ರೈಲಿನಲ್ಲಿ ಹೆಚ್ಚು ಲಗೇಜ್‌ಗಳನ್ನು ತರುವಂತಿಲ್ಲ: ಮಿತಿ ಎಷ್ಟು?

ಬೆಂಗಳೂರು, ಜೂನ್ 6: ಹೆಚ್ಚು ಲಗೇಜುಗಳನ್ನು ರೈಲು ಪ್ರಯಾಣಿಕರು ತರುವಂತಿಲ್ಲ, ನಿಗದಿಗಿಂತಲೂ ಹೆಚ್ಚಿನ ಲಗೇಜು ತಂದರೆ 6 ಪಟ್ಟು ದಂಡ ತೆರಬೇಕಾಗುತ್ತದೆ.

ಹೌದು ವಿಮಾನ ಪ್ರಯಾಣದಂತೆಯೇ ಹೆಚ್ಚಿನ ಲಗೇಜುಗಳನ್ನು ರೈಲ್ವೆ ಪ್ರಯಾಣಿಕರು ತರುವಂತಿಲ್ಲ, ಕೆಲವು ಪ್ರಯಾಣಿಕರು ಹೆಚ್ಚಿನ ಲಗೇಜು ತಂದು ಬೋಗಿಯಲ್ಲಿ ತುಂಬಿ ಬಿಡುತ್ತಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿರುವ ದೂರುಗಳನ್ನು ಗಮನದಲ್ಲಿಟ್ಟುಕೊಂಡಿರುವ ರೈಲ್ವೆ ಇಲಾಖೆ ಬ್ಯಾಗ್‌ಗಳೂ ಸೇರಿದಂತೆ ಲಗೇಜಿಗೆ ಸಂಬಂಧಿಸಿದ ಮೂರು ದಶಕಗಳಷ್ಟು ಹಳೆಯದಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.

ಈಗಿರುವ ನಿಯಮಗಳಂತೆ ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಪ್ರಯಾಣಿಕರು ಕ್ರಮವಾಗಿ 40 ಹಾಗೂ 35 ಕೆಜಿ ಲಗೇಜು ತರಲು ಹೆಚ್ಚುವರಿ ಹಣ ತೆರುವ ಅಗತ್ಯವಿಲ್ಲ. ಲಗೇಜಿನ ತೂಕ ಗರಿಷ್ಠ 80 ಕೆಜಿ ಮತ್ತು 70 ಕೆಜಿ ಇದ್ದರೆ ಪಾರ್ಸೆಲ್ ಆಫೀಸ್‌ನಲ್ಲಿ ಶುಲ್ಕ ಕಟ್ಟಬೇಕಾಗುತ್ತದೆ.

Heavy penalty on excess weight of luggage in train

ಲಗೇಜಿಗೆ ಸಂಬಂಧಿಸಿದಂತೆ ಈಗಾಘಲೇ ಹಲವು ನಿಯಮಗಳಿವೆ. ಅದನ್ನು ಇನ್ನುಮುಂದೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಪ್ರಯಾಣಿಕರು ಗರಿಷ್ಠ ಮಿತಿಯಷ್ಟು ಲಗೇಜ್‌ನ್ನು ತಂದು ಲಗೇಜ್ ವ್ಯಾನ್‌ಗೆ ಹಾಕಬಹುದು, ಅದಕ್ಕೆ ತಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಬುಕ್ ಮಾಡದ ಲಗೇಜ್ ಪತ್ತೆಯಾದರೆ ಅದು ವಿನಾಯಿತಿ ಮಿತಿಗಿಂತಲೂ ಹೆಚ್ಚಿದ್ದರೆ 6 ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ರೈಲ್ವೆ ಮಾಹಿತಿ ಮತ್ತು ಪ್ರಚಾರ ವಿಭಾಗದ ನಿರ್ದೇಶಕ ವೇದ್ ಪ್ರಕಾಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+