ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಗಿಯುವ ಮುನ್ನ ಎರಡು ಹೆಜ್ಜೆ ಹಿಂದಿಡುವುದು ಸಹಜ: ರಾಜನಾಥ್ ಸಿಂಗ್

|
Google Oneindia Kannada News

ಭೋಪಾಲ್, ಮೇ 31: ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಮತ್ತು ಉತ್ತರ ಪ್ರದೇಶದ ಕೈರಾನಾ ಉಪಚುನಾವಣೆಯಲ್ಲಿನ ಸೋಲನ್ನು ಪರಾಮರ್ಶಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷವು ಭವಿಷ್ಯದಲ್ಲಿ ಬೃಹತ್ ಜಿಗಿತ ಪಡೆಯಲಿದೆ ಎಂದು ಹೇಳಿದ್ದಾರೆ.

'ಬಹುದೂರಕ್ಕೆ ಜಿಗಿಯುವ ಮುನ್ನ, ನೀವು ಎರಡು ಹೆಜ್ಜೆ ಹಿಂದಕ್ಕೆ ಹೋಗಬೇಕಾಗುತ್ತದೆ. ಭವಿಷ್ಯದಲ್ಲಿ ನಾವು ಬಹುದೂರಕ್ಕೆ ಜಿಗಿಯಲಿದ್ದೇವೆ' ಎಂದು ಅವರು ವ್ಯಾಖ್ಯಾನಿಸಿದ್ದಾರೆ.

giant leap

ಬಿಜೆಪಿಯು ಪಾಲ್‌ಘಾರ್ ಮತ್ತು ನಾಗಾಲ್ಯಾಂಡ್ ಲೋಕಸಭೆ ಕ್ಷೇತ್ರಗಳನ್ನು ಹಾಗೂ ಉತ್ತರಾಖಂಡದ ಥರಾಲಿ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದೆ.

ಉಪಚುನಾವಣಾ ಫಲಿತಾಂಶ: 14 ರಲ್ಲಿ ಬಿಜೆಪಿಗೆ 3, ಕಾಂಗ್ರೆಸಿಗೆ 5 ಗೆಲುವುಉಪಚುನಾವಣಾ ಫಲಿತಾಂಶ: 14 ರಲ್ಲಿ ಬಿಜೆಪಿಗೆ 3, ಕಾಂಗ್ರೆಸಿಗೆ 5 ಗೆಲುವು

ಮಾನದಂಡವಲ್ಲ- ರವಿಶಂಕರ್ ಪ್ರಸಾದ್
ಉಪಚುನಾವಣೆಗಳು ಬಿಜೆಪಿಯ ಹಣೆಬರಹವನ್ನು ನಿರ್ಧರಿಸುವ ಮಾನದಂಡವಲ್ಲ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

giant leap

ನೀವು ಈ ಸಣ್ಣ ಚುನಾವಣೆಗಳನ್ನು ಮಾಪನವನ್ನಾಗಿ ಪರಿಗಣಿಸಬಹುದು. ಆದರೆ ನಾನು ಪರಿಗಣಿಸುವುದಿಲ್ಲ ಎಂದಿರುವ ಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ಪರಿಶ್ರಮವು ದೇಶದ ಜನರಿಗೆ ಸಹಾಯ ಮಾಡಿದೆ.

ಅದು ಮುಂಬರುವ ಚುನಾವಣೆಯಲ್ಲಿ ಜನರ ಗಮನಕ್ಕೆ ಬಾರದೆಯೇ ಹೋಗುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

English summary
Home Minister Rajnath Singh said that the party will take a giant leap in the future. You will have to take two steps back to the giant leap, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X