ಭಾರತೀಯ ರೈಲ್ವೆಗೆ ಐಡಿಯಾ ಕೊಡಿ, 10 ಲಕ್ಷ ರುಪಾಯಿ ಗೆಲ್ಲಿ
ಭಾರತೀಯ ರೈಲ್ವೆ ಸೇವೆಗಳನ್ನು ಅದ್ಭುತವಾಗಿ ಮಾಡಲು ಹಾಗೂ ಹಾಗೆ ಮಾಡುವುದಕ್ಕೆ ಹಣಕಾಸು ಒದಗಿಸುವುದು ಹೇಗೆ ಎಂಬ ಬಗ್ಗೆ ನಿಮ್ಮ ಹತ್ತಿರ ಐಡಿಯಾ ಇದೆಯಾ? ಅಥವಾ ಎಂದಾದರೂ ಅಥವಾ ಯಾವಾಗಲೂ ಆ ಬಗ್ಗೆ ಯೋಚನೆ ಮಾಡ್ತಾ ಇರ್ತೀರಾ? ಹಾಗಿದ್ದರೆ ನಿಮ್ಮ ಐಡಿಯಾ ಹೇಳಿಕೊಳ್ಳಿ. ಅದು ನಿಜಕ್ಕೂ ಅದ್ಭುತವಾಗಿದ್ದು, ಕೆಲಸಕ್ಕೆ ಬರುತ್ತೆ ಅನ್ನಿಸಿದರೆ ಹತ್ತು ಲಕ್ಷ ರುಪಾಯಿ ಬಹುಮಾನ ಸಿಗುತ್ತದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ರೈಲ್ವೆಯಿಂದ ಹೀಗೊಂದು ಸಾರ್ವಜನಿಕ ಸ್ಪರ್ಧೆ ಘೋಷಿಸಲಾಗಿದೆ. "ರೈಲ್ವೆಯಿಂದ ಉತ್ತಮ ಸೇವೆ ನೀಡಲು ಹೇಗೆ ಹಣ ಸಂಗ್ರಹ ಮಾಡಬಹುದು" ಎಂದು ಜನರನ್ನೇ ಐಡಿಯಾ ಕೇಳುತ್ತಿದೆ.
ಸಿಕ್ಕಾಪಟ್ಟೆ ಚೆನ್ನಾಗಿದೆ ಅನ್ನಿಸುವ ಮೊದಲ ಐಡಿಯಾಗೆ 10 ಲಕ್ಷ ರುಪಾಯಿ ಬಹುಮಾನ ಇದ್ದರೆ, ಎರಡನೆಯದಕ್ಕೆ 5 ಲಕ್ಷ, ಮೂರನೆಯದಕ್ಕೆ 3 ಲಕ್ಷ ಹಾಗೂ ನಾಲ್ಕನೆಯದಕ್ಕೆ 1 ಲಕ್ಷ ಬಹುಮಾನ ನೀಡಲಿದೆ.

ನಿಮ್ಮ ಹತ್ತಿರ ಅಂಥ ಐಡಿಯಾ ಇದ್ದರೆ ಈ ವೆಬ್ ಸೈಟ್ (https://innovate.mygov.in/jan-bhagidari) ಮೂಲಕ ಸಲ್ಲಿಸಿ. ಹ್ಞಾಂ, ಕೊನೆ ದಿನ ಅಂತ ಮೇ 19, 2018 ನಿಗದಿ ಮಾಡಲಾಗಿದೆ.
"ಪರಿಹಾರ ಅಂದರೆ ಅದರಲ್ಲಿ ಐಡಿಯಾ ಇರಬೇಕು, ವ್ಯವಹಾರದ ಯೋಜನೆ ಪೂರ್ಣ ಮಾಹಿತಿ ಇರಬೇಕು, ಹಣ ಸಂಗ್ರಹಿಸಲು ಯಾವ ಸ್ಟ್ರಾಟೆಜಿ ಅನುಷ್ಠಾನಗೊಳಿಸಬೇಕು" ಎಂಬ ಮಾಹಿತಿಯೆಲ್ಲ ಒಳಗೊಂಡಿರಬೇಕು.
ಭಾರತದ ಹಳೆಯ ಸಂಚಾರ ವ್ಯವಸ್ಥೆಯಲ್ಲಿ ಒಂದಾದ ರೈಲ್ವೆಯು ಹಣಕಾಸು ಸಂಗ್ರಹ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಇಲಾಖೆಯ ಸಾಲದ ಪ್ರಮಾಣ ಏರುತ್ತಲೇ ಇದೆ. ಖಾರ್ಚು-ವೆಚ್ಚ ನಿಭಾಯಿಸಲು ಬೇಕಾದಷ್ಟು ಆದಾಯ ಉತ್ಪನ್ನವಾಗುತ್ತಿಲ್ಲ.
ಮಾರುಕಟ್ಟೆಯಿಂದ ಪಡೆದ ಸಾಲದ ಪ್ರಮಾಣ 2016ರಲ್ಲಿ ಶೇ 22ಕ್ಕೆ ಏರಿಕೆ ಆಗಿದೆ. 2010 ಹಾಗೂ 15ರ ಮಧ್ಯೆ ಶೇ 8 ರಷ್ಟಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಜಗತ್ತಿನ ನಾಲ್ಕನೇ ಅತಿ ದೊಡ್ಡ ರೈಲು ವ್ಯವಸ್ಥೆಯನ್ನು ನಿರ್ವಹಿಸುವ ಭಾರತದ ರೈಲ್ವೆ ಸಚಿವಾಲಯ, ಹಳಿಗಳ ದುರಸ್ತಿಗೆ ಆಲೋಚನೆ ಮಾಡಿದೆ. ಆದರೆ ಹಣಕಾಸಿನ ಕೊರತೆ ಕಾರಣವು ಈ ಬೃಹತ್ ಯೋಜನೆಗೆ ತಡೆಯಾಗಿ ಪರಿಣಮಿಸಿದೆ.












Click it and Unblock the Notifications