• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?

By ಒನ್ಇಂಡಿಯಾ ಪ್ರತಿನಿಧಿ
|

ಪುಣೆ, ನವೆಂಬರ್ 10: ಪ್ರಧಾನಿ ನರೇಂದ್ರ ಮೋದಿ 500, 1000 ರುಪಾಯಿ ನೋಟುಗಳನ್ನು ದಿಢೀರ್ ರದ್ದು ಮಾಡಿ, ಇಡೀ ದೇಶ ಹಾಗೂ ಜನರು ಈ ಹಿಂದೆ ಎಂದೂ ಕಾಣದಂಥ ರೀತಿಯಲ್ಲಿ ನಗದಿಗಾಗಿ ಮುಗಿ ಬೀಳುವಂತೆ ಮಾಡಿದ್ದಾರೆ. ಆದರೆ ಈ ಘೋಷಣೆ ಹಿಂದೊಂದು ಕಥೆ ಇದೆ. ಒಬ್ಬ ವ್ಯಕ್ತಿಯ ಕೇವಲ ಒಂಬತ್ತು ನಿಮಿಷದ ಮಾತು ಕಪ್ಪು ಹಣದ ಮೇಲೆ ಭಾರೀ ದಾಳಿಯಾಗುವಂತೆ ಮಾಡಿದೆ ಅಂದರೆ ನೀವು ನಂಬ್ತೀರಾ?

ಅರ್ಥ ಕ್ರಾಂತಿ ಎಂಬ ಪುಣೆ ಮೂಲದ ಸಂಸ್ಥೆಯೊಂದರ ಅನಿಲ್ ಬೊಕಿಲ್ ಕಪ್ಪು ಹಣ ನಿಯಂತ್ರಣಕ್ಕೆ ದೊಡ್ಡ ನೋಟುಗಳನ್ನು ರದ್ದು ಮಾಡುವುದು ಹೇಗೆ ಸಹಕಾರಿ ಎಂಬುದನ್ನು ವಿವರಿಸಿದ್ದರು. ಅಷ್ಟೇ ಅಲ್ಲ, ಇನ್ನೂ ಕೆಲ ಸಲಹೆಗಳನ್ನು ಬೊಕಿಲ್ ನೀಡಿದ್ದರು. ವರದಿಗಳ ಪ್ರಕಾರ, ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆರ್ಥಿಕ ಸುಧಾರಣೆ ಬಗ್ಗೆ, ಕಪ್ಪು ಹಣ ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದ್ದರು. [500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]

ತಮ್ಮ ವಾದವನ್ನು ಮಂಡಿಸುವುದಕ್ಕೆ ಬೊಕಿಲ್ ಗೆ ಸಿಕ್ಕಿದ್ದು ಒಂಬತ್ತು ನಿಮಿಷದ ಸಮಯ. ಆದರೆ ಅವರ ಎಲ್ಲ ಅಂಶಗಳು ಪ್ರಧಾನಿ ಅವರಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದವು. ಆ ನಂತರ ಎಲ್ಲ ವಿಚಾರಗಳನ್ನು ಹೇಳಿಕೊಳ್ಳುವುದಕ್ಕೆ ಎರಡು ಗಂಟೆ ಸಮಯ ನೀಡಿದರು.

ಬೊಕಿಲ್ ನ ಪ್ರಮುಖ ಶಿಫಾರಸುಗಳು ಹೀಗಿವೆ:

1. ಆಮದು ಸುಂಕ ಒಂದನ್ನು ಹೊರತುಪಡಿಸಿ ಸದ್ಯಕ್ಕೆ ಹಣ ಸಂಗ್ರಹಿಸುತ್ತಿರುವ 56 ವಿವಿಧ ತೆರಿಗೆಗಳನ್ನು ನಿಲ್ಲಿಸಿ.

2. ದೊಡ್ಡ ಮೊತ್ತದ ನೋಟುಗಳಾದ 500, 1000 ಹಾಗೂ 100 ಅನ್ನು ರದ್ದುಪಡಿಸಿ. [ಅಮೆರಿಕ ಚುನಾವಣೆ ಹೈಜಾಕ್ ಮಾಡಿದ ಮೋದಿ ಸ್ಟ್ರೋಕ್]

3. ಎಲ್ಲ ವ್ಯವಹಾರಗಳನ್ನು ಬ್ಯಾಂಕ್ ಮೂಲಕವೇ ಮಾಡಬೇಕು. ಅದು ಚೆಕ್, ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಆನ್ ಲೈನ್ ಮೂಲಕ.

4.ಆದಾಯ ಸಂಗ್ರಹವನ್ನು ಒಂದೇ ಬ್ಯಾಂಕ್ ಮೂಲಕ ಮಾಡಬೇಕು.

ಬೊಕಿಲ್ ಈ ಸಲಹೆಗಳಿಗೆ ಕೊಟ್ಟ ಕಾರಣಗಳೇನು ಗೊತ್ತಾ?

1. ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 2.7 ಲಕ್ಷ ಕೋಟಿ ರುಪಾಯಿಯಷ್ಟು ವ್ಯವಹಾರವಾಗುತ್ತದೆ. ಅಂದರೆ ವರ್ಷಕ್ಕೆ 800 ಲಕ್ಷ ಕೋಟಿ ರುಪಾಯಿ. ಆದರೆ ಅದರಲ್ಲಿ ಶೇ 20ರಷ್ಟು ವ್ಯವಹಾರ ಮಾತ್ರ ಬ್ಯಾಂಕ್ ಮೂಲಕ ಆಗುತ್ತದೆ. ಇನ್ನೆಲ್ಲವೂ ನಗದು ವ್ಯವಹಾರಗಳು. ಅವುಗಳನ್ನು ಪತ್ತೆ ಹಚ್ಚೋದು ಕಷ್ಟವಾಗಿದೆ.

2. ದೇಶದ ಜನಸಂಖ್ಯೆಯ ಶೇ 78ರಷ್ಟು ಮಂದಿ ದಿನಕ್ಕೆ 20 ರುಪಾಯಿ ಮಾತ್ರ ಖರ್ಚು ಮಾಡ್ತಾರೆ. ಆದ್ದರಿಂದ ನಮಗೆ ದೊಡ್ದ ಮುಖಬೆಲೆಯ ನೋಟಿನ ಅಗತ್ಯ ಇಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anil Bokil, from pune is the reason behind the decision of Prime Minister Narendra's Modi's sudden announcement of demonetising the currency notes of Rs 500 and Rs 1,000. Bokil, who was given just nine minutes to speak, resulted in the massive assault on black money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more