ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಮಳೆ ಮುನ್ಸೂಚನೆ
ನವದೆಹಲಿ ಆಗಸ್ಟ್ 04: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ. ದೆಹಲಿಯಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ದೆಹಲಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ಇಲಾಖೆ ಹೇಳಿದೆ. ಬುಧವಾರ ದೆಹಲಿಯ ಹಲವೆಡೆ ಮಳೆಯಾಗಿದೆ. ಇದರಿಂದಾಗಿ ಜನರು ಶಾಖ ಮತ್ತು ತೇವಾಂಶದಿಂದ ಮುಕ್ತರಾಗಿದ್ದಾರೆ.
ಮತ್ತೊಂದೆಡೆ, ಯುಪಿಯಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. 32 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.

ಯುಪಿಯಲ್ಲಿ ಭಾರೀ ಮಳೆ ಮುನ್ಸೂಚನೆ
ಮುಜಾಫರ್‌ನಗರ, ಬಾಗ್‌ಪತ್, ಮೀರತ್, ಗಾಜಿಯಾಬಾದ್, ಹಾಪುರ್, ಗೌತಮ್ ಬುದ್ಧ ನಗರ, ಬುಲಂದ್‌ಶಹರ್, ಅಲಿಘರ್, ಮಥುರಾ, ಹತ್ರಾಸ್, ಆಗ್ರಾ, ಫಿರೋಜಾಬಾದ್, ಮೈನ್‌ಪುರಿ, ಇಟಾವಾ, ಔರೈಯಾ, ಬಿಜ್ನೋರ್, ಅಮ್ರೋಹಾ, ಜಲೌನ್, ಹಮೀರ್‌ಪುರ್, ಮಹೋಬಾ, ಝಾನ್ಸಿ, ಲಲಿತ್‌ಪುರ, ಆಗ್ರಾ, ಇಟಾವಾ, ಬಂದಾ, ಚಿತ್ರಕೂಟ, ಕೌಶಂಬಿ, ಪ್ರಯಾಗರಾಜ್, ಫತೇಪುರ್, ಸೋನ್ಭದ್ರಾ, ಮಿರ್ಜಾಪುರ್, ಸಂತ ಕಬೀರ್ ನಗರ, ಕಾನ್ಪುರ್ ದೇಹತ್, ಕಾನ್ಪುರ್ ಮತ್ತು ಶಾಮ್ಲಿಯಲ್ಲಿ ಮಳೆಯಾಗಲಿದೆ.
ಭಾರೀ ಮಳೆಗೆ ಸಿಲುಕಿದ ದಕ್ಷಿಣ ಭಾರತ
ದಕ್ಷಿಣ ಭಾರತ ಭಾರೀ ಮಳೆಗೆ ಸಿಲುಕಿದ್ದು, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ಕನ್ಯಾಕುಮಾರಿ, ತಿರುನಲ್ವೇಲಿ, ತೆಂಕಶಿ, ಥೇಣಿ, ಈರೋಡ್, ನೀಲಗಿರಿ, ಧರ್ಮಪುರಿ, ಸೇಲಂ, ಕಡಲೂರು, ಧರ್ಮಪುರಿ, ತಿರುಚಿರಾಪಳ್ಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರಾಖಂಡ, ಹಿಮಾಚಲ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಗುಜರಾತ್-ರಾಜಸ್ಥಾನದಲ್ಲೂ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಎಂಪಿ, ಬಿಹಾರ, ಛತ್ತೀಸ್ ಗಢ, ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮೋಡ ಕವಿದ ವಾತಾವರಣ
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಇಂದಿನಿಂದ ಮುಂದಿನ 24 ಗಂಟೆಗಳ ಒಳಗೆ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಉತ್ತರಾಖಂಡ ಮತ್ತು ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗೋವಾ, ತಮಿಳುನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆಯಾಗಿದೆ.












Click it and Unblock the Notifications