ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬ್ರೇನ್ ಟ್ಯೂಮರ್ ನಿಂದ ಮಗನನ್ನು ಬದುಕಿಸಲು ಈ ಅಸಹಾಯಕ ತಂದೆಗೆ ನೆರವಾಗಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನನ್ನ ಆರು ವರ್ಷದ ಮಗ ಆನಂದ್ ಮನೆಯಿಂದ ಕಿಲೋಮೀಟರ್ ಗಳಷ್ಟು ದೂರವಿರುವ ಆಸ್ಪತ್ರೆಯಲ್ಲಿ 210 ದಿನಗಳಿಂದ ಇದ್ದಾನೆ. ಆನಂದ್ ನ ಸ್ಥಿತಿಗೆ ಒಂದು ಹೆಸರಿಟ್ಟಿದ್ದಾರೆ. 2014ರಲ್ಲಿ ಆತನ ಸಮಸ್ಯೆ ಏನು ಎಂದು ನಮಗೆ ಗೊತ್ತಾಗಿದ್ದು 'ರಿಕರೆಂಟ್ ಅನಾಪ್ಲಾಸ್ಟಿಕ್ ಬ್ರೇನ್ ಸ್ಟೆಮ್ ಎಪೆಂಡ್ಯೋಮಾಮಾ'.

  ಆತನ ಚಿಕಿತ್ಸೆ ವೇಳೆಯಲ್ಲಿ ಮೂರು ಬಾರಿ ಆತನಿಗಿರುವ ಮೆದುಳ ಗಡ್ಡೆ (ಟ್ಯೂಮರ್) ಕಾಣಿಸಿಕೊಂಡಿದೆ.ಹಾಗೆ ಕಾಣಿಸಿಕೊಂಡ ಪ್ರತಿ ಬಾರಿಯೂ ನಮ್ಮ ಜಗತ್ತು ಛಿದ್ರವಾಗಿದೆ. ಮಗ ಹೀಗೆ ಕಷ್ಟ ಅನುಭವಿಸುವುದನ್ನು ನೋಡುವುದು ನನ್ನ ಜೀವನದಲ್ಲೇ ಅತ್ಯಂತ ಕಠಿಣ ಸನ್ನಿವೇಶ. ನನ್ನ ಮಗ ಈಗ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾನೆ.

  ಅವನ ಬಾಯಿಗೆ ಹಾಕಿರುವ ಟ್ಯೂಬ್ ನಿಂದ ದೇಹಕ್ಕೆ ಆಹಾರ ಹೋಗುತ್ತಿದೆ. ಪೈಪ್ ಗಳ ಸಹಾಯದಿಂದಲೇ ಆತನ ಶ್ವಾಸಕೋಶ ಹಾಗೂ ಮೆದುಳಿಗೆ ಔಷಧ ಸರಬರಾಜು ಆಗುತ್ತಿದೆ. ಈ ಯಂತ್ರಗಳನ್ನು ತೆಗೆದರೆ ಅವನನ್ನು ಬದುಕಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾಯ್ಲೆ ಅವನನ್ನು ಹಾಸಿಗೆಗೆ ಕಟ್ಟುಹಾಕಿದೆ.

  Helpless Father Struggling To Save Son With Brain Tumour & Failed Lungs

  ಆನಂದ ಟಾಯ್ಲೆಟ್ ಗೂ ಎದ್ದು ಹೋಗಲಾರ. ಅದಕ್ಕೂ ಪೈಪ್ ಅಳವಡಿಸಲಾಗಿದೆ. ನನ್ನ ಮಗನಿಗೆ ರೇಡಿಯೋಥೆರಪಿ ಆಗಬೇಕು. ಅದಕ್ಕಾಗಿ ಒಟ್ಟು 7,00,000 ಬೇಕು. ಇನ್ನೂ ಒಂಬತ್ತು ತಿಂಗಳು ಚಿಕಿತ್ಸೆಗೆ ಸಮಯ ತೆಗೆದುಕೊಳ್ಳಬಹುದು. ಆ ದೇವರು ನಮ್ಮ ಪರವಾಗಿ ಇಲ್ಲ ಅಂದರೆ, ಆ ಸಮಯ ಇನ್ನೂ ಹೆಚ್ಚಾಗಬಹುದು. ನನ್ನ ಮಗನ ಜೀವ ಉಳಿಸಲು ದಯವಿಟ್ಟು ನೆರವು ನೀಡಿ.

  ನನ್ನ ಹೆಸರು ವಿಕ್ರಮ ಸಿಂಗ್, ಆನಂದ್ ನ ತಂದೆ. ಉತ್ತರಪ್ರದೇಶದ ಶಾಮ್ಲಿಯಲ್ಲಿ ಇದ್ದೇನೆ, ನಾನು ಕೆಲಸ ಮಾಡುವ ಸ್ಥಳದಿಂದ ಅದು ತುಂಬ ದೂರ. ಈ ವರೆಗೆ 11 ಲಕ್ಷ ರುಪಾಯಿ ಖರ್ಚು ಮಾಡಿದ್ದೀನಿ ಮತ್ತು ನನ್ನ ಬಳಿ ಇನ್ನೇನು ಉಳಿದಿಲ್ಲ. ನನ್ನ ಉಳಿತಾಯದ ಹಣವನ್ನೂ ಅವನ ಚಿಕಿತ್ಸೆಗೆ ಖರ್ಚು ಮಾಡಿದ್ದೀನಿ.

  ನಾನು ಕನ್ಸಲ್ಟೆಂಟ್ ಆಗಿದ್ದೇನೆ ಮತ್ತು ತಿಂಗಳಿಗೆ ಹದಿನೈದು ಸಾವಿರ ದುಡಿಯುತ್ತೀನಿ. ಆದರೆ ಕಳೆದ ಹನ್ನೆರಡು ತಿಂಗಳಿಂದ ನಾನು ನಿರುದ್ಯೋಗಿ. ನನ್ನ ಹೆಂಡತಿ ಹಾಗೂ ಮಗುವನ್ನು ಮಾತ್ರ ಆಸ್ಪತ್ರೆಯಲ್ಲಿ ಬಿಡಲು ಸಾಧ್ಯವಿಲ್ಲ. ಆದರಲ್ಳು ನಾವು ಒಂದೇ ನಗರದಲ್ಲೂ ಇಲ್ಲ.

  ಇವೆಲ್ಲ ಆರಂಭವಾದದ್ದು 2014ರ ಫೆಬ್ರವರಿಯಲ್ಲಿ ಜ್ವರದಿಂದ. ಆನಂದ್ ಗೆ ಇಷ್ಟವಾದ ಅಡುಗೆ ಮಾಡಿದರೂ ಆಹಾರ ಸ್ವೀಕಾರ ಪ್ರಮಾಣದಲ್ಲಿ ವಿಪರೀತ ಕಡಿಮೆ ಆಯಿತು. ಅವನ ತಲೆ ಒಂದು ಕಡೆ ಬಾಗಲು ಆರಂಭಿಸಿದಾಗ ನಮ್ಮಲ್ಲಿ ಭಯ ಆರಂಭವಾಯಿತು. ಅವನ ಕುತ್ತಿಗೆಗೆ ತಲೆಯ ಭಾರವನ್ನು ಹೊರುವಂಥ ಚೈತನ್ಯ ಕೂಡ ಇರಲಿಲ್ಲ.

  ತಕ್ಷಣವೇ ಆಸ್ಪತ್ರೆಗೆ ಧಾವಿಸಿದೆವು. ಒಂದು ತಿಂಗಳು ನಾನಾ ಪರೀಕ್ಷೆಗಳನ್ನು ಮಾಡಿದ ನಂತರ ನನ್ನ ಮಗನ ಮೆದುಳಿನಲ್ಲಿ ಗಡ್ಡೆ ಪತ್ತೆಯಾಯಿತು. ಅದನ್ನು ತೆಗೆಯದಿದ್ದರೆ ನನ್ನ ಮಗ ಬದುಕುವುದು ಸಾಧ್ಯವಿರಲಿಲ್ಲ. ತುಂಬ ಕಡಿಮೆ ಅವಧಿಯಲ್ಲಿ ಆರು ಲಕ್ಷ ರುಪಾಯಿ ಹೊಂದಿಸಿ, ಮುಂಬೈನ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದೆವು. ನನ್ನ ಮಗನ ಗಡ್ಡೆ ಕರಗಿತು, ಆ ನಂತರ ಮೂರು ವರ್ಷ ನನ್ನ ಮಗ ಚೆನ್ನಾಗಿದ್ದ.

  ಡಿಸೆಂಬರ್ 2017ರಲ್ಲಿ ಮತ್ತೆ ನನ್ನ ಮಗನನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಯಿತು. ಮತ್ತೆ ಅವೇ ಲಕ್ಷಣಗಳು ಅವನಲ್ಲಿ ಕಾಣಿಸಿಕೊಂಡವು. ಅದು ಮತ್ತೆ ಬಾರದಿರಲಿ ಅಂತ ನನ್ನೊಳಗೆ ಹೇಳಿಕೊಳ್ಳುತ್ತಿದ್ದೆ. ನನ್ನ ಪಾಲಿನ ದುಃಸ್ವಪ್ನ ಮತ್ತೆ ಕಾಣಿಸಿಕೊಂಡಿತ್ತು. ಆತನ ಗಡ್ಡೆ ಕ್ಯಾನ್ಸರ್ ನ ರೀತಿ ಮರುಕಳಿಸಿತು. 2017ರ ಜನವರಿಯಲ್ಲಿ ಅವನನ್ನು ಮುಂಬೈ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದೆವು. ಎಲ್ಲ ಸರಿಯಾಗುತ್ತಿದೆ ಎನ್ನುವಷ್ಟರಲ್ಲಿ ಪ್ರಬಲವಾದ ಕಿಮೋಥೆರಪಿಯಿಂದ ಶ್ವಾಸಕೋಶ ವೈಫಲ್ಯವಾಯಿತು.

  ವಿಕ್ರಮ್ ಅವರು ತಮ್ಮ ಮಗನ ರೇಡಿಯೋ ಥೆರಪಿಗೆ ಹಣ ಪಾವತಿಸಲು ಹೋರಾಡುತ್ತಿದ್ದಾರೆ. ನಿಮ್ಮ ದೇಣಿಗೆಯಿಂದ ಅವರಿಗೆ ಸಹಾಯ ಆಗುತ್ತದೆ, ಮಗನ ಜೀವ ಉಳಿಸಲು ನೆರವಾಗುತ್ತದೆ.

  ಇದು ನಮ್ಮ ಜೀವನದ ಅತ್ಯಂತ ಕೆಟ್ಟ ದಿನಗಳು. ಜೂನ್ ನಿಂದ ಜುಲೈವರೆಗೆ ಒಂದು ತಿಂಗಳು ನನ್ನ ಮಗ ಪ್ರಜ್ಞಾಹೀನನಾಗಿದ್ದ. ಅವನ ಧ್ವನಿ, ನಗು ಕಡೆಗೆ ಒಂದೇ ಒಂದು ಚಲನೆ ಕೂಡ ಅವನಲ್ಲಿರಲಿಲ್ಲ. ಉಸಿರಾಡುತ್ತಿದ್ದ ಎಂಬುದು ಬಿಟ್ಟರೆ ಅದೊಂದು ದೇಹ ಅಷ್ಟೇ ಆಗಿತ್ತು. ಆ ಎಲ್ಲ ದಿನಗಳು ಅವನ ಹಾಸಿಗೆ ಪಕ್ಕದಲ್ಲೇ ನನ್ನ ಹೆಂಡತಿ ಹಾಗೂ ಮಗಳು ಕಳೆದಿದ್ದಾರೆ.

  ಅವನೊಂದಿಗೆ ಮಾತನಾಡಿದ್ದಾರೆ, ಕಥೆ ಹೇಳಿದ್ದಾರೆ, ಅವನಿಗೆ ಮತ್ತೆ ಪ್ರಜ್ಞೆ ಬರಲು ಎಲ್ಲ ಪ್ರಯತ್ನ ಮಾಡಿದ್ದಾರೆ. 2017ರ ಮೇ ಮೂರರಿಂದ ಆನಂದ್ ದೈರ್ಯ ತೋರಿಸಿದ್ದಾನೆ. ಕಹಿ ಅನುಭವಗಳನ್ನು ನೀಡಿದ್ದಾನೆ. ಹಾಸಿಗೆಯಿಂದ ಎದ್ದವನೇ, ವೈದ್ಯರನ್ನು ಕರೆಯಿರಿ, ಸಿರಿಂಜ್ ಗಳಿಗೆ ನಾನು ಹೆದರುವುದಿಲ್ಲ" ಎಂದಿದ್ದಾನೆ.

  ಮನೆಗೆ ಹೋಗಬೇಕು. ರಿಮೋಟ್ ಕಂಟೋಲ್ ಕಾರಿನಲ್ಲಿ ಆಟವಾಡಬೇಕು ಎಂದು ಬಯಸುತ್ತಿದ್ದ ದಿನಗಳಿದ್ದವು. ನನ್ನ ಮಗ ಆಸ್ಪತ್ರೆಯಿಂದ ಹೊರಬರಬೇಕು. ಈ ಟ್ಯೂಬ್, ಯಂತ್ರಗಳೆಲ್ಲ ಇಲ್ಲದೆ ಹೇಗೆ ಕಾಣುತ್ತಾನೆ ಅನ್ನೋದನ್ನು ನೋಡಬೇಕು.

  ಯಾವ ಶಸ್ತ್ರಚಿಕಿತ್ಸೆಗೂ ಅವನನ್ನು ಗುಣಪಡಿಸುವ ಶಕ್ತಿ ಇಲ್ಲ. ನಿರಂತರವಾಗಿ ಒಂಬತ್ತು ತಿಂಗಳು ರೇಡಿಯೋಥೆರಪಿ ಚಿಕಿತ್ಸೆ ಕೊಡಿಸಬೇಕು. ಅದಕ್ಕಾಗಿ ಆಸ್ಪತ್ರೆ ಹಾಗೂ ಆ ಯಂತ್ರಗಳ ವೆಚ್ಚ ಎಲ್ಲ ಸೇರಿ ಪ್ರತಿ ವಾರಕ್ಕೆ 2 ಲಕ್ಷ ರುಪಾಯಿ ಆಗುತ್ತದೆ. ಈ ವರೆಗೆ ಕಟ್ಟಿರುವ ಹಣವೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಂದ ಪಡೆದಿರುವಂಥದ್ದು.

  ಆದರೆ ಈಗೇನು ಮಾಡುವುದು? ನನ್ನ ಮುಂದೆ ಕಠಿಣವಾದ ದಾರಿ ಬಹಳ ದೂರ ಇದೆ. ನನಗೆ ಯಾವುದೇ ಆದಾಯ ಮೂಲ ಇಲ್ಲ. ಈಗಾಗಲೇ ನನ್ನ ಮಗ ಸಾಕಷ್ಟು ಅನುಭವಿಸಿದ್ದೇನೆ- ದಯವಿಟ್ಟು ನನಗೆ ಸಹಾಯ ಮಾಡಿ.

  ನೀವು ವಿಕ್ರಮ್ ಗೆ ತಮ್ಮ ಮಗನನ್ನು ಉಳಿಸಿಕೊಳ್ಳಲುಅವನ ಪರವಾಗಿ ದೇಣಿಗೆ ಸಂಗ್ರಹಿಸುತ್ತಿರುವ ಕೆಟ್ಟೋ ಮೂಲಕ ಇಲ್ಲಿ ಸಹಾಯ ಮಾಡಬಹುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  My 6-year-old son Anand has been in the hospital kilometres away from home, since the last 210 days. Anand was diagnosed with a condition called ‘Recurrent Anaplastic Brainstem Ependymoma’ in 2014. Since his diagnosis, his brain has shown presence of tumours three times, shattering our world every single time.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more