ವಾದ್ರಾ ಆಸ್ತಿ ವಿವರ ಕೇಳಿದ ಹರ್ಯಾಣಾ ಸರ್ಕಾರ

ಛತ್ತೀಸ್‌ಗಡ, ನ. 22: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಕಷ್ಟದ ದಿನಗಳು ಆರಂಭವಾಗಲಿವೆ ಎಂಬ ಮಾತು ನಿಜವಾಗಿದೆ. ವಾದ್ರಾ ವಿರುದ್ಧದ ತನಿಖೆಯನ್ನು ಸರ್ಕಾರ ತೀವ್ರಗೊಳಿಸಿದೆ.

ರಾಬರ್ಟ್ ವಾದ್ರಾ ಅವರು ಹೊಂದಿರುವ ಎಲ್ಲ ಆಸ್ತಿ ಹಾಗೂ ಅವರ ಒಡೆತನದ ಎಲ್ಲ ಕಂಪನಿಗಳ ವಿವರಗಳನ್ನು ನೀಡುವಂತೆ ನೂತನ ಸರ್ಕಾರ ಗುಡಗಾಂವ್ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಒಂದು ವಾರದೊಳಗೆ ವಿವರ ನೀಡಬೇಕೆಂದು ಭೂ ದಾಖಲೆಗಳ ನಿರ್ದೇಶಕರು ಗುಡಗಾಂವ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. [ರಾಬರ್ಟ್ ವಾದ್ರಾ ಹಿನ್ನೆಲೆ ಗೊತ್ತೇ?]

priyanka

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಕಂದಾಯ ಅಧಿಕಾರಿಗೆ ಅಗತ್ಯ ಮಾಹಿತಿಯನ್ನು ನಿಗದಿತ ಸಮಯದೊಳಗೆ ಒದಗಿಸಲು ಸೂಚಿಸಿದ್ದಾರೆ. ಸರ್ಕಾರದ ಈ ನಡೆ ರಾಬರ್ಟ್ ವಾದ್ರಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಲಾಗಿದೆ. [ವಾದ್ರಾ ಅಕ್ರಮಕ್ಕೆ ಸಿಎಂ ಹೂಡಾ ಸಾಥ್]

ಹೇಳಿದಂತೆ ಮಾಡಿದ ಸಿಎಂ: ರಾಬರ್ಟ್ ವಾದ್ರಾ ಅವರ ಮೇಲಿದ್ದ ಭೂ ಹಗರಣದ ಆರೋಪವನ್ನು ಬಿಜೆಪಿ ಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿಸಿಕೊಂಡಿತ್ತು. ಬಿಜೆಪಿ ಗೆದ್ದು ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ವಾದ್ರಾ ಮೇಲಿನ ಆರೋಪಗಳ ತನಿಖೆ ನಡೆಸುವುದಾಗಿ ನೂತನ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಘೋಷಿಸಿದ್ದರು. [ರಾಬರ್ಟ್ ವಾದ್ರಾಗೆ ಕ್ಲೀನ್ ಚಿಟ್]

ಕಾಂಗ್ರೆಸ್ ಅವಧಿಯಲ್ಲಾದ ಎಲ್ಲ ಭೂ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದೆಂದು ಹರ್ಯಾಣಾದ ಹಿರಿಯ ಸಚಿವರಾದ ರಾಮ್ ಬಿಲಾಸ್ ಶರ್ಮಾ ಹಾಗೂ ಅನಿಲ್ ವಿಜ್ ಅವರು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+