Heavy Rain: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: 14 ರಾಜ್ಯಗಳಲ್ಲಿ ಮುಂದಿನ 15 ದಿನ ಭಾರೀ ಮಳೆ: ಐಎಂಡಿ ಮುನ್ಸೂಚನೆ
Heavy Rain: ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಚಂಡಮಾರುತ ಪ್ರಸರಣ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಮಳೆ ಆಗುತ್ತಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ.
ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಹಾಗೂ ಪಶ್ಚಿಮ ಬಂಗಾಳ-ಉತ್ತರ ಒಡಿಶಾ ಕರಾವಳಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಕಡಿಮೆ ಒತ್ತಡದ ಪ್ರದೇಶವು 16 ಆಗಸ್ಟ್ 2026ರಂದು ಬೆಳಿಗ್ಗೆ 8:30 IST ವೇಳೆಗೆ ಅದೇ ಪ್ರದೇಶದಲ್ಲಿ ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರಮಟ್ಟದಿಂದ ಸುಮಾರು 7.6 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದ್ದು, ಎತ್ತರ ಹೆಚ್ಚಾದಂತೆ ನೈಋತ್ಯ ದಿಕ್ಕಿನತ್ತ ವಾಲಿದೆ. ಇದು ಮುಂದಿನ 24 ಗಂಟೆಗಳಲ್ಲಿ ವಾಯವ್ಯ ದಿಕ್ಕಿನತ್ತ ಚಲಿಸಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ.

ಮಾನ್ಸೂನ್ ಟ್ರಫ್ ಪ್ರಸ್ತುತ ಸರಾಸರಿ ಸಮುದ್ರಮಟ್ಟದಲ್ಲಿ ಅಮೃತಸರ, ಲುಧಿಯಾನಾ, ಮೊರಾದಾಬಾದ್, ಲಖನೌ, ವಾರಾಣಸಿ ಮೂಲಕ ಹಾದು, ಅಲ್ಲಿಂದ ವಾಯವ್ಯ ಬಂಗಾಳ ಕೊಲ್ಲಿ ಮತ್ತು ಪಶ್ಚಿಮ ಬಂಗಾಳ-ಉತ್ತರ ಒಡಿಶಾ ಕರಾವಳಿಗೆ ಹೊಂದಿಕೊಂಡಿರುವ ಕಡಿಮೆ ಒತ್ತಡದ ಪ್ರದೇಶದ ಕೇಂದ್ರದ ಮೂಲಕ ಸಾಗುತ್ತದೆ. ನಂತರ ಅನ್ನೇಯ ದಿಕ್ಕಿನಲ್ಲಿ ಮಧ್ಯ-ಪೂರ್ವ ಬಂಗಾಳ ಕೊಲ್ಲಿಯವರೆಗೆ ವಿಸ್ತರಿಸಿದೆ. ಶಿಯರ್ ವಲಯವು ಸರಿಸುಮಾರು 22°N ಅಕ್ಷಾಂಶದ ಉದ್ದಕ್ಕೂ, ಮಧ್ಯ ಮತ್ತು ಪಕ್ಕದ ಉತ್ತರ ಪರ್ಯಾಯ ದ್ವೀಪ ಭಾರತದಾದ್ಯಂತ 4.5 ಮತ್ತು 7.6 ಕಿ.ಮೀ ನಡುವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಇದರ ಪ್ರಭಾವದಿಂದ ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಹರಿಯಾಣದ ಪ್ರದೇಶಗಳಲ್ಲಿ ಮಳೆ ಮುಂದುವರಿದಿದೆ. ಮಾನ್ಸೂನ್ ಟ್ರಫ್‌ನಿಂದ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಆಗಲಿದೆ.
ಆಗಸ್ಟ್ 18 ಮತ್ತು ಆಗಸ್ಟ್ 20 ರ ನಡುವೆ ಬಂಗಾಳ ಕೊಲ್ಲಿಯಿಂದ ಒಳನಾಡಿಗೆ ಕಡಿಮೆ ಒತ್ತಡದ ಪ್ರದೇಶ ಚಲಿಸುವುದರಿಂದ ಪರಿಸ್ಥಿತಿಗಳು ಮತ್ತೆ ಬದಲಾಗುವ ಸಾಧ್ಯತೆ ಇದೆ. ಇದರಿಂದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಆಗಲಿದೆ.
Heavy Rain: ದಕ್ಷಿಣ ಭಾರತದಲ್ಲೂ ಮಳೆ
ಇನ್ನು ಕರ್ನಾಟಕದ ಕರಾವಳಿ ಭಾಗ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
Heavy Rain: 14 ರಾಜ್ಯಗಳಲ್ಲಿ 15 ದಿನ ಮಳೆ
ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತ - ಉತ್ತರ ಭಾರತ ಸೇರಿದಂತೆ 14 ರಾಜ್ಯಗಳಲ್ಲಿ ಮುಂದಿನ 15 ದಿನಗಳ ವರೆಗೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬರದ ಛಾಯೆಯ ನಡುವೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಮಳೆ ಮುಂದುವರಿದಿದೆ.


Click it and Unblock the Notifications
