಾರ್ ಎಂಬ ಹೆಸರಿನ ಟ್ವೀಟ್ ಖಾತೆಯಲ್ಲಿ ಫೋಟೋವೊಂದು ಹಂಚಿಕೊಂಡು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವುದು ಕಾಣಬಹುದು.

ದೇಶದೆಲ್ಲೆಡೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಟ್ಯಾಂಪರಿಂಗ್ ವಿಚಾರ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಚುನಾವಣಾ ಆಯೋಗ ವಿವಿಪ್ಯಾಟ್ ಒಳಗೊಂಡ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳ ಬಳಕೆ ಆರಂಭಿಸಿದೆ. ಆದರೂ ಕೂಡ ಟ್ಯಾಂಪರಿಂಗ್ ಬಗ್ಗೆ ಹಲವೆಡೆ ಸುದ್ದಿಗಳು ಕೇಳಿ ಬರುತ್ತಿವೆ. ನವೆಂಬರ್ 12ರಂದು ಒಂದೇ ಹಂತದಲ್ಲಿ ಹಿಮಾಚಲ ಪ್ರದೇಶದಲ್ಲಿ ಮತದಾನ ನಡೆದಿದೆ. ಡಿಸೆಂಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

English summary
Himachal Pradesh assembly elections are over and before the results, there have been allegations of EVM theft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X