Get Updates
Get notified of breaking news, exclusive insights, and must-see stories!

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022: ಮತದಾನದ ಸಮಯ, ಅಭ್ಯರ್ಥಿಗಳು, ಕ್ಷೇತ್ರಗಳ ಮಾಹಿತಿ

ಹಿಮಾಚಲ ವಿಧಾನಸಭಾ ಚುನಾವಣೆ 2022: ಹಿಮಾಚಲ ಪ್ರದೇಶದಲ್ಲಿ ಶನಿವಾರ ನವೆಂಬರ್ 12 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭೆ ಚುನಾವಣೆಯ ಪ್ರಚಾರ ಗುರುವಾರ (ನವೆಂಬರ್ 10) ಕೊನೆಗೊಂಡಿತು. ಈಗ ಎಲ್ಲರ ಚಿತ್ತ ಮತ ಯಂತ್ರಗಳತ್ತ ನೆಟ್ಟಿದೆ. ಇದರಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಎಎಪಿ ಮತ್ತು ಇತರ ಪಕ್ಷಗಳ ಭವಿಷ್ಯ ಸೇರಿಕೊಳ್ಳಲಿದೆ.

ಹಿಮಾಚಲ ಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಎಎಪಿ ಹಿಮಾಚಲದಲ್ಲಿ ಗೆಲುವಿನ ಕದ ತಟ್ಟಲು ತೀವ್ರ ಪೈಪೋಟಿಗಿಳಿದಿವೆ. ಆಡಳಿತ ಪಕ್ಷದಿಂದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಭರ್ಜರಿ ಪ್ರಚಾರ ಮಾಡಿದರು. ಇನ್ನೂ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಸ್ತುತ ಭಾರತ್ ಜೋಡೋ ಯಾತ್ರೆಯಲ್ಲಿರುವ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಪ್ರಚಾರವನ್ನು ಮುನ್ನಡೆಸಿದರು. ಜೊತೆಗೆ ಎಎಪಿಯನ್ನು ಅದರ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಮುನ್ನಡೆಸಿದರು.

ಕಣದಲ್ಲಿರುವ ಪ್ರಮುಖ ಪಕ್ಷಗಳು

ಕಣದಲ್ಲಿರುವ ಪ್ರಮುಖ ಪಕ್ಷಗಳು

ಶನಿವಾರ (ನವೆಂಬರ್ 12) ಬೆಳಗ್ಗೆ 8 ಗಂಟೆಗೆ ಹಿಮಾಚಲದಲ್ಲಿ ಮತದಾನ ಆರಂಭವಾಗಲಿದ್ದು ಸಂಜೆ 5.30ರವರೆಗೆ ನಡೆಯಲಿದೆ. ಇನ್ನೂ ಕಣದಲ್ಲಿರುವ ಪ್ರಮುಖ ಪಕ್ಷಗಳ ಬಗ್ಗೆ ತಿಳಿಯೋಣ. ಹಿಮಾಚಲ ಪ್ರದೇಶ ಇಲ್ಲಿಯವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯನ್ನು ಕಂಡಿದೆ. ಆದರೆ ಈ ಬಾರಿ ಎಎಪಿ ಪ್ರವೇಶದಿಂದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರಗೊಳ್ಳಬಹುದು. ಈ ಮೂರು ಪಕ್ಷಗಳ ಹೊರತಾಗಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ರಾಷ್ಟ್ರೀಯ ದೇವಭೂಮಿ ಪಕ್ಷ (ಆರ್‌ಡಿಪಿ) ಚುನಾವಣೆಯಲ್ಲಿ ಸ್ಪರ್ಧಿಸುವ ಇತರ ಪಕ್ಷಗಳು. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಎಲ್ಲಾ 68 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಸಿಪಿಐಎಂ 11, ಸಿಪಿಐ 1, ಬಿಎಸ್‌ಪಿ 53 ಮತ್ತು ಆರ್‌ಡಿಪಿ 29 ರಲ್ಲಿ ಸ್ಪರ್ಧಿಸುತ್ತಿವೆ.

ಬಿಜೆಪಿಗೆ ಜಯ ಎಂದು ಭವಿಷ್ಯ ನುಡಿದ ಸಮೀಕ್ಷೆಗಳು

ಬಿಜೆಪಿಗೆ ಜಯ ಎಂದು ಭವಿಷ್ಯ ನುಡಿದ ಸಮೀಕ್ಷೆಗಳು

ಬಿಜೆಪಿ: 44

ಕಾಂಗ್ರೆಸ್: 21

ಸ್ವತಂತ್ರರು: 2

ಸಿಪಿಐಎಂ: 1

ಬಿಜೆಪಿಯು ಸುಮಾರು 49 ರಷ್ಟು ಮತಗಳೊಂದಿಗೆ 44 ಸ್ಥಾನಗಳನ್ನು ಪಡೆಯುವ ಮೂಲಕ ಆಗಿನ ಆಡಳಿತಾರೂಢ ಕಾಂಗ್ರೆಸ್ ಅನ್ನು ಸೋಲಿಸಿತು. ಮತ್ತೊಂದೆಡೆ, ಕಾಂಗ್ರೆಸ್ 68 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳಲ್ಲಿ ಸುಮಾರು 42 ರಷ್ಟು ಮತಗಳನ್ನು ಗಳಿಸಿತು. ಎಎಪಿ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್ ತನ್ನ ಮತ ಹಂಚಿಕೆಯಲ್ಲಿ ಈ ಹಿಂದಿನ ಅವಧಿಯಲ್ಲಿ ಪಡೆದಿದ್ದಕ್ಕಿಂತ 1 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ ಆದರೆ ಬಿಜೆಪಿ 10 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ.

ಬಹುಪಾಲು ಸಮೀಕ್ಷೆಗಳು 31 ರಿಂದ 46 ಸ್ಥಾನಗಳೊಂದಿಗೆ ಬಿಜೆಪಿಗೆ ಬಹುಮತವನ್ನು ಊಹಿಸಿವೆ. ನವೆಂಬರ್ 9 ರಂದು ಪ್ರಕಟವಾದ ಎಬಿಪಿ ನ್ಯೂಸ್-ಸಿವೋಟರ್ ಇತ್ತೀಚಿನ ಸಮೀಕ್ಷೆಯು ಬಿಜೆಪಿಗೆ 31 ರಿಂದ 39 ಸ್ಥಾನಗಳು, ಕಾಂಗ್ರೆಸ್‌ಗೆ 29 ರಿಂದ 37 ಮತ್ತು ಎಎಪಿಗೆ 1 ಸ್ಥಾನ ಸಿಗಬಹುದು ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಟಿವಿ-ಮ್ಯಾಟ್ರಿಜ್ ಸಮೀಕ್ಷೆಯು ಬಿಜೆಪಿಗೆ 41 ಮತ್ತು ಕಾಂಗ್ರೆಸ್‌ಗೆ 25 ಸ್ಥಾನಗಳು ಸಿಗುವ ಭವಿಷ್ಯ ನುಡಿದಿದೆ. ಎಬಿಪಿಯ ಆರಂಭಿಕ ಎರಡು ಸಮೀಕ್ಷೆಗಳು ಆಡಳಿತ ಪಕ್ಷಕ್ಕೆ (ಬಿಜೆಪಿ) 37 ರಿಂದ 46 ರವರೆಗಿನ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ನೀಡಿವೆ.

ಹಿಮಾಚಲ ಚುನಾವಣೆಯ ಪ್ರಮುಖ ನಾಯಕರು ಯಾರು?

ಹಿಮಾಚಲ ಚುನಾವಣೆಯ ಪ್ರಮುಖ ನಾಯಕರು ಯಾರು?

ಬಿಜೆಪಿಯಿಂದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಕಾಂಗ್ರೆಸ್‌ನ ಮುಖೇಶ್ ಅಗ್ನಿಹೋತ್ರಿ ವಿರುದ್ಧ ತೀವ್ರ ಪೈಪೋಟಿ ನಡೆಯಲಿದೆ. ಪ್ರಮುಖ ಸ್ಥಾನಗಳಲ್ಲಿ ಸೇರಾಜ್, ಹರೋಲಿ, ಮಂಡಿ, ಶಿಮ್ಲಾ ಗ್ರಾಮಾಂತರ ಮತ್ತು ಹಮೀರ್‌ಪುರ ಸೇರಿವೆ. ಬಿಜೆಪಿಯ ಹಾಲಿ ಮುಖ್ಯಮಂತ್ರಿ ಸೇರಾಜೆಯಿಂದ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಅಗ್ನಿಹೋತ್ರಿ ಹರೋಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಮಾಜಿ ಸಿಎಂ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಶಿಮ್ಲಾ ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಮೀರ್‌ಪುರ ಮತ್ತೊಂದು ಪ್ರಮುಖ ಸ್ಥಾನವಾಗಿದ್ದು, ಇದು 1998 ರಿಂದ ಬಿಜೆಪಿಯೊಂದಿಗೆ ಇರುವ ಹಮೀರ್ ಪುರ್ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಮೀರ್‌ಪುರದ ಹಾಲಿ ಸಂಸದರಾಗಿದ್ದಾರೆ.ಹಿಮಾಚಲ ಚುನಾವಣೆ 2022: ಪ್ರಮುಖ ಕ್ಷೇತ್ರಗಳು

ಸೇರಾಜ್: ಜೈ ರಾಮ್ ಠಾಕೂರ್ (ಬಿಜೆಪಿ) ಮತ್ತು ಚೇತ್ರಮ್ ಠಾಕೂರ್ (ಕಾಂಗ್ರೆಸ್) ಹಾಗೂ ಗೀತಾ ನಂದ್ ಠಾಕೂರ್ (ಎಎಪಿ) ನಡುವೆ ಸ್ಪರ್ಧೆ ಇದೆ.

ಹರೋಲಿ:ರಾಮಕುಮಾರ್ (ಬಿಜೆಪಿ) ವಿರುದ್ಧ ಮುಖೇಶ್ ಅಗ್ನಿಹೋತ್ರಿ (ಕಾಂಗ್ರೆಸ್) ವಿರುದ್ಧ ರವೀಂದರ್ ಪಾಲ್ ಸಿಂಗ್ ಮಾನ್ (ಎಎಪಿ)

ಶಿಮ್ಲಾ ಗ್ರಾಮಾಂತರ: ರವಿ ಮೆಹ್ತಾ (ಬಿಜೆಪಿ) ವಿರುದ್ಧ ವಿಕ್ರಮಾದಿತ್ಯ ಸಿಂಗ್ (ಕಾಂಗ್ರೆಸ್) ವಿರುದ್ಧ ಪ್ರೇಮ್ ಠಾಕೂರ್ (ಎಎಪಿ)

ಮಂಡಿ: ಅನಿಲ್ ಶರ್ಮಾ (ಬಿಜೆಪಿ) ವಿರುದ್ಧ ಚಂಪಾ ಠಾಕೂರ್ (ಕಾಂಗ್ರೆಸ್) ವಿರುದ್ಧ ಶ್ಯಾಮ್ ಲಾಲ್ (ಎಎಪಿ)

ಹಮೀರ್‌ಪುರ: ನರಿಂದರ್ ಠಾಕೂರ್ (ಬಿಜೆಪಿ) ವಿರುದ್ಧ ಪುಷ್ಪೇಂದ್ರ ವರ್ಮಾ (ಕಾಂಗ್ರೆಸ್) ವಿರುದ್ಧ ಶುಶೀಲ್ ಕುಮಾರ್ ಸುರೋಚ್ (ಎಎಪಿ) ಸ್ಪರ್ಧೆ ನಡೆಯಲಿದೆ.

ಮತದಾನ ಕೇಂದ್ರಗಳಲ್ಲಿ ಯಾವ ದಾಖಲೆಗಳು ಅಗತ್ಯ

ಮತದಾನ ಕೇಂದ್ರಗಳಲ್ಲಿ ಯಾವ ದಾಖಲೆಗಳು ಅಗತ್ಯ

ಹಿಮಾಚಲದಲ್ಲಿ ಒಟ್ಟು 55,74,793 ಮತದಾರರಿದ್ದಾರೆ. ಇವರಲ್ಲಿ 55,07,261 ಸಾಮಾನ್ಯ ಮತದಾರರಿದ್ದರೆ, 67,532 ಸೇವಾ ಮತದಾರರಿದ್ದಾರೆ. ಅಲ್ಲದೆ, 1ನೇ ಜನವರಿ 2022 ಮತ್ತು 1 ಅಕ್ಟೋಬರ್ 2022 ರ ನಡುವೆ 18 ವರ್ಷ ವಯಸ್ಸನ್ನು ತಲುಪಿದ 43,173 ಯುವ ಮತದಾರರಿದ್ದಾರೆ.

ಮತದಾನ ಕೇಂದ್ರದಲ್ಲಿ ಮತದಾರರನ್ನು ಗುರುತಿಸಲು, ಒಬ್ಬ ವ್ಯಕ್ತಿಯು ತನ್ನ EPIC ಅಥವಾ ಕೆಳಗೆ ಪಟ್ಟಿ ಮಾಡಲಾದ ಯಾವುದೇ ಗುರುತಿನ ದಾಖಲೆಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ.

*ಆಧಾರ್ ಕಾರ್ಡ್

*MNREGA ಜಾಬ್ ಕಾರ್ಡ್

*ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು

*ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್

*ಚಾಲನಾ ಪರವಾನಿಗೆ

*PAN ಕಾರ್ಡ್

*NPR (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್

*ಭಾರತೀಯ ಪಾಸ್ಪೋರ್ಟ್

*ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ

*ಕೇಂದ್ರ/ರಾಜ್ಯ ಸರ್ಕಾರ/ಪಿಎಸ್‌ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರಗಳೊಂದಿಗೆ ಸೇವಾ ಐ-ಕಾರ್ಡ್‌ಗಳು

*ಸಂಸದರು/ಶಾಸಕರು/ಎಂಎಲ್‌ಸಿಗಳಿಗೆ ನೀಡಲಾದ ಐ-ಕಾರ್ಡ್‌ಗಳು

*ವಿಶಿಷ್ಟ ಅಂಗವೈಕಲ್ಯ ID (UDID) ಕಾರ್ಡ್

ಮತದಾನ ಕೇಂದ್ರ

ಒಂದು ಮತಗಟ್ಟೆಯಲ್ಲಿ ಗರಿಷ್ಠ 1500 ಮತದಾರರನ್ನು ಇಸಿ ನಿಗದಿಪಡಿಸಿದೆ. ಈ ಬಾರಿ ಆಯೋಗವು ರಾಜ್ಯದಲ್ಲಿ 7,881 ಮತಗಟ್ಟೆಗಳನ್ನು ಸ್ಥಾಪಿಸಿದೆ. ಡಿಸೆಂಬರ್ 8 ರಂದು ಗುಜರಾತ್ ಜೊತೆಗೆ ಹಿಮಾಚಲ ಪ್ರದೇಶದ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+