3 ಸಿಂಹಗಳಿಂದ ಒಡೆಯನನ್ನು ಕಾಪಾಡಿದ ನಿಯತ್ತಿನ ನಾಯಿ

ಅಮ್ರೇಲಿ, ಜುಲೈ 23: ಮೂರು ಸಿಂಹಗಳ ದಾಳಿಗೆ ಒಳಗಾದ ಒಡೆಯನನ್ನು ನಾಯಿಯೊಂದು ಕಾಪಾಡಿ ನಿಯತ್ತು ಮೆರೆದ ಘಟನೆ ಗುಜರಾತಿನ ಅಮ್ರೇಲಿಯಲ್ಲಿ ನಡೆದಿದೆ.

ಗುಜರಾತಿನ ಅಮ್ರೇಲಿಯ ಅಮಾರ್ಡಿ ಗ್ರಾಮದಲ್ಲಿ ಭಾವನೇಶ್ ಹಮೀರ್ ಭಾರ್ವಾಡ್(25) ವ್ಯಕ್ತಿಯೊಬ್ಬ ಕುರಿಕಾಯುತ್ತಿದ್ದ ಸಂದರ್ಭದಲ್ಲಿ ಕುರಿಗಳ ಮೇಲೆ ಮೂರು ಸಿಂಹಗಳ ಗುಂಪು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ತನ್ನ ಕುರಿಗಳನ್ನು ಉಳಿಸಿಕೊಳ್ಳಲು ಮುಂದಾದ ವ್ಯಕ್ತಿಯ ಮೇಲೆ ಮೂರೂ ಸಿಂಹಗಳೂ ದಾಳಿ ನಡೆಸಿವೆ.

ಈ ಸಂದರ್ಭದಲ್ಲಿ ಆತನೊಂದಿಗಿದ್ದ ಸಾಕು ನಾಯಿ ರಸ್ತೆ ಬದಿಯಲ್ಲಿ ನಿಂತು ಜೋರಾಗಿ ಬೊಗಳಿ ಜನರಿಗೆ ಅಪಾಯದ ಸೂಚನೆ ನೀಡಿದೆ. ನಾಯಿ ಬೊಗಳುತ್ತಿರುವುದನ್ನು ಕಂಡು ಜನರು ಏನೋ ಅಪಾಯವಿದೆ ಎಂದು ಓಡಿ ಬಂದಿದ್ದಾರೆ. ಎಷ್ಟೋ ಸಮಯ ನಾಯಿ ಬೊಗಳುತ್ತ, ಸಿಂಹಗಳನ್ನೂ ಹೆದರಿಸಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಜನರ ಗುಂಪು ಓಡಿಬಂದು ಸಿಂಹಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಭಾವನೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Hero dog saves owner from lions in Gujarats Amreli

ಇಂದು ನಾನು ಬದುಕಿದ್ದೇನೆ ಅಂದ್ರೆ ಅದಕ್ಕೆ ನನ್ನ ನಾಯಿಯೇ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತಾರೆ ಭಾವನೇಶ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+