ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 12: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ (ಅಕ್ಟೋಬರ್ 12) ಪ್ರಕಟಿಸಿದೆ. ನವೆಂಬರ್ 9ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

'ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಮುಂದಿನ ವಾರದಲ್ಲಿ ಪ್ರಕಟಿಸುತ್ತೇವೆ. ಡಿಸೆಂಬರ್ ತಿಂಗಳಿನೊಳಗೆ ಚುನಾವಣೆ ನಡೆಯಲಿದೆ ಈ ಬಗ್ಗೆ ಸಂಶಯಬೇಡ' ಎಂದು ಮುಖ್ಯ ಚುನಾವಣಾಧಿಕಾರಿ ಎ.ಕೆ ಜ್ಯೋತಿ ಅವರು ಹೇಳಿದರು.

Election dates for Gujarat, Himachal Assemblies announced

ಮುಖ್ಯ ಚುನಾವಣಾಧಿಕಾರಿ ಎ.ಕೆ ಜ್ಯೋತಿ ಅವರು ಸುದ್ದಿಗೋಷ್ಠಿ ನಡೆಸಿ, ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆ ಚುನಾವಣೆ ದಿನಾಂಕ ಘೋಷಿಸಿದರು.

* ಹಿಮಾಚಲಪ್ರದೇಶದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ವಿವಿಪ್ಯಾಟ್ ಬಳಕೆ.

Election dates for Himachal Assemblies announced

ಅಕ್ಟೋಬರ್ 16 : ಚುನಾವಣಾಧಿಸೂಚನೆ ಪ್ರಕಟ
ಅಕ್ಟೋಬರ್ 23: ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ
ಅಕ್ಟೋಬರ್ 24: ನಾಮಪತ್ರ ಪರಿಶೀಲನೆ
ಅಕ್ಟೋಬರ್ 26: ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ.

ನವೆಂಬರ್ 9 (ಗುರುವಾರ): ಮತದಾನ
ಡಿಸೆಂಬರ್ 18 (ಭಾನುವಾರ): ಮತ ಎಣಿಕೆ
ಡಿಸೆಂಬರ್ 20 : ಚುನಾವಣಾ ಪ್ರಕ್ರಿಯೆ ಅಂತ್ಯ.

* ಮತದಾನಕ್ಕೆ ಭಾವಚಿತ್ರವಿರುವ ಗುರುತಿನ ಚೀಟಿ ಕಡ್ಡಾಯ.

* ಹಿಮಾಚಲ ಪ್ರದೇಶದಲ್ಲಿ 7521 ಮತಗಟ್ಟೆಗಳ ಸ್ಥಾಪನೆ.

* ಚುನಾವಣಾ ನೀತಿ ಸಂಹಿತೆ ಈ ಕ್ಷಣದಿಂದಲೆ ಜಾರಿಗೆ ಬರಲಿದೆ.

* ಎಲ್ಲಾ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಸೂಚನೆ.

* ಹಿಮಾಚಲಪ್ರದೇಶದ ಅಭ್ಯರ್ಥಿಗೆ ಚುನಾವಣಾ ಖರ್ಚು ವೆಚ್ಚ 28 ಲಕ್ಷ ರು ಮಿತಿ.

ಹಿಮಾಚಲಪ್ರದೇಶ ವಿಧಾನಸಭೆಯು 68 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಹಾಲಿ ವಿಧಾನಸಭೆಯ ಅವಧಿ 2018ರ ಜನವರಿ 7ಕ್ಕೆ ಅಂತ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission on Thursday announced the dates for Assembly elections in Himachal Pradesh. The announcement was made by the Chief Election Commissioner AK Jyoti. The dates for Assembly elections in Gujarat will be announced later.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ