ಹೀರಾಬೆನ್ ಮೋದಿ ನಿಧನ: ನರೇಂದ್ರ ಮೋದಿ ಭಾವನಾತ್ಮಕ ಟ್ವೀಟ್- ಗಣ್ಯರಿಂದ ಸಂತಾಪ
ಅಹಮದಾಬಾದ್ ಡಿಸೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ವಿಧಿವಶರಾಗಿದ್ದಾರೆ. ಹೀರಾಬೆನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಧಾನಿ ಮೋದಿ ಕೂಡ ತಮ್ಮ ತಾಯಿಯನ್ನು ಭೇಟಿ ಮಾಡಲು ಅಹಮದಾಬಾದ್‌ನ ಆಸ್ಪತ್ರೆಗೆ ತೆರಳಿದ್ದರು. ಹೀರಾಬೆನ್ ಮೋದಿ ಅವರಿಗೆ 100 ವರ್ಷ ವಯಸ್ಸಾಗಿತ್ತು.
शानदार शताब्दी का ईश्वर चरणों में विराम... मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है। pic.twitter.com/yE5xwRogJi
— Narendra Modi (@narendramodi) December 30, 2022
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯ ನಿಧನದ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, "ಈ ಜೀವನ ದೇವರ ಪಾದದ ಮೇಲೆ ನಿಂತಿದೆ. ನಾನು ಯಾವಾಗಲೂ ತಾಯಿಯಲ್ಲಿ ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಇದರಲ್ಲಿ ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನವಿದೆ" ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಹಲವು ಪೋಸ್ಟ್‌ಗಳನ್ನು ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ತಮ್ಮ ತಾಯಿಯೊಂದಿಗೆ ಕೊನೆಯ ಭೇಟಿಯನ್ನು ಸಹ ನೆನಪಿಸಿಕೊಂಡರು. ಅವರ 100ನೇ ಜನ್ಮದಿನದಂದು ನಾನು ಅವರನ್ನು ಭೇಟಿಯಾದಾಗ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಪರಿಶುದ್ಧತೆಯಿಂದ ಜೀವನ ನಡೆಸು ಎಂದು ಯಾವಾಗಲೂ ನೆನಪಿಸಿಕೊಳ್ಳುವ ಒಂದು ವಿಷಯವನ್ನು ಅವರು ಹೇಳಿದ್ದರು ಎಂದು ಪ್ರಧಾನಿ ಬರೆದಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಪ್ರಧಾನಿ ಮೋದಿ ಆಗಾಗ್ಗೆ ತಮ್ಮ ತಾಯಿಯನ್ನು ಭೇಟಿ ಮಾಡಲು ಗುಜರಾತ್‌ಗೆ ಹೋಗುತ್ತಿದ್ದರು. ಪ್ರಧಾನಿ ಮೋದಿಯವರು ತಮ್ಮ ತಾಯಿಯನ್ನು ಭೇಟಿಯಾಗುತ್ತಿರುವ ಚಿತ್ರವು ಆಗಾಗ ವೈರಲ್ ಆಗುತ್ತಿದ್ದವು. ಅದರಲ್ಲಿ ಇಬ್ಬರ ನಡುವಿನ ವಾತ್ಸಲ್ಯವು ಕಾಣಿಸುತ್ತಿತ್ತು.
ತಾಯಿ ನಿಧನದ ನಂತರ ಪ್ರಧಾನಿ ಮೋದಿ ಇಂದು ಬೆಳಗ್ಗೆ 7.30ಕ್ಕೆ ಅಹಮದಾಬಾದ್ ತಲುಪಲಿದ್ದಾರೆ. ಅಹಮದಾಬಾದ್ ತಲುಪಿದ ನಂತರ, ಅವರು ಹೀರಾಬೆನ್ ವಾಸಿಸುತ್ತಿದ್ದ ತನ್ನ ಸಹೋದರನ ಮನೆಗೆ ತಲುಪುತ್ತಾರೆ. ಇಲ್ಲಿ ಹೀರಾಬೆನ್ ಅವರ ಮೃತ ದೇಹವನ್ನು ಇರಿಸಲಾಗಿದೆ.

ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಮಾತನಾಡಿ, 'ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ತಾಯಿ ತಾಯಿಯೇ. ಅವರ ಅಗಲಿಕೆ ತುಂಬಾ ದುಃಖ ತಂದಿದೆ. ಹಗಲು ರಾತ್ರಿ ಸೇವೆ ಮುಗಿಸಿ ಅಹಮದಾಬಾದ್‌ಗೆ ಪ್ರಧಾನಿ ಹೋದಾಗಲೆಲ್ಲ ತಮ್ಮ ತಾಯಿಯ ಆಶೀರ್ವಾದ ಪಡೆಯುತ್ತಿದ್ದರು. ಇದು ಪ್ರಧಾನಿಗೆ ದುಃಖದ ಸುದ್ದಿ. ಅವರು ಪ್ರಧಾನಿ ಮೋದಿಯವರ ದೊಡ್ಡ ಶಕ್ತಿಯಾಗಿದ್ದರು. ಹೀರಾಬೆನ್ 100 ವರ್ಷಗಳನ್ನು ಪೂರೈಸಿದರು. ಆದರೆ ಅವರು ಪ್ರಧಾನಿಯ ದೊಡ್ಡ ಶಕ್ತಿಯಾಗಿದ್ದರು' ಎಂದು ಬರೆದಿದ್ದಾರೆ.












Click it and Unblock the Notifications