ಕಾಂಗ್ರೆಸ್ ಒಂದು ಗೆದ್ದಲು ಹುಳ, ಹೊಸಕಿ ಹಾಕಿ : ಮೋದಿ

Posted By:
Subscribe to Oneindia Kannada

ಊನಾ(ಹಿಮಾಚಲ ಪ್ರದೇಶ), ನವೆಂಬರ್ 05: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಊನಾ, ಪಲಂಪುರ್, ಕುಲ್ಲುವಿನಲ್ಲಿ ಭಾಷಣ ಮಾಡುತ್ತಿದ್ದಾರೆ. 'ಕಾಂಗ್ರೆಸ್ ಪಕ್ಷವನ್ನು ಗೆದ್ದಲು ಹುಳುವಿಗೆ ಹೋಲಿಸಿದ ಮೋದಿ, ಹುಳುವನ್ನು ಹೊಸಕಿ ಹಾಕಿ ಎಂದು ಮತದಾರರಿಗೆ ಕರೆ ನೀಡಿದರು.

ಉನಾದಲ್ಲಿನ ಸಮಾವೇಶದಲ್ಲಿ ಮಾತನಾಡಿದ ಮೋದಿ, ಯುದ್ಧ ಭೂಮಿಯಿಂದ ಕಾಂಗ್ರೆಸ್ ಪಲಾಯನ ಮಾಡಿದೆ. ಹಿಮಾಚಲ ಪ್ರದೇಶ ಚುನಾವಣೆ ಏಕಮುಖ ಸ್ಪರ್ಧೆಯಾಗಲಿದೆ ಎಂದು ಹೇಳಿದರು.

ಹಲವು ದಾಖಲೆಗಳನ್ನು ಸೃಷ್ಟಿಸಲಿದೆ ಹಿಮಾಚಲ ಪ್ರದೇಶ ಚುನಾವಣೆ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೇನಾಮಿ ಆಸ್ತಿ ಸಂಬಂಧ ಕಾಯ್ದೆ ಮಾಡಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ಇದನ್ನು ಬೆಂಬಲಿಸಲಿಲ್ಲ. ನ.8ರಂದು ಕಾಂಗ್ರೆಸ್ ಕರಾಳ ದಿನ ಆಚರಿಸಿದ್ರೆ, ಈ ದೇಶ ಕಪ್ಪು ಹಣ ವಿರೋಧಿ ದಿನ ಆಚರಿಸಲಿದೆ ಎಂದರು.

ನ.9ರಂದು ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

ಹಿಮಾಚಲ ಪ್ರದೇಶದ ಪ್ರವಾಸೋದ್ಯಮ

ಹಿಮಾಚಲ ಪ್ರದೇಶದ ಪ್ರವಾಸೋದ್ಯಮ

ಹಿಮಾಚಲ ಪ್ರದೇಶದ ಪ್ರವಾಸೋದ್ಯಮವನ್ನು ಬೆಳೆಸಲು ನಾವು ಶ್ರಮಿಸುತ್ತಿದ್ದೇವೆ. ನಮ್ಮ ಸರ್ಕಾರ ಜನ ಸೇವೆಗೆ ಮುಂದಾಗಿದ್ದು, ಅನುದಾನವನ್ನು ಜನ ಕಲ್ಯಾಣಕ್ಕಾಗಿ ವಿನಿಯೋಗಿಸುವುದಾಗಿ ಭರವಸೆ ನೀಡಿದರು.

ಸೋಲೊಪ್ಪಿಕೊಂಡಿದ್ದಾರೆ ಎಂದರ್ಥವಲ್ಲವೇ?

ಸೋಲೊಪ್ಪಿಕೊಂಡಿದ್ದಾರೆ ಎಂದರ್ಥವಲ್ಲವೇ?

ಕಾಂಗ್ರೆಸ್ ಸರ್ಕಾರವಿದ್ದಾಗ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಿಲ್ಲವೇಕೆ? ಮತದಾರರ ಓಲೈಕೆಗೆ ನಾವು ಇಲ್ಲಿ ಬಂದಿಲ್ಲ. ಚುನಾವಣೆ ಹತ್ತಿರವಾದರೂ ಕ್ಷೇತ್ರದ ಬಳಿ ಕಾಂಗ್ರೆಸ್ ನಾಯಕರು ಸುಳಿಯುತ್ತಿಲ್ಲವೇಕೆ? ಯುದ್ಧಕ್ಕೆ ಮೊದಲೆ ಸೋಲೊಪ್ಪಿಕೊಂಡಿದ್ದಾರೆ ಎಂದರ್ಥವಲ್ಲವೇ?

ಭ್ರಷ್ಟಾಚಾರ ಹಾಗೂ ಕಾಂಗ್ರೆಸ್

ಭ್ರಷ್ಟಾಚಾರ ಹಾಗೂ ಕಾಂಗ್ರೆಸ್

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಭ್ರಷ್ಟಾಚಾರವನ್ನು ಗುರುತಿಸಿದರೆ ಹೊರತು ಅದರ ನಿರ್ಮೂಲನೆಗೆ ಏನನ್ನೂ ಮಾಡಲಿಲ್ಲ. ಕಾಂಗ್ರೆಸ್‌ನ ಭ್ರಷ್ಟ ಸರ್ಕಾರದ ವಿರುದ್ಧ ಅಲೆ ಇದೆ. ಸಬ್ಸಿಡಿ ಹೆಸರಿನಲ್ಲಿ ಸುಮಾರು 57,000 ಕೋಟಿ ರು ಅವ್ಯವಹಾರದಲ್ಲಿ ಕಾಂಗ್ರೆಸ್ ತೊಡಗಿದೆ. ಇದಕ್ಕೆ ತಡೆಯೊಡ್ಡಲು ಹೋಗಿದ್ದು ಕಾಂಗ್ರೆಸ್ಸಿಗರಿಗೆ ಉರಿ ತಂದಿದೆ

2022ರಲ್ಲಿ ಎಲ್ಲರಿಗೂ ಮನೆ ನಿರ್ಮಾಣ

2022ರಲ್ಲಿ ಎಲ್ಲರಿಗೂ ಮನೆ ನಿರ್ಮಾಣ

ಪ್ರೇಮ್ ಕುಮಾರ್ ದುಮಾಲ್ ಅವರನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದ್ದಾರೆ. 2022ರಲ್ಲಿ ಎಲ್ಲರಿಗೂ ಮನೆ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಮೋದಿ ಭಾಷಣ ಲೈವ್

#modidhumal4vikas ಎಂಬ ಹಾಶ್ ಟ್ಯಾಗ್ ಟ್ರೆಂಡ್ ಮಾಡುವ ಮೂಲಕ ಹಿಮಾಚಲ ಪ್ರದೇಶದ ಊನಾ, ಪಲಂಪುರ್ ಹಾಗೂ ಕುಲುವಿನಲ್ಲಿನ ಚುನಾವಣಾ ಪ್ರಚಾರ ಸಮಾವೇಶಗಳ ಬಗ್ಗೆ ಬಿಜೆಪಿ ಮಾಹಿತಿ ನೀಡುತ್ತಿದೆ. ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಕೂಡಾ ಸಮಾವೇಶದಲ್ಲಿ ಪಾಲ್ಗೊಂಡು ಮೋದಿಯನ್ನು ಹೊಗಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Prime Minister made a jibe at the opposition and likened the Congress to "termites", urging the voters to "take them out from the roots". The state goes to poll on November 9.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ