IMD Cyclone Alert: ವಾಯುಭಾರ ಕುಸಿತ: ಈ ಭಾಗಗಳಲ್ಲಿ ಆ. 05ರವರೆಗೆ ಬಿರುಗಾಳಿ ಸಹಿತ ರಣಮಳೆ!
IMD Weather Forecast: ಮುಂಗಾರು ಮಳೆ ಒಂದು ವಾರದಲ್ಲಿ ಏರಳಿತದಿಂದ ಕೂಡಿದ್ದು, ಗುರುವಾರ ಕೊಂಚ ತೀವ್ರಗೊಂಡಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಉತ್ತರದ ರಾಜ್ಯಗಳಲ್ಲಿ ಮಳೆ ಮತ್ತೆ ಜೋರಾಗಿದೆ. ಇದಕ್ಕೆ ಸಮುದ್ರ ಮೇಲ್ಮೈ ಹಾಗೂ ಭೂಮಿ ಮೇಲ್ಮೈನಲ್ಲಿ ಸೃಷ್ಟಿಯಾದ ವೈಪರೀತ್ಯಗಳೇ ಕಾರಣವಾಗಿದೆ. ಮುಂದಿನ ಆಗಸ್ಟ್ 4ರವರೆಗೆ ಈ ಭಾಗಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ಮಾನ್ಸೂನ್ ಸ್ಟ್ರಫ್ ಗಂಗಾನಗರ, ಪಿಲಾನಿ, ಗ್ವಾಲಿಯರ್, ಪ್ರಯಾಗ್‌ರಾಜ್, ರಾಂಚಿ, ಡೈಮಂಡ್ ಹಾರ್ಬರ್ ಮೂಲಕ ಹಾದುಹೋಗಲಿದೆ. ಇದು ಸರಾಸರಿ ಸಮುದ್ರ ಮಟ್ಟದಿಂದ ಎತ್ತರವಾಗಿದ್ದು, ನಾಳೆ ಹೊತ್ತಿಗೆ ಆಗ್ನೇಯಕ್ಕೆ ಈಶಾನ್ಯ ಬಂಗಾಳ ಕೊಲ್ಲಿಯತ್ತ ಸಾಗಲಿದೆ. ಉತ್ತರ ಪ್ರದೇಶದ ನೈಋತ್ಯ ಭಾಗ ಮತ್ತು ನೆರೆಹೊರೆಗಳಲ್ಲಿ ಮೇಲೆ ಸಹ ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಸದ್ಯ ಇದು ಸಮುದ್ರ ಮಟ್ಟದಿಂದ ಸರಾಸರಿ 5.8 ಕಿ.ಮೀ ವರೆಗೆ ವಿಸ್ತರಿಸಿದೆ.

ಅದಲ್ಲದೇ ಬಂಗಾಳ ಕೊಲ್ಲಿ ವಾಯುವ್ಯ ಭಾಗ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗಂಗಾ ಪಶ್ಚಿಮದ ಮೇಲೆ ಮೇಲಿನ ವಾಯು ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದೆ. ಇದು ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗಳು ಈಗ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳ ಮೇಲಿದ್ದು, ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದವರೆಗೆ ವಿಸ್ತರಣೆ ಆಗಿದೆ. ಅದೇ ರೀತಿ ರಾಜಸ್ಥಾನ ರಾಜ್ಯ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ಇಲ್ಲೊಂದು ಚಂಡಮಾರುತದ ಪರಿಚಲನೆಯ ಬಿರುಗಾಳಿ ನಿರ್ಮಾಣವಾಗಿದೆ.
ಭಾರೀ ಮಳೆ ಎಚ್ಚರಿಕೆ: ಶಾಲೆಗಳು ಬಂದ್ ಸಾಧ್ಯತೆ?
ಈ ಮೇಲಿನ ವೈಪರೀತ್ಯಗಳು ಬಿರುಗಾಳಿ ಹಾದು ಹೋಗುವ, ಅಥವಾ ಯಾವ ದಿಕ್ಕಿನಲ್ಲಿ ಬಿಸುತ್ತದೆಯೋ ಭಾಗಗಳಲ್ಲಿ ಭಾರೀಯಿಂದ ಅತ್ಯಧಿಕ ಭಾರೀ ಮಳೆ ನಿರೀಕ್ಷೆ ಇದೆ. ಪೂರ್ವ ರಾಜಸ್ಥಾನ ಭಾಗದಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ. ಇಲ್ಲಿನ ಶಾಲೆ ಕಾಲೆಗಳಿಗೆ ಮುಂದಿನ ಮೂರು ದಿನ ರಜೆ ಘೋಷಿಸುವ ಲಕ್ಷಣಗಳು ಇವೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮತ್ತು ಮೇಘಾಲಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹಾವಾಮಾನ ತಜ್ಞರು ತಿಳಿಸಿದ್ದಾರೆ.
ಮಣಿಪುರ, ಮಿಜೋರಾಂ, ಮಧ್ಯಪ್ರದೇಶ, ನಾಗಾಲ್ಯಾಂಡ್, ತ್ರಿಪುರ, ಹಿಮಾಲಯ ತಪ್ಪಲುಗಳು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಹಾಗೂ ಉತ್ತರಾಖಂಡ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬಿಹಾರ, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ, ಜಾರ್ಖಂಡ್‌ನ ಪ್ರತ್ಯೇಕ ಸ್ಥಳಗಳಲ್ಲಿ ಗಾಳಿಯವೇ ಪ್ರತಿ ಒಂದು ಗಂಟೆಗೆ ಸುಮಾರು 40 ಕಿಲೋ ಮಿಟರ್ ವೇಗದಲ್ಲಿ ಬಿಸಲಿದೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ಹಲವು ಕಡೆಗಳಲ್ಲಿ ಮುಂದಿನ ಮೂರರಿಂದ ಐದು ದಿನ ಬಿರುಗಾಳಿ ಸಹಿತ ವ್ಯಾಪಕ ಮಳೆಯ ಸಂಭವವಿದೆ ಎಂದು ಇಂದಿನ ಹವಾಮಾನ ಇಲಾಖೆ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications