ಸೂಟ್‌ಕೇಸ್‌ನಲ್ಲಿ ತನ್ನ ಗೆಳತಿಯನ್ನು ಹಾಸ್ಟೆಲ್ ಗೆ ಕರೆದೊಯ್ದ ಭೂಪ: ಆಮೇಲೇನಾಯ್ತು ವಿಡಿಯೋ ನೋಡಿ
ಎಂಥಾ ಕಾಲ ಬಂತು ನೋಡಿ. ಚೆನ್ನಾಗಿ ಓದಿ ಒಂದೊಳ್ಳೆ ಉದ್ಯೋಗಕ್ಕೆ ಸೇರಿಕೊಳ್ಳಲಿ ಎಂದು ತಂದೆ ತಾಯಿ ಮಕ್ಕಳನ್ನು ಕಾಲೇಜು ಹಾಸ್ಟೆಲ್‌ಗೆ ಸೇರಿಸುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಸೂಟ್‌ಕೇಸ್‌ನಲ್ಲಿ ತನ್ನ ಗೆಳತಿಯನ್ನು ಕೂರಿಸಿ ಕದ್ದುಮುಚ್ಚಿ ಹಾಸ್ಟೆಲ್ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ವಿದ್ಯಾರ್ಥಿಯ ಹಣಬರಹ ಚೆನ್ನಾಗಿರಲಿಲ್ಲ. ಹಾಸ್ಟೆಲ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದು ಚೀಮಾರಿ ಹಾಕಿಸಿಕೊಂಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೇ ವೈರಲ್ ಆಗುತ್ತಿದೆ.
ಹೌದು ಹರಿಯಾಣದ ಓಪಿ ಜಿಂದಾಲ್ ಯೂನಿರ್ವಸಿಟಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಈ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ತನ್ನ ಗೆಳತಿಯನ್ನು ಸೂಟ್‌ಕೇಸ್‌ನಲ್ಲಿ ಕೂರಿಸಿಕೊಂಡು ಯಾರಿಗೂ ಗೊತ್ತಿಲ್ಲದಂತೆ ಹಾಸ್ಟೆಲ್ ಒಳಗೆ ತಂದಿದ್ದಾನೆ. ಆದರೆ ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿಯಷ್ಟು ದಡ್ಡರಲ್ಲ. ಸೂಟ್‌ಕೇಸ್ ನಲ್ಲಿ ಯಾವುದೋ ಜೀವ ಒದ್ದಾಡುತ್ತಿರುವುದನ್ನು ಗಮನಿಸಿದ್ದಾರೆ.

ಸೂಟ್‌ಕೇಸ್ ಅನ್ನು ಸೂಕ್ಷ್ಮವಾಗಿ ನೋಡಿದಾಗ ಅದರ ಒಳಗೆ ಏನೋ ಇರುವ ಅನುಮಾನ ಬಂದಿದೆ. ಸೂಟ್‌ಕೇಸ್‌ನಲ್ಲಿ ನಾಯಿ, ಬೆಕ್ಕು ಅಥವಾ ಯವುದೋ ಸಾಕು ಪ್ರಾಣಿ ಇರಬೇಕು ಅಂತ ಸಿಬ್ಬಂದಿ ಅಂದುಕೊಂಡರು. ಹೀಗಾಗಿ ವಿದ್ಯಾರ್ಥಿಗೆ ಸೂಟ್‌ಕೇಸ್ ಅನ್ನು ತೆರೆಯ ತಿಳಿಸಿದ್ದಾರೆ. ಆರಂಭದಲ್ಲಿ ವಿದ್ಯಾರ್ಥಿ ಅದನ್ನು ತೆರೆಯಲು ಒಪ್ಪಿಲ್ಲ.
ಆದರೆ ಸಿಬ್ಬಂದಿ ಸುಮ್ಮನಾಗಲಿಲ್ಲ. ವಿದ್ಯಾರ್ಥಿ ಯಾವುದೋ ಪ್ರಾಣಿ ಮೇಲಿನ ಪ್ರೀತಿಯಿಂದ ಅದನ್ನು ತಂದು ಬಿಟ್ಟಿದ್ದಾನೆ. ನಾವು ಹಾಸ್ಟಲ್ ಒಳಗೆ ಅದನ್ನು ಬಿಡುವುದಿಲ್ಲ ಅಂತ ಹೆದರಿಕೊಂಡಿದ್ದಾನೆ ಎಂದು ಸಿಬ್ಬಂದಿ ಭಾವಿಸಿದ್ದರು. ಸೂಟ್‌ಕೇಸ್ ತೆರೆದಿಲ್ಲ ಅಂತಾದರೆ ಆ ಪ್ರಾಣಿಗೆ ಏನಾದರೂ ಆಗಬಹುದು ಅನ್ನೋ ಕಾಳಜಿಯಿಂದ ಸೂಟ್‌ಕೇಸ್ ತೆಗೆಯಲು ಬಲವಂತ ಮಾಡಿದ್ದಾರೆ.
ವಿದ್ಯಾರ್ಥಿ ಇದಕ್ಕೆ ಒಪ್ಪದೇ ಇದ್ದಾಗ ತಾವೇ ಸೂಟ್‌ಕೇಸ್ ತೆಗೆದು ನೋಡಿ ಬೆಚ್ಚಿಬಿದ್ದಿದ್ದಾರೆ. ಯಾವುದೋ ಪ್ರಾಣಿ ಇರಬಹುದು ಎಂದು ಭಾವಿಸಿದ್ದ ಸಿಬ್ಬಂದಿಗೆ ಯುವತಿ ಸೂಟ್‌ಕೇಸ್‌ನಲ್ಲಿ ಇರುವುದು ಗೊತ್ತಾಗಿ ಶಾಕ್ ಆಗಿದೆ.
ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಸೂಟ್‌ಕೇಸ್‌ನಲ್ಲಿ ತನ್ನ ಗೆಳತಿಯನ್ನು ಹಾಸ್ಟೆಲ್ ಗೆ ಕರೆದೊಯ್ಯಲು ಹೋಗಿ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದ ಭೂಪ #BoysHostel #GirlFriend #opjindal #suitcase #viralvideo #OIKannada #ViralWatch pic.twitter.com/MKTo7snTJ8
— oneindiakannada (@OneindiaKannada) April 12, 2025
ಕೂಡಲೇ ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಆ ಹುಡುಗಿ ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ವಿಶ್ವವಿದ್ಯಾಲಯ ಆಡಳಿತ ಮಂಡಳಿ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿದೆ. ಇನ್ನೂ ಸೂಟ್ ಕೇಸ್‌ನಿಂದ ಯುವತಿ ಹೊರ ಬರುವುದನ್ನು ಇತರ ಹಾಸ್ಟೆಲ್ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಕ್ಕೆ ಪರ ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಿರುಗಾಳಿಯನ್ನೇ ಸೃಷ್ಟಿಸಿದೆ.












Click it and Unblock the Notifications