ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

|
Google Oneindia Kannada News

ತಿರುವನಂತಪುರಂ, ಮೇ 30: ಜೂನ್ 1ಕ್ಕೆ ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು ಅದಕ್ಕೂ ಮುನ್ನ ಮೇ 30 ರಂದು ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶನಿವಾರ ತಿರುವನಂತಪುರಂನಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ದೊರೆತಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

20.4 ಸೆಂ.ಮೀನಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಶುಕ್ರವಾರ ಸಂಜೆ ನೀಡಿದ ಹವಾಮಾನ ವರದಿಯಲ್ಲಿ ಉಲ್ಲೇಖವಾಗಿದೆ.

ಬೆಂಗಳೂರಲ್ಲಿ ವರುಣನ ಅಬ್ಬರ; 45 ಮರಗಳು ಧರೆಗೆಬೆಂಗಳೂರಲ್ಲಿ ವರುಣನ ಅಬ್ಬರ; 45 ಮರಗಳು ಧರೆಗೆ

ಕೇರಳದ ಜಲ ನಿಗಮ ಅರುವಿಕ್ಕರ ಜಲಾಶಯದ ಮೂರು ಬಾಗಿಲುಗಳನ್ನು ತೆರೆದಿದ್ದಾರೆ. ಎರಡು ಬಾಗಿಲುಗಳನ್ನು ಒಂದು ಮೀಟರ್‌ನಷ್ಟು ಮತ್ತೊಂದು ಬಾಗಿಲನ್ನು ನಾಲ್ಕು ಮೀಟರ್‌ನಷ್ಟು ತೆರೆಯಲಾಗಿದೆ.

ಸುದ್ದಿಕ್ವಿಜ್ : 10 ಸರಳ ಪ್ರಶ್ನೆಗಳಿವೆ, ಸುಲಭವಾಗಿ ಉತ್ತರಿಸಿಸುದ್ದಿಕ್ವಿಜ್ : 10 ಸರಳ ಪ್ರಶ್ನೆಗಳಿವೆ, ಸುಲಭವಾಗಿ ಉತ್ತರಿಸಿ

ಪೆಪ್ಪರ ಪ್ರದೇಶದಲ್ಲಿ ಎರಡು ಬಾಗಿಲುಗಳನ್ನು ತೆರೆಯಲಾಗಿದ್ದು, ಎರಡೂ 30 ಸೆಂ.ಮೀನಷ್ಟಿದೆ. ಹೆಚ್ಚುಮಳೆಯಾದರೆ ಪೆಪ್ಪರ ಪ್ರದೇಶದಿಂದ ಅರುವಿಕ್ಕರ ಜಲಾಶಯಕ್ಕೆ ನೀರು ಹರಿದುಹೋಗುತ್ತದೆ.

ದೆಹಲಿಯಲ್ಲಿ 2-3 ದಿನ ಮಳೆ

ದೆಹಲಿಯಲ್ಲಿ 2-3 ದಿನ ಮಳೆ

ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದ್ದು, ಮುಂದಿನ 2-3 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಸಂಜೆಯೂ ಮಳೆಯಾಗಿತ್ತು. ಶುಕ್ರವಾರ ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶ 40.3 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ

50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ

ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ವರೆಗೆ ತಗ್ಗುವ ಸಾಧ್ಯತೆ ಇದೆ. ಹಾಗೆಯೇ ಜೂನ್ 2ರ ನಂತರ ಮತ್ತೆ 41 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಮುನ್ಸೂಚನೆ ದೊರೆತಿದೆ. ಗುರುವಾರದಿಂದ ಬಿಸಿ ಗಾಳಿ ಕಡಿಮೆಯಾಗಿದೆ.

ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆ

ಪಂಜಾಬ್ ಮತ್ತು ಹರ್ಯಾಣದಲ್ಲಿ ಮಳೆ

ಪಂಜಾಬ್ ಮತ್ತು ಹರ್ಯಾಣದಲ್ಲಿ ಮಳೆ

ಪಂಜಾಬ್ ಮತ್ತು ಹರ್ಯಾಣದಲ್ಲಿ ಶುಕ್ರವಾರ ಮಳೆಯಾಗಿದ್ದು, ಶನಿವಾರವೂ ಕೂಡ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 1 ರಿಂದ ಮೇ 29ರವರಗೆ ಪಂಜಾಬ್‌ನಲ್ಲಿ 22.3 ಮಿ.ಮೀನಷ್ಟು ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ 63.5 ಮಿ.ಮೀನಷ್ಟು ಮಳೆ, ಹರ್ಯಾಣದಲ್ಲಿ 4.1 ಮಿ.ಮೀನಷ್ಟು ಮಳೆಯಾಗಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಮಳೆ

ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಮಳೆ

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಶುಕ್ರವಾರ ಬೆಂಗಳೂರಿನಲ್ಲಿ ಸರಾಸರಿ 22.2 ಮಿ.ಮೀನಷ್ಟು ಮಳೆಯಾಗಿದೆ.ಬ್ಯಾಟರಾಯನಪುರದಲ್ಲಿ ಅತಿ ಹೆಚ್ಚು ಅಂದರೆ 71.5 ಮಿ.ಮೀನಷ್ಟು ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 42.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ಬೆಳಗಾವಿ, ಧಾರವಾಡ, ರಾಯಚೂರು, ಗದಗ, ಹಾವೇರಿ, ಯಾದಗಿರಿ, ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 14ರಂದು ಬೆಂಗಳೂರಲ್ಲಿ ಭಾರಿ ಮಳೆ ಮುನ್ಸೂಚನೆ: 1 ವಾರ ರಾಜ್ಯದಲ್ಲಿ ಮಳೆಮೇ 14ರಂದು ಬೆಂಗಳೂರಲ್ಲಿ ಭಾರಿ ಮಳೆ ಮುನ್ಸೂಚನೆ: 1 ವಾರ ರಾಜ್ಯದಲ್ಲಿ ಮಳೆ

English summary
Heavy rainfall is likely to continue in parts of Thiruvananthapuram district, Karnataka, Delhi, Haryana on Saturday, prompting the India Meteorological Department (IMD) to issue a yellow alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X