Get Updates
Get notified of breaking news, exclusive insights, and must-see stories!

2008ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಗಾಂಧಿ-ಭುಟ್ಟೋ ಭೇಟಿಯ ಬಗ್ಗೆ ಕಾಂಗ್ರೆಸ್ ವಿವರಣೆ ಕೊಡಲಿ!

2008 ರ ಒಲಿಂಪಿಕ್ಸ್‌ಗೆ ಚೀನಾದ ಬೀಜಿಂಗ್‌ ಆತಿಥ್ಯ ವಹಿಸಿತ್ತು. ಡ್ರಾಗನ್ ದೇಶ ಮೊದಲ ಬಾರಿ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದು ಕ್ರೀಡೆ, ರಾಜತಾಂತ್ರಿಕತೆ ಮತ್ತು ಜಗತ್ತಿನ ಎಲ್ಲಾ ದೇಶಗಳ ಭಾಗವಹಿಸುವ ಭವ್ಯ ಪ್ರದರ್ಶನವಾಗಿತ್ತು. ಆದರೆ ಇದೇ ಬೀಜಿಂಗ್ ಒಲಿಂಪಿಕ್ಸ್‌ ವೇಳೆ ಕ್ರೀಡಾಂಗಣದ ಹೊರಗೆ, ಜನಮನದಿಂದ ದೂರದಲ್ಲಿ, ದಕ್ಷಿಣ ಏಷ್ಯಾದ ಎರಡು ಪ್ರಮುಖ ರಾಜಕೀಯ ಕುಟುಂಬಗಳ ನಡುವೆ ಮಹತ್ವದ ಸಭೆ ನಡೆದಿತ್ತು.

ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಮಯದಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಬೀಜಿಂಗ್‌ನಲ್ಲಿ ಇದ್ದರು. ಅದೇ ಸಮಯದಲ್ಲಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ, ಅವರ ಸಹೋದರ-ಸಹೋದರಿಯರಾದ ಬಕ್ತವರ್, ಆಸಿಫಾ, ಜಹಾಂಗೀರ್ ಬಾದರ್ ಮತ್ತು ರೆಹಮಾನ್ ಮಲಿಕ್ ಸೇರಿದಂತೆ ಹಿರಿಯ ಪಿಪಿಪಿ ನಾಯಕರು ಕೂಡ ಬೀಜಿಂಗ್‌ಗೆ ಆಗಮಿಸಿದ್ದರು.

hidden diplomacy congress needs clarify 2008 sonia gandhi bhutto meet beijing

30 ನಿಮಿಷಗಳ ಕಾಲ ನಡೆದ ಸಭೆ

ವರದಿಗಳ ಪ್ರಕಾರ, ಚೀನೀ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಆಹ್ವಾನದ ಮೇರೆಗೆ ಎರಡೂ ನಿಯೋಗಗಳು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬೀಜಿಂಗ್‌ಗೆ ತೆರಳಿದ್ದವು.

ರಾಜಕೀಯವಾಗಿ ಪ್ರಭಾವ ಹೊಂದಿದ್ದ ಈ ಎರಡೂ ಕುಟುಂಬಗಳು ಬೀಜಿಂಗ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಸಭೆಯನ್ನು ನಡೆಸಿದವು. 2008ರ ಆರಂಭದಲ್ಲಿ ಉಗ್ರ ದಾಳಿಯಲ್ಲಿ ಹತ್ಯೆಯಾಗಿದ್ದ ಬೆನಜೀರ್ ಭುಟ್ಟೋ ಅವರ ಸಹೋದರರಿಗೆ ಸೋನಿಯಾ ಗಾಂಧಿ ಅವರು ಸಂತಾಪ ಸೂಚಿಸಿದ್ದರು.

ಸಭೆಯ ಬಳಿಕ ಸಾರ್ವಜನಿಕ ಹೇಳಿಕೆ ನೀಡಿದ್ದ ರೆಹಮಾನ್ ಮಲಿಕ್ ಈ ಭೇಟಿಯನ್ನು ಆತ್ಮೀಯ ಮತ್ತು ವೈಯಕ್ತಿಕ ಎಂದು ಹೇಳಿದ್ದರು. ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆಯಲಿಲ್ಲ ಎಂದಿದ್ದರು. ಕುಟುಂಬದ ಬಗ್ಗೆ ಮಾತ್ರ ಮಾತುಕತೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದರು.

ಬಹಿರಂಗವಾಗದ ಸತ್ಯಗಳು...!

ಆದರೆ ಇದೇ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸಿಪಿಸಿ ಜೊತೆ ತಿಳುವಳಿಕೆ ಒಪ್ಪಂದವೊಂದಕ್ಕೆ (MoU) ಸಹಿ ಹಾಕಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ. ಈ ಒಪ್ಪಂದವು ರಾಜಕೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಸಮಾಲೋಚನೆಗಳಿಗೆ ಅವಕಾಶ ನೀಡುತ್ತದೆ ಎಂದು ವರದಿಯಾಗಿದೆ. ಆದರೆ ಒಪ್ಪಂದದ ವಿಷಯಗಳನ್ನು ಇಂದಿಗೂ ಕೂಡ ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎನ್ನುವುದೇ ವಿಶೇಷ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಆ ವರ್ಷದ ನಂತರ ಸಿಪಿಸಿ ಜೊತೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

18 ವರ್ಷಗಳ ನಂತರ ಈ ಗಾಂಧಿ-ಭುಟ್ಟೋ ಕುಟುಂಬದ ಭೇಟಿಯ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ವ್ಯಾಪಕವಾಗಿ ವೈರಲ್ ಆಗುತ್ತಿವೆ. ಕಳೆದ ವಾರದಿಂದ ಈ ಫೋಟೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದು ಕಾಂಗ್ರೆಸ್ ನಾಯಕರನ್ನು ಜನ ಪ್ರಶ್ನಿಸುವಂತೆ ಮಾಡಿದೆ.

ಸಭೆಯು ಅಧಿಕೃತ ರಾಜತಾಂತ್ರಿಕ ಕಾರ್ಯಕ್ರಮವಲ್ಲದಿದ್ದರೂ, ಅದು ಚೀನಾದ ನೆಲದಲ್ಲಿ, ಸಿಪಿಸಿಯ ಆಹ್ವಾನದ ಮೇರೆಗೆ ನಡೆದಿತ್ತು. ಎರಡೂ ಕುಟುಂಬಗಳು ತಮ್ಮ ದೇಶದಲ್ಲಿ ರಾಜಕೀಯವಾಗಿ ಸಾಕಷ್ಟು ಪ್ರಭಾವ ಹೊಂದಿದ್ದ ಕಾರಣ, ಭವಿಷ್ಯದ ರಾಜಕೀಯ ನಾಯಕರು ಎನಿಸಿಕೊಂಡವರು ಸಭೆಯಲ್ಲಿದ್ದ ಕಾರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಫೋಟೊಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವು ಮಂದಿ ಈಗಾಗಲೇ ಈ ಸಭೆಯ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ವೈರಲ್ ಆಗಿರುವ ಫೋಟೊಗಳ ಬಗ್ಗೆ ಕಾಂಗ್ರೆಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೆನಜಿರ್ ಭುಟ್ಟೋ ಅವರಿಗೆ ಸಂತಾಪ ಸೂಚಿಸುವ ಸಭೆ ಎಂದು ಬಿಂಬಿಸಲಾಗಿದ್ದರೂ ಈಗ ವೈರಲ್ ಆಗುತ್ತಿರುವ ಫೋಟೊಗಳು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ತೆರೆಮರೆಯಲ್ಲಿ ಎರಡೂ ಕುಟುಂಬಗಳ ನಡುವೆ ರಹಸ್ಯ ಮಾತುಕತೆ ನಡೆದಿರಬಹುದು ಎಂದು ಹಲವರು ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಈ ಬಗ್ಗೆ ವಿವರಣೆ ನೀಡಿ, ಸಾರ್ವಜನಿಕರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+