ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಜಪಾನ್ ಬಾಂಧವ್ಯಕ್ಕೆ 4 ಒಪ್ಪಂದಗಳ ಕೊಂಡಿ

|
Google Oneindia Kannada News

ನವದೆಹಲಿ, ಡಿಸೆಂಬರ್, 12: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಝೊ ಅಬೆ ನವದೆಹಲಿಯಲ್ಲಿ ಶನಿವಾರ ಪರಸ್ಪರ ಮಾತುಕತೆ ನಡೆಸಿದ್ದು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಮಾಡಿವೆ.

ಪ್ರಮುಖ 4 ಒಪ್ಪಂದಗಳಿಗೆ ಎರಡು ರಾಷ್ಟ್ರಗಳು ಸಹಿ ಮಾಡಿದ್ದು ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. ನಾಗರಿಕ ಪರಮಾಣು ಇಂಧನ ತಿಳಿವಳಿಕೆ ಪತ್ರ, ಭಾರತದಲ್ಲಿ ಬುಲೆಟ್ ರೈಲು ಜಾಲ ಅಭಿವೃದ್ಧಿ, ರಕ್ಷಣಾ ಸಾಧನ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ ಮಾಡಿಕೊಂಡಿವೆ.[ಮೋದಿಗೆ ಹ್ಯಾಂಡ್ ಶೇಕ್ ನೀಡಲು ರಾಹುಲ್ ನಿರಾಕರಿಸಿದ್ರೆ!?]

modi

ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು ಅಭಿವೃದ್ಧಿಗೆ ಪರಸ್ಪರ ಬದ್ಧ ಎಂದು ಹೇಳಿದರು. ಭಾರತದ ಅರ್ಥವ್ಯವಸ್ಥೆಗಳ ಬಗ್ಗೆ ಜಪಾನ್ ಪ್ರಧಾನಿ ಸಕಾರಾತ್ಮಕ ಚಿಂತನೆ ಮುಂದಿಟ್ಟಿದ್ದಾರೆ ಎಂದು ಮೋದಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ-ಜಪಾನ್ ಪ್ರಧಾನಿ ಶಿಂಝೊ ಅಬೆ ಮಾತುಕತೆ ಹೈಲೈಟ್ಸ್

* ಬುಲೆಟ್ ರೈಲು ಯೋಜನೆಗಾಗಿ ಜಪಾನ್ 1200 ಕೋಟಿ ಡಾಲರ್ ಮೊತ್ತದ ನೆರವು ನೀಡಲಿದೆ.
* 98,000 ಕೋಟಿ ರೂಪಾಯಿ ಮೊತ್ತದ ಬುಲೆಟ್ ರೈಲು ಜಾಲವು ಮುಂಬೈ ಮತ್ತು ಅಹಮದಾಬಾದನ್ನು ಸಂಪರ್ಕಿಸಲಿದ್ದು, 505 ಕಿಮೀ ದೂರದ ಮಾರ್ಗದ ಪಯಣದ ಅವಧಿಯನ್ನು 8 ಗಂಟೆಯಿಂದ 3 ಗಂಟೆಗೆ ಇಳಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.[ಡಿಜಿಟಲ್ ಇಂಡಿಯಾ ಎಂದರೇನು?]
* ಜಪಾನ್ ಪ್ರಜೆಗಳಿಗೆ 2016ರ ಮಾರ್ಚ್​ನಿಂದ ಸುಲಭ ವೀಸಾ ವ್ಯವಸ್ಥೆ ಮಾಡಲಾಗುವುದು.
* ಭಾರತದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರ ಎರಡರ ಮೇಲೂ ಹಣ ಹೂಡಲು ಜಪಾನ್ ಸಿದ್ಧವಿದೆ.
* ವಾರಣಾಸಿ ಸಕಲ ಅಭಿವೃದ್ಧಿಗೆ ಜಪಾನ್ ಮತ್ತು ಯುನೆಸ್ಕೋ ಒಂದಾಗಿ ಶ್ರಮಿಸಲಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ,

English summary
Japanese Prime Minister Shinzo Abe arrived here on a three-day official visit on Friday. India sees Japan as an important player in the nuclear energy sector, with major Japanese firms manufacturing components for related equipment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X