ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವರ್ಷದಲ್ಲಿ 24 ಟನ್ ಮಾದಕ ದ್ರವ್ಯ ವಶಪಡಿಸಿಕೊಂಡಿರುವ ಹರಿಯಾಣ ಪೋಲಿಸ್‌

|
Google Oneindia Kannada News

ಚಂಡೀಗಡ,ಡಿಸೆಂಬರ 29: ಡ್ರಗ್ಸ್ ಮಾಫಿಯಾ ಮತ್ತು ಮಾದಕದ್ರವ್ಯ ವ್ಯಾಪಾರದ ವಿರುದ್ಧ ಚುರುಕಿನ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಹರಿಯಾಣ ಪೊಲೀಸರು ಈ ವರ್ಷದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 24 ಟನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹರಿಯಾಣ ಪೊಲೀಸ್ ಮಹಾನಿರ್ದೇಶಕ ಪಿಕೆ ಅಗರವಾಲ್, ಹರಿಯಾಣ ಪೊಲೀಸರು ಈ ವರ್ಷದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಸುಮಾರು 3626 ಪ್ರಕರಣಗಳನ್ನು ದಾಖಲಿಸುವ ಮೂಲಕ 24 ಟನ್ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಗುಜರಾತ್: ಪಾಕಿಸ್ತಾನ್ ದೋಣಿಯಲ್ಲಿ 300 ಕೋಟಿ ರೂ. ಡ್ರಗ್ಸ್ ವಶಕ್ಕೆ ಗುಜರಾತ್: ಪಾಕಿಸ್ತಾನ್ ದೋಣಿಯಲ್ಲಿ 300 ಕೋಟಿ ರೂ. ಡ್ರಗ್ಸ್ ವಶಕ್ಕೆ

ಕಳೆದ ವರ್ಷ 2021ರಲ್ಲಿ 2583 ಪ್ರಕರಣಗಳನ್ನು ದಾಖಲಿಸಿದಂತೆ ಈ ಬಾರಿ 2022ರಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಒಟ್ಟು 3636 ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಜಿಪಿ ಪಿ ಕೆ ಅಗರವಾಲ್ ಹೇಳಿದ್ದಾರೆ.

Haryana Police filed 3626 cases under NDPS Act, seized 24 tonnes of narcotics in 2022

ವಿಶೇಷ ಕಾರ್ಯಪಡೆ (STF) ಮತ್ತು ಹರಿಯಾಣ ರಾಜ್ಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (HSNCB) ಸೇರಿದಂತೆ ನಮ್ಮ ಕ್ಷೇತ್ರ ಘಟಕಗಳು ರಾಜ್ಯದಲ್ಲಿ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದು, ಹರಿಯಾಣವನ್ನು ಸಂಪೂರ್ಣ ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿಸುವ ಯೋಜನೆ ರೂಪಿಸಲಾಗಿದೆ ಎಂದು ಡಿಜಿಪಿ ಪಿ ಕೆ ಅಗರವಾಲ್ ಹೇಳಿದರು.

24 ಟನ್ ಮಾದಕದ್ರವ್ಯ ವಶ !

ಈವರೆಗೂ ಚುರುಕಿನ ಕಾರ್ಯಾಚರಣೆ ಕೈಗೊಂಡಿರುವ ಪೋಲಿಸರು ಸುಮಾರು 271 ಕೆಜಿ ಅಫೀಮು, 196 ಕೆಜಿಗಿಂತ ಅಧಿಕ ಚರಸ್, 10173 ಕೆಜಿಗಿಂತ ಹೆಚ್ಚು ಪೋಪಿ ಹಸ್ಕ್‌, 6 ಕೆಜಿ 701 ಗ್ರಾಂ ಸ್ಮ್ಯಾಕ್, 13,311 ಕೆಜಿಗಿಂತ ಹೆಚ್ಚು ಗಾಂಜಾ ಸೇರಿದಂತೆ 35 ಕೆಜಿ 328ಗ್ರಾಂ ಹೆರಾಯಿನ್ ಅನ್ನು ಮಾದಕ ವಸ್ತು ಕಳ್ಳಸಾಗಣೆದಾರರಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಈ ವರೆಗೂ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್‌ಡಿಪಿಎಸ್) ಕಾಯ್ದೆಯಡಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವವರ 31.45 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಆರೋಪ ಎದುರಿಸುತ್ತಿರುವವರ 12.23 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ ಎಂದು ಹರಿಯಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿಕೆ ಅಗರವಾಲ್ ಹೇಳಿದ್ದಾರೆ.

ಸಿರ್ಸಾದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಗರಿಷ್ಠ 587 ಪ್ರಕರಣಗಳು ದಾಖಲಾಗಿವೆ, ನಂತರ ಫರಿದಾಬಾದ್‌ನಲ್ಲಿ 349, ಕರ್ನಾಲ್‌ನಲ್ಲಿ 273, ಫತೇಹಾಬಾದ್‌ನಲ್ಲಿ 240 ಮತ್ತು ಕುರುಕ್ಷೇತ್ರದಲ್ಲಿ 220 ಪ್ರಕರಣಗಳು ದಾಖಲಾಗಿವೆ. ಬಹುಮುಖಿ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಪೊಲೀಸರು ನಿರಂತರ ಶ್ರಮಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಅಂತರರಾಜ್ಯ ಸಹಕಾರವು ಸಹ ಹೆಚ್ಚಿರುವುದರಿಂದ ನಾವು ಇದು ಅಂತಹ ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಉನ್ನತ ಪೋಲೀಸ್ ಅಧಿಕಾರಿ ಹೇಳಿದರು.

ಮುಂಬರುವ ದಿನಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಯುವಜನರಿಗೆ ಅರಿವು ಮೂಡಿಸಲು ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗುವುದರ ಜೊತೆಗೆ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಡ್ರಗ್ ಕಾರ್ಟೆಲ್‌ಗಳ ವಿರುದ್ಧ ನಮ್ಮ ಕಾರ್ಯಾಚರಣೆಯನ್ನು ವೇಗಗೊಳಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

English summary
Director General of Police (DGP), Haryana, P K Agrawal said that over 271 kg of opium, more than 196 kg charas/sulpha, over 10173 kg poppy husk, 6 kg 701-gram smack, over 13311 kg ganja, and 35 kg 328 gram of heroin was also seized from drug traffickers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X