Get Updates
Get notified of breaking news, exclusive insights, and must-see stories!

Hijab ban: ಶ್ರೀನಗರದ ಹಿಂದೂ ಶಾಲೆಯಲ್ಲಿ ಹಿಜಾಬ್‌ ನಿಷೇಧ: ಬಾಲಕಿಯರ ಪ್ರತಿಭಟನೆ

ಶ್ರೀನಗರ, ಜೂನ್‌ 9: ಇಲ್ಲಿನ ವಿಶ್ವ ಭಾರತಿ ಹೈಯರ್ ಸೆಕೆಂಡರಿ ಶಾಲೆಯ ಕೆಲವು ವಿದ್ಯಾರ್ಥಿನಿಯರು 'ಅಬಯಾ'(ಬುರ್ಖಾ, ಪೂರ್ಣ ನಿಲುವಂಗಿ) ಧರಿಸಿದ್ದಕ್ಕಾಗಿ ಸಂಸ್ಥೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದು ಕಾಶ್ಮೀರದಲ್ಲಿ ಈಗ ದೊಡ್ಡ ವಿವಾದ ಭುಗಿಲೆದ್ದಿದೆ.

ಅಬಯಾ ಎಂಬುದು ಸಡಿಲವಾದ, ಪೂರ್ಣ-ಉದ್ದದ ನಿಲುವಂಗಿಯಾಗಿದ್ದು, ಇದನ್ನು ಮುಸ್ಲಿಂ ಮಹಿಳೆಯರು ಧರಿಸುತ್ತಾರೆ. ವಿಶ್ವ ಭಾರತಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯನಿರಿಗೆ 'ಅಬಯ' ಧರಿಸಿ ಶಾಲೆಯ ಆವರಣಕ್ಕೆ ಪ್ರವೇಶಿಸದಂತೆ ಪ್ರಾಂಶುಪಾಲರು ತಿಳಿಸಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.

Hijab ban in Srinagar

ನಾವು ಅಬಯಾವನ್ನು ಧರಿಸಲು ಬಯಸಿದ್ದೇ ಆದರೆ ನಾವು ಮದ್ರಸಾಕ್ಕೆ (ಸಾಮಾನ್ಯವಾಗಿ ಮಸೀದಿಯ ಭಾಗವಾಗಿರುವ ಮುಸ್ಲಿಂ ಶಿಕ್ಷಣ ಸಂಸ್ಥೆ) ಹೋಗಬೇಕೆಂದು ನಮಗೆ ಹೇಳಲಾಗುತ್ತಿದ್ದು, ನಮ್ಮನ್ನು ಶಾಲೆಯೊಳಗೆ ಬಿಡುತ್ತಿಲ್ಲ. ಶಾಲಾ ಆಡಳಿತ ಮಂಡಳಿಯು ಅಬಯ ಧರಿಸಿ ಶಾಲೆಯ ವಾತಾವರಣವನ್ನು ಹಾಳುಮಾಡುತ್ತಿದೆ ಎನ್ನುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು.

ವಿಶ್ ಭಾರತಿ ಶಾಲೆಯಲ್ಲಿ ಅಬಯಾ ನಿಷೇಧದ ಬಗ್ಗೆ ಸುದ್ದಿ ಹರಡಿದ ತಕ್ಷಣ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಕಾಶ್ಮೀರದಲ್ಲಿ ಸಹಜವಾಗಿ ವಿವಾದವನ್ನು ಹುಟ್ಟುಹಾಕಿತು. ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇದು ಸಂವಿಧಾನವು ಖಾತರಿಪಡಿಸುವ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ಗಾಂಧಿಯವರ ಭಾರತವನ್ನು ಗೋಡ್ಸೆಯ ಭಾರತವನ್ನಾಗಿ ಬದಲಾಯಿಸುವ ಬಿಜೆಪಿಯ ಯೋಜನೆಗಳಿಗೆ ಜಮ್ಮು ಮತ್ತು ಕಾಶ್ಮೀರವು ಪ್ರಯೋಗಾಲಯವಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಕರ್ನಾಟಕದಲ್ಲಿ ಹಿಜಾಬ್ ವಿಷಯವನ್ನು ಉಲ್ಲೇಖಿಸಿದ ಮುಫ್ತಿ, ಈಗ ನಾವು ಕಾಶ್ಮೀರದಲ್ಲಿಯೂ ಇದು ನಡೆಯುವುದನ್ನು ನಾವು ನೋಡುತ್ತಿದ್ದೇವೆ. ನಾವು ಇದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಈ ಘಟನೆಗೆ ಬಲವಾದ ಪ್ರತಿಕ್ರಿಯೆ ಇರುತ್ತದೆ. ನಿಷೇಧ ಆದೇಶವು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು, ಇದನ್ನು ಸಹಿಸಲಾಗುವುದಿಲ್ಲ ಎಂದರು.

Hijab ban in Srinagar

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯ ವಕ್ತಾರ ತನ್ವೀರ್ ಸಾದಿಕ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಹಿಜಾಬ್ ಧರಿಸುವುದು ವೈಯಕ್ತಿಕ ಆಯ್ಕೆಯಾಗಿರಬೇಕು ಮತ್ತು ಧಾರ್ಮಿಕ ಉಡುಪಿನ ವಿಷಯಗಳಲ್ಲಿ ಯಾವುದೇ ಹಸ್ತಕ್ಷೇಪ ಇರಬಾರದು. ಮುಸ್ಲಿಂ ಬಹುಸಂಖ್ಯಾತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ಘಟನೆಗಳಿಗೆ ಸಾಕ್ಷಿಯಾಗುವುದು ದುರದೃಷ್ಟಕರ. ಹಿಜಾಬ್‌ಗಳನ್ನು ತೆಗೆದುಹಾಕಲು ಒತ್ತಾಯಿಸುವ ಶಾಲಾ ಆಡಳಿತವು ಸ್ವೀಕಾರಾರ್ಹವಲ್ಲ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ ಮತ್ತು ತಕ್ಷಣದ ತಿದ್ದುಪಡಿ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ಮಧ್ಯಾಹ್ನದ ನಂತರ, ಶಾಲಾ ಆಡಳಿತವು ಅಬಯ ಮೇಲೆ ಯಾವುದೇ ನಿಷೇಧ ಹೇರಿಲ್ಲ, ಸಮಸ್ಯೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಅಬಯಾವನ್ನು ಧರಿಸದಂತೆ ನಿರ್ದೇಶನ ನೀಡಲಾಗಿಲ್ಲ. ಅದು ಸಂಪೂರ್ಣವಾಗಿ ಆಧಾರರಹಿತ. ಶಾಲಾ ಆಡಳಿತ ಮಂಡಳಿಯು ಡ್ರೆಸ್ ಕೋಡ್‌ಗೆ ಅನುಗುಣವಾಗಿ ಸಮಾಜದ ಎಲ್ಲಾ ವರ್ಗಗಳ ಭಾವನೆಗಳನ್ನು ಯಾವಾಗಲೂ ಗೌರವಿಸುತ್ತದೆ ಎಂದು ಶಾಲೆಯ ಪ್ರಾಂಶುಪಾಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಅಬಯಾ ಧರಿಸಲು ಯಾವುದೇ ನಿಷೇಧವನ್ನು ವಿಧಿಸಲಾಗಿಲ್ಲ, ಆದರೆ ಅಬಯಾ ಅಡಿಯಲ್ಲಿ ಶಾಲಾ ಸಮವಸ್ತ್ರವನ್ನು ಧರಿಸಲು ವಿದ್ಯಾರ್ಥಿಗಳಿಗೆ ನಯವಾಗಿ ತಿಳಿಸಲಾಗಿದೆ. ಅದೇ ವೇಳೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರ ಭಾವನೆಗಳನ್ನು ನೋಯಿಸಿದರೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+