Rain Alert: ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ- ಮಾಹಿತಿ, ವಿವರ
ನವದೆಹಲಿ, ಸೆಪ್ಟೆಂಬರ್ 30: ಈ ವಾರಾಂತ್ಯದ ಎರಡು ದಿನಗಳಲ್ಲಿ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಕರಾವಳಿ, ಗೋವಾ ಮತ್ತು ಮಹಾರಾಷ್ಟ್ರದ ನೈಋತ್ಯ ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ತಮಿಳುನಾಡಿನ ಕರಾವಳಿ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆ ಬೀಳಬಹುದು.

ಕರ್ನಾಟಕದಲ್ಲಿ ಮಳೆ
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ
ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
*ಉತ್ತರ ಕನ್ನಡ: 130 ಮಿ.ಮೀ
*ಬೆಳಗಾವಿ: 111.5 ಮಿ.ಮೀ
*ದಕ್ಷಿಣ ಕನ್ನಡ: 109.5 ಮಿ.ಮೀ
*ಚಿಕ್ಕಮಗಳೂರು: 102 ಮಿ.ಮೀ
*ಉಡುಪಿ: 101.5 ಮಿ.ಮೀ
*ಬೀದರ್: 77.5 ಮಿ.ಮೀ
*ಶಿವಮೊಗ್ಗ: 72 ಮಿ.ಮೀ
*ಕಲಬುರಗಿ: 64 ಮಿ.ಮೀ
*ರಾಯಚೂರು: 51.5 ಮಿ.ಮೀ
*ಕೊಡಗು 35.5 ಮಿ.ಮೀ
ಹೆಚ್ಚು ಮಳೆ ಬಿದ್ದ ಸ್ಥಳಗಳು
*ಹಾರವಾಡ, ಉತ್ತರ ಕನ್ನಡ: 130 ಮಿ.ಮೀ
*ಹಟ್ಟಿಕೆರೆ, ಉತ್ತರ ಕನ್ನಡ: 116.5 ಮಿ.ಮೀ
*ಮೂಡಗೇರಿ, ಉತ್ತರ ಕನ್ನಡ: 115.5 ಮಿ.ಮೀ
*ಪರವಾಡ, ಬೆಳಗಾವಿ: 111.5 ಮಿ.ಮೀ
*ಮಲವಂತಿಗೆ, ದಕ್ಷಿಣ ಕನ್ನಡ: 109.5 ಮಿ.ಮೀ
*ಬಂಕಲ್, ಚಿಕ್ಕಮಗಳೂರು: 102 ಮಿ.ಮೀ
*ಹಿರ್ಗಾನ, ಉಡುಪಿ: 101.5 ಮಿ.ಮೀ

ಕೇರಳದಲ್ಲಿ ಯೆಲ್ಲೋ ಅಲರ್ಟ್
ಕೊಟ್ಟಾಯಂ ಹೊರತುಪಡಿಸಿ ರಾಜ್ಯದ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ 6 ಸೆಂ.ಮೀ ಮತ್ತು 11 ಸೆಂ.ಮೀ ನಡುವೆ ಭಾರೀ ಮಳೆಯಾಗಲಿದೆ ಎಂದು ತಿಳಿದುಬಂದಿದೆ.
ಅಲಪ್ಪುಳ ಜಿಲ್ಲೆಯ ಕುಟ್ಟನಾಡ್ ಪ್ರದೇಶದ ಪುಟ್ಟ ಕುಗ್ರಾಮವಾದ ಎಡತುವಾದಲ್ಲಿ ಭಾರೀ ಮಳೆಯಿಂದಾಗಿ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಿವೆ.
ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ತಿರುವನಂತಪುರದ ಸಮೀಪದ ಅರುವಿಕ್ಕರ ಅಣೆಕಟ್ಟಿನ ಶೆಟರ್‌ಗಳನ್ನು 160 ಸೆಂಟಿಮೀಟರ್‌ಗೆ ಏರಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಕೆಲ ಗಂಟೆಗಳಲ್ಲಿ ಮಳೆ ತೀವ್ರಗೊಳ್ಳುವ ನಿರೀಕ್ಷೆಯಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜನರಿಗೆ ಹಾಗೂ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.












Click it and Unblock the Notifications