Heavy Rain: ಕೆಲವೇ ಕ್ಷಣಗಳಲ್ಲಿ ಗುಡುಚು, ಮಿಂಚು ಸಹಿತ ಭಾರೀ ಮಳೆ-ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
Heavy Rain: ದೇಶದ ಬಹುತೇಕ ಭಾಗಗಳಲ್ಲಿ ಇದೀಗ ಮಳೆರಾಯನ ಆರ್ಭಟ ಕಡಿಮೆಯಾಗಿದೆ. ಕೆಲವು ರಾಜ್ಯಗಳಲ್ಲಿ ಮಾತ್ರ ಬಿಡುವಿಲ್ಲದೆ, ಆರ್ಭಟಿಸುತ್ತಿದ್ದಾನೆ. ಹಾಗೆಯೇ ಇಂದು (ಅಕ್ಟೋಬರ್ 2) ಇನ್ನೂ ಕೆಲವೇ ಕ್ಷಣಗಳಲ್ಲಿ ಹಲವು ಭಾಗಗಳಲ್ಲಿ ಗುಡುಚು, ಮಿಂಚು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯು, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಕೇರಳ ಮತ್ತು ತಮಿಳುನಾಡು, ಕರ್ನಾಟಕದ ಹಲವು ಭಾಗಗಳಲ್ಲಿ ಅಕ್ಟೋಬರ್ ಇಂದು (ಅಕ್ಟೋಬರ್ 03) ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ವಾಯುವ್ಯ ಭಾರತದಲ್ಲಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಆದರೆ ಮಧ್ಯ ಭಾರತ, ದಕ್ಷಿಣ ಭಾರತ ಮತ್ತು ಈಶಾನ್ಯದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇನ್ನು ಅಕ್ಟೋಬರ್‌ನಲ್ಲಿ ಈಶಾನ್ಯ ಮತ್ತು ವಾಯುವ್ಯ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಡಿಕೆಗಿಂತ ಹೆಚ್ಚಿನ ಮಳೆ: ಭಾರತದಲ್ಲಿ 2024 ಮುಂಗಾರು ಋತುವಿನಲ್ಲಿ ಒಟ್ಟು 934.8 ಮಿಲಿ ಮೀಟರ್ ಮಳೆಯಾಗಿದೆ, ದೀರ್ಘಾವಧಿಯ ಸರಾಸರಿಯ 107.6%, ಈ ಮೂಲಕ 7.6% ಹೆಚ್ಚಳವಾಗಿದೆ. ಮಧ್ಯ ಭಾರತ 19%, ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ 14% ಹೆಚ್ಚಳ ಮಳೆಯಾಗಿದೆ. ವಾಯವ್ಯ ಭಾರತದಲ್ಲೂ ವಾಡಿಕೆಗಿಂತ ಶೇಕಡ 7ರಷ್ಟು ಹೆಚ್ಚು ಮಳೆಯಾಗಿದೆ.
ಇನ್ನು ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಶೇಕಡ 14ರಷ್ಟು ಮಳೆಯ ಕೊರತೆಯಾಗಿದೆ ಎಂದು ತಿಳಿದುಬಂದಿದೆ. ಜೂನ್‌ನಲ್ಲಿ 11% ನಷ್ಟು ಮಳೆಯ ಕೊರತೆ ಕಂಡುಬಂದಿತು. ಆದರೆ, ಜುಲೈನಲ್ಲಿ 9% ಹೆಚ್ಚು ಮಳೆ ದಾಖಲಾಗಿದ್ದು, ಆಗಸ್ಟ್‌ನಲ್ಲಿ 15.3% ಹೆಚ್ಚು ಮಳೆಯಾಗಿದೆ ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ 11.6% ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಬಾರಿ ಅಂದರೆ 2023ರಲ್ಲಿ ಮಳೆಯಿಲ್ಲದೆ, ದೇಶದ ಬಹುತೇಕ ಭಾಗಗಳಲ್ಲಿ ಬರ ತಾಂಡವಾ ಆಡುತ್ತಿತ್ತು. ಇನ್ನು ಈ ಬಾರಿ 2024ರ ಜೂನ್ ಆರಂಭವಾಗುತ್ತಿದ್ದಂತೆ ಕೇರಳಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಳಿಕ ದೇಶದ ಎಲ್ಲಾ ಭಾಗಗಳಲ್ಲೂ ಆವರಿಸಿಬಿಟ್ಟಿತ್ತು.
ಅಲ್ಲದೆ, ಈ ಬಾರಿಯ ಮಳೆರಾಯ ಬಹುತೇಕ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಅದರಲ್ಲೂ ಹರಿಯಾಣದಲ್ಲಿ ದೊಡ್ಡ ದೊಡ್ಡ ಸೇತುವೆಗಳು ಧರಶಾಯಿಯಾಗಿದ್ದವು. ಅದರಲ್ಲೂ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತವಾಗಿ ತುಂಬಾ ಜನರ, ಜನವಾರುಗಳ ಪ್ರಾಣಹಾನಿ ಸಂಭವಿಸಿದ್ದವು.
ಇನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗುಡ್ಡ ಕುಸಿತದಂತಹ ದೊಡ್ಡ ಅನಾಹತಗಳು ಸಂಭವಿಸಿದ್ದವು. ಇನ್ನು ಗುಡ್ಡ ಕುಸಿತದಿಂದ ಹಲವೆಡೆ ರೈಲು ಸಂಚಾರ, ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡ ಘಟನೆಗಳು ನಡೆದಿದ್ದವು. ಮತ್ತೊಂದೆಡೆ ನೋಡುವುದಾದರೆ, ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.












Click it and Unblock the Notifications