ಸಿಕ್ಖ್ ಮತೀಯರಿಂದ ಶ್ರದ್ಧಾಭಕ್ತಿಯ ಗುರುನಾನಕ್ ಜಯಂತಿ ಆಚರಣೆ

ಸಿಕ್ಖ್ ಮತದ ಸಂಸ್ಥಾಪಕರಾದ ಗುರು ನಾನಕ್ ಅವರ ಜಯಂತಿಯನ್ನು ಇಂದು ದೇಶದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಬರುವ ಗುರು ನಾನಕ್ ಜಯಂತಿಯನ್ನು ಸಮಸ್ತ ಸಿಕ್ಖ್ ಬಾಂಧವರು ಆಚರಿಸಿ, ಸಿಕ್ಖ್ ಮತದ ಮೊದಲ ಗುರುವನ್ನು ಸ್ಮರಿಸುತ್ತಾರೆ.

ನಾನಕ್ ಜನಿಸಿದ್ದು ಈಗಿನ ಪಾಕಿಸ್ತಾನದ ಪಂಜಾಬ್ ನ ನಂಕಾನ ಎಂಬಲ್ಲಿ. ತಂದೆ ಕಲ್ಯಾಣ್ ಚಂದ್ ದಾಸ್ ಬೇಡಿ, ತಾಯಿ ಮಾತಾ ತೃಪ್ತ. 15 ಶತಮಾನದಲ್ಲಿ ಇವರು ಸ್ಥಾಪಿಸಿದ ಸಿಕ್ಖ್ ಮತ ಇಂದು ಜಗತ್ತಿನ ಪ್ರಮುಖ ಮತಗಳಲ್ಲಿ ಒಂದಾಗಿದೆ.

ಕಾರ್ತಿಕ ಪೂರ್ಣಿಮೆಯಾದ್ದರಿಂದ ಇಂದು(ನ.4) ವಿಶ್ವದಾದ್ಯಂತ ಇರುವ ಸಿಕ್ಖ್ ಬಾಂಧವರು ಇಂದು ಗುರುನಾಯಕ್ ಜಯಂತಿಯನ್ನು ಆಚರಿಸುತ್ತಿದ್ದು, ಟ್ವಿಟ್ಟರ್ ನಲ್ಲೂ ಗುರುನಾನಕ್ ಜಯಂತಿ ಟ್ರೆಂಡಿಂಗ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ನಾನಕ್ ಜಯಂತಿಯ ಶುಭಕೋರಿದ್ದಾರೆ.

ಅವರ ಚಿಂತನೆಗಳನ್ನು ನೆನಪಿಸಿಕೊಳ್ಳೋಣ

ಗುರುನಾನಕ್ ಜಯಂತಿಯಂದು ಶ್ರೀ ಗುರುನಾನಕ್ ಅವರಿಗೆ ನಾವು ನಮಸ್ಕರಿಸುತ್ತೇವೆ. ಅವರ ಚಿಂತನೆಗಳನ್ನು ನೆನಪಿಸಿಕೊಳ್ಳುವುದಕ್ಕೆ ಇದು ಸಕಾಲ ಎಂದು ಪ್ರಧಾನಿ ನರೇಮದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅಜಾತಶ್ತ್ರು, ಸಂತ ಗುರುನಾನಕ್

ಗುರು ನಾನಕ್ ಜಯಂತಿಯಂದು ನಾವು, ಯಾವ ಅಜಾತಶತ್ರು, ನಿರ್ಭಯ ವ್ಯಕ್ತಿತ್ವದ ಸಂತ ಗುರುನಾನಕ್ ಅವರನ್ನು ಸ್ಮರಿಸುತ್ತೇವೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಿಕ್ಖ್ ಮತೀಯರಿಗೆ ಶುಭಹಾರೈಕೆ

ಗುರುನಾನಕ್ ದೇವ್ ಜೀ ಅವರ ಜಯಂತಿಯ ಸುಸಂದರ್ಭದಂದು ಭಾರತೀಯರಿಗೆ, ಅದರಲ್ಲೂ ಪ್ರಮುಖವಾಗಿ ಸಿಕ್ಖ್ ಸಮುದಾಯದವರಿಗೆ ಶುಭಹಾರೈಕೆಗಳು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ಭ್ರಾತೃತ್ವದ ಪ್ರತಿಪಾದಕ

ಭ್ರಾತೃತ್ವ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಕಲಿಸಿದ ಮಹಾನ್ ಸಂತ ಗುರು ನಾನಕ್ ಅವರ ಜಯಂತಿಯ ಶುಭಾಶಯಗಳು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+