Cold Wave in Delhi: ರಾಷ್ಟ್ರ ರಾಜಧಾನಿಯ ರಿಡ್ಜ್‌ನಲ್ಲಿ ಈ ವರ್ಷದಲ್ಲೆ ಅತೀ ಕನಿಷ್ಠ 3 ಡಿ.ಸೆ.ಉಷ್ಣಾಂಶ

ನವದೆಹಲಿ, ಡಿಸೆಂಬರ್ 26: ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯ ಕೆಲವು ಭಾಗಗಳಲ್ಲಿ ಶೀತ ವಾತಾವರಣದ ಅಲೆ ಆವರಿಸಿದೆ. ಭಾನುವಾರ ಇಲ್ಲಿನ ರಿಡ್ಜ್ ಪ್ರದೇಶದಲ್ಲಿ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಾರ, ದೆಹಲಿಯ ಕೆಲವು ಸ್ಥಳಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನ ಕಂಡು ಬಂದಿದ್ದು, ಇಲ್ಲಿ ದಟ್ಟವಾದ ಚಳಿ ಹಾಗೂ ಮಂಜು ಕಂಡು ಬಂದಿದೆ. ನಿವಾಸಿಗಳು ಮೈಕೊರೆವ ಚಳಿಗೆ ತತ್ತರಿಸಿದ್ದಾರೆ. ಗರಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ ನನಷ್ಟು ಹಾಗೂ ಕನಿಷ್ಠ 4.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಸೋಮವಾರ ದೆಹಲಿಯಲ್ಲಿ 5ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ವರದಿಯಾಗಿದೆ. ಇಂದು ಸಹ ನಗರದ ಬಹುತೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಮತ್ತು ಶೀತದ ವಾತಾವರಣ ಕಂಡು ಬಂದಿದೆ. ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ಅನ್ನು ವರದಿ ಮಾಡಿದೆ. ಇದು ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ ಮೂರು ರಷ್ಟು ಕಡಿಮೆ ಎನ್ನಲಾಗುತ್ತಿದೆ.

Heavy Cold in New Delhi: Very low 3 degrees celsius recorded in This year at Ridge place

ಗರಿಷ್ಠ ತಾಪಮಾನವು 16.2 ಡಿಗ್ರಿ ಸೆಲ್ಸಿಯಸ್‌ ಇದ್ದು, ಇದು ವಾಡಿಕೆಯ ನಿರೀಕ್ಷಿತ ತಾಪಮಾನಕ್ಕಿಂತ ಸುಮಾರು ಐದು ಪಟ್ಟು ಕಡಿಮೆ ಎಂದು ಹೇಳಲಾಗಿದೆ. ಈ ವರ್ಷ ಚಳಿಗಾಲದ ಋತುವಿನಲ್ಲಿ ಭಾನುವಾರದ ಕನಿಷ್ಠ ತಾಪಮಾನವೇ (ಕನಿಷ್ಠ 03 ಡಿ.ಸೆ) ಇದುವರೆಗಿನ ದಾಖಲೆಯ ಮಟ್ಟದ ಚಳಿ ಆಗಿದೆ. ಇಲ್ಲಿನ ರಿಜ್ಡ್ ಪ್ರದೇಶ ರಾಜಧಾನಿಯ ಅತ್ಯಂತ ಚಳಿಯ ಪ್ರದೇಶವಾಗಿದೆ.

ರಿಜ್ಟ್ ಪ್ರದೇಶದ ಹೊರತಾಗಿ ದೆಹಲಿಯ ಬೇರೆಡೆ ಮಾಪನ ಕೇಂದ್ರಗಳಲ್ಲಿ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದ್ದು, ಇದು ಸಹ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ ಎಂದು ತಿಳಿದು ಬಂದಿದೆ. ನವದೆಹಲಿ ಸೇರಿದಂತೆ ಹರಿಯಾಣ, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಕೆಲವು ದಿನಗಳಿಂದ ಬೆಳಗ್ಗೆ ದಟ್ಟವಾದ ಮಂಜಿನ ವಾತಾವರಣವೇ ಮುಂದುವರಿದಿದೆ. ಹೀಗಾಗಿ ಬೆಳಗ್ಗೆಯು ವಾಹನಗಳು ಬೆಳಕಿನ ಸಹಾಯದಿಂದ ಲೈಟ್‌ ಹಾಕಿಕೊಂಡೆ ಸಾಗಬೇಕಿದೆ.

ಚಳಿ ಜತೆಗೆ ಕಳಪೆ ವಾಯು ಗುಣಮಟ್ಟ 319 AQI ದಾಖಲು

ದೆಹಲಿಯಲ್ಲಿ ಮಂಜು ಹೇಗಿದೆಯೆಂದರೆ ನಮ್ಮ ಮುಂದಿನ 50 ಮೀಟರ್‌ವರೆಗೆ ಏನನ್ನು ನೋಡಲಾಗದಷ್ಟು ಮಬ್ಬು ಆವರಿಸಿದೆ.

Heavy Cold in New Delhi: Very low 3 degrees celsius recorded in This year at Ridge place

ಬಯಲು ಪ್ರದೇಶಗಳಲ್ಲಿ, ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ಅದನ್ನು ಶೀತದ ಅಲೆ ಎಂದು ಘೋಷಿಸುತ್ತದೆ. ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಆದಾಗ ಶೀತ ವಾತಾವರಣದ ಸೃಷ್ಟಿಯ ಹಂತ ಎಂದು ಪರಿಗಣಿಸಲಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಒಂದು ವೇಳೆ ಕನಿಷ್ಠ 02 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿಕೆ ಆದರೆ ಅದನ್ನು 'ತೀವ್ರ' ಶೀತ ಅಲೆ ಎಂದು ಕರೆಯಲಾಗುತ್ತದೆ. ಈ ವೇಳೆ ಗರಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್‌ ಸಮೀಪಿಸಿರುತ್ತದೆ. ಸಂಜೆ 6 ಗಂಟೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ( AQI) 319 ಕ್ಕೆ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ತಿಳಿಸಿದೆ.

ಶೂನ್ಯದಿಂದ ಮತ್ತು 50ರ ನಡುವಿನ AQI ಅನ್ನು 'ಉತ್ತಮ', 51 ಮತ್ತು 100 ಅನ್ನು 'ತೃಪ್ತಿಕರ', 101ರಿಂದ 200ವರೆಗಿನ AQI ಅನ್ನು 'ಮಧ್ಯಮ', 201ರಿಂದ 300ವರೆಗೆ AQI ಅನ್ನು 'ಕಳಪೆ', 301 ಮತ್ತು 400 ಮಧ್ಯದಲ್ಲಿ AQI ಅನ್ನು 'ಅತ್ಯಂತ ಕಳಪೆ' ಹಾಗೂ 401 ಮೇಲಿನ AQI ಅನ್ನು 'ತೀವ್ರ ಕಳಪೆ' ಎಂದು ಪರಿಗಣಿಸಲಾಗುತ್ತದೆ ಎಂದು ಸಿಪಿಸಿಬಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+