ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆಗಳಲ್ಲಿ ಕೇರಳ,ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ

|
Google Oneindia Kannada News

ನವದೆಹಲಿ,ಫೆಬ್ರವರಿ 27: ಮುಂದಿನ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನದಲ್ಲಿ ಚಂಡಮಾರುತವೇಳುವ ಸಾಧ್ಯತೆ ಇದೆ, ಇದರಿಂದ ರಾಜಸ್ಥಾನದ ಮೇಲೂ ಪರಿಣಾಮ ಉಂಟಾಗಲಿದೆ.

ಫೆ.27 ರಂದು ಜಮ್ಮು ಮತ್ತು ಕಾಶ್ಮೀರ,ಮುಜಾಫರಾಬಾದ್,ಹಿಮಾಚಲಪ್ರದೇಶ,ಉತ್ತರಾಖಂಡ್,ಕೇರಳ,ಮೇಘಾಲಯ,ನಾಗಾಲ್ಯಾಂಡ್,ಅರುಣಾಚಲಪ್ರದೇಶ, ಪಂಜಾಬ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಹೇಗಿದೆ? ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಹೇಗಿದೆ?

ಫೆ.28 ರಂದು ಅರುಣಾಚಲಪ್ರದೇಶ,ಕೇರಳ,ಮಾಹೆಯಲ್ಲಿ ಮಳೆಯಾಗಲಿದೆ.ಮಾರ್ಚ್ 1 ರಂದು ಜಮ್ಮು ಮತ್ತು ಕಾಶ್ಮೀರ,ಗಿಲ್ಗಿಟ್, ಮುಜಾಫರಾಬಾದ್ ಹಾಗೂ ಅರುಣಾಚಲಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Heavy Rainfall Will Occur Kerala,West Bengal And Some Other States With In Next 24 Hours

ಹಿಮಾಚಲ ಪ್ರದೇಶ,ಕೇರಳ,ಉತ್ತರ ಪ್ರದೇಶ, ಅಸ್ಸಾಂ,ಪಶ್ಚಿಮ ಬಂಗಾಳ, ಮೇಘಾಲಯದಲ್ಲಿ ಮಳೆಯಾಗಲಿದೆ. ಪಂಜಾಬ್,ಹರ್ಯಾಣದಲ್ಲೂ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದೆ.

ಶುಕ್ರವಾರ ಕುಪ್ವಾರದಲ್ಲಿ 5 ಸೆಂ.ಮೀ, ಬನಿಹಾಲ್‌ನಲ್ಲಿ 4 ಸೆಂ.ಮೀ,ಗುಲ್‌ಮಾರ್ಗ್‌,ಪಹಲ್‌ಗಾಂವ್,,ಖ್ವಾಜಿಗುಂಡ್‌ನಲ್ಲಿ 2 ಸೆಂ.ಮೀ ಮಳೆಯಾಗಿದೆ.ಇನ್ನು ಜಮ್ಮು ಮತ್ತು ಕಾಶ್ಮೀರ, ಕೇರಳದ ಕೆಲವು ಭಾಗ,ಮುಜಾಫರಾಬಾದ್,ಲಡಾಖ್,ಗಿಲ್ಗಿಟ್,ಉತ್ತರಾಖಂಡ್‌ನಲ್ಲಿ ಕೂಡ ಮಳೆಯಾಗಿದೆ.

ಸಿಕ್ಕಿಂ ಹಾಗೂ ಆಂಧ್ರಪ್ರದೇಶ,ಕರ್ನಾಟಕದಲ್ಲಿ ಮಂಜುಕವಿದ ವಾತಾವರಣವಿದೆ. ಕೆಲವೆಡೆ ಮೋಡಕವಿದ ವಾತಾವರಣ ಕೂಡ ನಿರ್ಮಾಣವಾಗಿದೆ.ಪಂಜಾಬ್, ಹರ್ಯಾಣ,ಚಂಡೀಗಢ,ದೆಹಲಿ, ರಾಜಸ್ಥಾನ, ಉತ್ತರಾಖಂಡ್,ಉತ್ತರ ಪ್ರದೇಶದಲ್ಲಿ 5.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್,ಗಿಲ್ಗಿಟ್,ಬಿಹಾರ್,ವಿದರ್ಭಾ,ಮಣಿಪುರ,ತಮಿಳುನಾಡು,ಆಂಧ್ರಪ್ರದೇಶದ ಕರಾವಳಿ,ಪುದುಚೇರಿಯಲ್ಲಿ 3.1 ಡಿಗ್ರಿ ಸೆಲ್ಸಿಯಸ್‌ನಿಂದ 5.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

English summary
Meteorological department predicted that Heavy Rainfall Will Occur Kerala,West Bengal And Some Other States With In Next 24 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X