ದೇಶದಲ್ಲಿ ಇನ್ನೆಷ್ಟು ದಿನ ಬಿಸಿಗಾಳಿ ಮುಂದುವರೆಯುತ್ತೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ 9: ನಗರದಲ್ಲಿ ಅವಾಂತರ ಸೃಷ್ಟಿಸಿ ಮಳೆ ಹೊರಟೇ ಬಿಟ್ಟಿದೆ. ಆದರೆ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು ಬುಧವಾರ ನೆಲಮಂಗಲದಲ್ಲಿ 7 ಸೆ.ಮೀನಷ್ಟು ಮಳೆಯಾಗಿದೆ.

ಇನ್ನು ದೇಶಾದ್ಯಂತ ಬಿಸಿಗಾಳಿ ಮುಂದುವರೆದು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಬಿಸಿಗಾಳಿ ಎಂದರೆ ಕೇವಲ ತಾಪಮಾನದ ಏರು ಪೇರಲ್ಲ, ಅಥವಾ ಹೆಚ್ಚಿನ ಬಿಸಿಲೂ ಕೂಡ ಅಲ್ಲ ಬಿಸಿಲ ಜೊತೆಗೆ ಬಿಸಿ ಗಾಳಿಯೂ ಕೂಡ ಬೀಸುತ್ತದೆ. ಇದು ಮನುಷ್ಯನನ್ನು ಕೊಂದು ಬಿಡುವಷ್ಟು ತೀವ್ರವಾಗಿರುತ್ತದೆ.

ಇನ್ನು ಬೆಂಗಳೂರು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಮೋಡಕವಿದ ವಾತಾವರಣ ಮುಂದುವರೆದಿದ್ದು ಗುರುವಾರ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಕರ್ನಾಟಕದಾದ್ಯಂತ ಒಣ ಹವೆ ಮುಂದುವರೆಯಲಿದೆ.

ಕೋಲಾರ, ಆನೇಕಲ್ ನಲ್ಲಿ 4 ಸೆಂ.ಮೀ, ಮೈಸೂರಿನಲ್ಲಿ 3 ಸೆಂ.ಮೀ, ಚಾಮರಾಜನಗರ, ಹುಲಿಯೂರು ದುರ್ಗಾ, ಹೆಸರಘಟ್ಟ, , ಬೆಂಗಳೂರು ಎಚ್‌ಎಎಲ್‌ನಲ್ಲಿ 2 ಸೆಂ.ಮೀನಷ್ಟು ಮಳೆಯಾಗಿದೆ.

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 4.3.8 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 32.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.8 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 33.7 ಡಿಗ್ರೊ ಸೆಲ್ಸಿಯಸ್, ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 32.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

 ಮೇ13ರಷ್ಟೊತ್ತಿಗೆ ದೇಶದಲ್ಲಿ ಬಿಸಿಗಾಳಿ ತಗ್ಗುವುದೇ?

ಮೇ13ರಷ್ಟೊತ್ತಿಗೆ ದೇಶದಲ್ಲಿ ಬಿಸಿಗಾಳಿ ತಗ್ಗುವುದೇ?

ರಾಜಸ್ಥಾನ, ವಿದರ್ಭ, ಮಧ್ಯ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಇನ್ನಿತರೆ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿಗೆ ತಲುಪಿದ್ದು ಬಿಸಿಗಾಳಿ ಬೀಸಿ ಜನರ ಜೀವವನ್ನು ಕಸಿಯುತ್ತಿದೆ.

 ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಉಷ್ಣಾಂಶ

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಉಷ್ಣಾಂಶ

ಬುಧವಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 46.2 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಚಂದ್ರಾಪುರದಲ್ಲಿ 45.8 ಡಿಗ್ರಿ ಸೆಲ್ಸಿಯಸ್, ಗಂಗಾನಗರ ಹಾಗೂ ಹಮಿರ್ ಪುರದಲ್ಲಿ 45.2 ಡಿಗ್ರಿ ಸೆಲ್ಸಿಯಸ್, ನಾಗಪುರ, ನಲಗೊಂಡದಲ್ಲಿ 45 ಡಿಗ್ರಿ ಸೆಲ್ಸಿಯಸ್, ಆದಿಲಾಬಾದ್‌ನಲ್ಲಿ 44.3 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

 ಮುಂದಿನ 24-28 ಗಂಟೆಗಳಲ್ಲಿ ಗರಿಷ್ಠ ಉಷ್ಣಾಂಶ ಇಳಿಕೆ

ಮುಂದಿನ 24-28 ಗಂಟೆಗಳಲ್ಲಿ ಗರಿಷ್ಠ ಉಷ್ಣಾಂಶ ಇಳಿಕೆ

ರಾಜಸ್ಥಾನದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು ತಾಪಮಾನ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ. ಆಂಧ್ರಪ್ರದೇಶ, ತಮಿಳುನಾಡು ಇನ್ನಿತರೆ ರಾಜ್ಯಗಳಲ್ಲಿ ಕೂಡ ಮಳೆಯಾಗುವ ಮುನ್ಸೂಚನೆ ಇದ್ದು ಮೇ 13ರೊಳಗೆ ಬಿಸಿ ಗಾಳಿ ಪ್ರಮಾಣ ತಗ್ಗಲಿದೆ.

 ಬೆಂಗಳೂರು ಎರಡು ದಿನಗಳ ಬಳಿಕ ಸಹಜ ಸ್ಥಿತಿಯತ್ತ

ಬೆಂಗಳೂರು ಎರಡು ದಿನಗಳ ಬಳಿಕ ಸಹಜ ಸ್ಥಿತಿಯತ್ತ

ಒಂದೇ ಒಂದು ದಿನದ ಮಳೆ ಇಡೀ ಬೆಂಗಳೂರನ್ನೇ ಚರಂಡಿಯ ರೀತಿ ಮಾಡಿ ಹೋಗಿದೆ. ಬಿಬಿಎಂಪಿ ಎಚ್ಚೆತ್ತುಕೊಂಡು ಒಳಚರಂಡಿ, ರಸ್ತೆಗುಂಡಿಗಳನ್ನು ಸರಿಪಡಿಸದಿದ್ದರೆ ಈ ಬಾರಿಯ ಮುಂಗಾರು ಬೆಂಗಳೂರಿಗೆ ಶಾಪವಾಗುವುದು ಗ್ಯಾರಂಟಿ. ಒಂದು ಬಾರಿ ಜೋರಾದ ಗಾಳಿ ಬೀಸಿದರೆ ಸಾಕು ಮುರಿದು ಬೀಳುವ ಮರದ ರೆಂಬೆಗಳು, ಒಂದು ಮಳೆ ಬಂದರೆ ಸಾಕು ಚರಂಡಿಯಾಗುವ ರಸ್ತೆಗಳು, ಇದರ ಮಧ್ಯೆ ನಮ್ಮ ಜನರ ಸವಾರಿ. ಮುಂಗಾರು ಆರಂಭಕ್ಕೂ ಮುನ್ನ ಇದೆಲ್ಲವನ್ನೂ ಸರಿಪಡಿಸುವ ಸಾಹಸಕ್ಕೆ ಬಿಬಿಎಂಪಿ ಕೈ ಹಾಕಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+