Weather forecast: ಕೇರಳ, ತಮಿಳುನಾಡಿನಲ್ಲಿ ಯೆಲ್ಲೋ ಅಲರ್ಟ್‌- ಕರ್ನಾಟಕದ ಈ ಜಿಲ್ಲೆಗಳಲ್ಲೂ ಮಳೆ, ಮಾಹಿತಿ, ವಿವರ

ಮುಂದಿನ ಮೂರು ದಿನಗಳ ಕಾಲ ತಮಿಳುನಾಡು ಮತ್ತು ಕೇರಳದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ಮತ್ತು ಸೋಮವಾರ ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ತಮಿಳುನಾಡಿನಲ್ಲಿ ಭಾನುವಾರ ಮತ್ತು ಸೋಮವಾರದಂದು ಮಳೆಯಾಗುವ ನಿರೀಕ್ಷೆ ಇದೆ. ವಿಲ್ಲುಪುರಂ, ಕಲ್ಲಕ್ಕುರಿಚಿ, ಕಡಲೂರು, ಸೇಲಂ, ಪೆರಂಬಲೂರು, ತಿರುವರೂರ್, ಪುದುಕೊಟ್ಟೈ, ತಿರುಚಿರಾಪಳ್ಳಿ, ತಂಜಾವೂರು, ದಿಂಡಿಗಲ್, ಮಧುರೈ, ವಿರುಧುನಗರ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.

Heavy rain to lash Kerala, Tamil Nadu and Karnataka: Yellow alert in these districts today

ಇದೇ ಅವಧಿಯಲ್ಲಿ ಕೇರಳದ ಕಣ್ಣೂರು, ವಯನಾಡ್, ಕೋಝಿಕ್ಕೋಡ್, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಮತ್ತು ಇಡುಕ್ಕಿಯಲ್ಲಿ ಮಳೆ ಬೀಳಲಿದೆ.

ಕರ್ನಾಟಕದ ಚಿಕ್ಕಮಗಳೂರು ಮತ್ತು ಹಾಸನಕ್ಕೆ ಇದೇ ರೀತಿಯ ಎಚ್ಚರಿಕೆಗಳನ್ನು ನೀಡಲಾಗಿದೆ.

'ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಮಂಡಲದ ಕಡಿಮೆ ಪರಿಚಲನೆ ಚಾಲ್ತಿಯಲ್ಲಿದೆ. ಅಲ್ಲದೆ, ಮತ್ತೊಂದು ವಾಯುಮಂಡಲದ ಕಡಿಮೆ ಪರಿಚಲನೆಯು ಆಗ್ನೇಯ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದಾಗಿ ಮುಂದಿನ ಕೆಲವು ದಿನಗಳ ಕಾಲ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ' ಎಂದು ಐಎಂಡಿ ತಿಳಿಸಿದೆ.

Heavy rain to lash Kerala, Tamil Nadu and Karnataka: Yellow alert in these districts today

ಏತನ್ಮಧ್ಯೆ, 29 ಮತ್ತು 30 ರಂದು ತಂಜಾವೂರು, ತಿರುವರೂರು, ನಾಗಪಟ್ಟಣಂ, ಮೈಲಾಡುತುರೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಮತ್ತು ಇತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

'ಈಶಾನ್ಯ ಮಾನ್ಸೂನ್ ನಿಧಾನವಾಗಿ ಸುಧಾರಿಸುತ್ತದೆ. ಆರಂಭದಲ್ಲಿ, ಚೆನ್ನೈನಂತಹ ಉತ್ತರ ಕರಾವಳಿ ಪ್ರದೇಶಗಳಲ್ಲಿ ಮಳೆ ಆಗಬಹುದು. ಮೊದಲು ದಕ್ಷಿಣ ತಮಿಳುನಾಡಿಗೆ ಮಳೆಯಾಗುವ ನಿರೀಕ್ಷೆಯಿದೆ. ತಕ್ಷಣಕ್ಕೆ ಬಲವಾದ ಮಳೆಯನ್ನು ನಿರೀಕ್ಷಿಸಬೇಡಿ' ಎಂದು ಹಮಾವಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

'ವಾರಾಂತ್ಯದಲ್ಲಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಈಶಾನ್ಯ ಮಾನ್ಸೂನ್ ಮಳೆಯನ್ನು ನಿರೀಕ್ಷಿಸಬಹುದು. ಮುಂದಿನ 7 ದಿನಗಳ ಕಾಲ ಚೆನ್ನೈ ಮತ್ತು ಉಪನಗರಗಳಲ್ಲೂ ಮಳೆಯಾಗಲಿದೆ. ಮಧ್ಯ, ಡೆಲ್ಟಾ, ಪಶ್ಚಿಮ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಭಾರೀ ಮಳೆ ದಾಖಲಾಗಬಹುದು. ಸಂಜೆ ಅಥವಾ ರಾತ್ರಿಯಿಂದ ಬೆಳಗಿನ ಅವಧಿಯಲ್ಲಿ ಕರಾವಳಿ ವಲಯದಲ್ಲಿ ಮಳೆಯಾಗಲಿದೆ' ಎಂದು ಹಮಾವಾನ ತಜ್ಞರು ತಿಳಿಸಿದ್ದಾರೆ.

Heavy rain to lash Kerala, Tamil Nadu and Karnataka: Yellow alert in these districts today

ಕೇರಳದಲ್ಲಿ ಯೆಲ್ಲೋ ಅಲರ್ಟ್‌

ಕೇರಳದ ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ಶನಿವಾರ ಯೆಲ್ಲೋ ಅಲರ್ಟ್ ಘೋಷಿಸಿದೆ. ಐಎಂಡಿ ಮುನ್ಸೂಚನೆ ಪ್ರಕಾರ, ಶನಿವಾರದಂದು ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಅಕ್ಟೋಬರ್ 30 ರ ವರೆಗೆ ಗುಡುಗು ಸಹಿ ಭಾರೀ ಮಳೆಗೆ ಕೇರಳ ಸಾಕ್ಷಿಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಅಕ್ಟೋಬರ್ 29 ಮತ್ತು 30 ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯೆಲ್ಲೋ ಅಲರ್ಟ್‌

ಅಕ್ಟೋಬರ್ 29: ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಕೋಝಿಕೋಡ್, ವಯನಾಡ್ ಮತ್ತು ಕಣ್ಣೂರು

ಅಕ್ಟೋಬರ್ 30: ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+