Haryana Election 2024: ಬಿಜೆಪಿ ಹರಡಿದ ನಿರುದ್ಯೋಗ ಸಾಂಕ್ರಾಮಿಕ ನಿವಾರಣೆ ಶೀಘ್ರ: ಪ್ರಿಯಾಂಕಾ ಗಾಂಧಿ
ಹರಿಯಾಣ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಲ್ಲಿಗೆ ಬಂದು ಭರ್ಜರಿ ಪ್ರಚಾರ ನಡೆಸುತ್ತಿರುವ ಅನೇಕ ಮುಖಂಡರು ಎದುರು ಪಕ್ಷದ ವಿರುದ್ಧ ಆರೋಪ, ಪ್ರತ್ಯಾರೋಪಗಳು ಶುರುವಾಗಿವೆ. ಕಾಂಗ್ರೆಸ್, ಬಿಜೆಪಿ, ಎಎಪಿ ಸೇರಿದಂತೆ ವಿವಿಧ ಪಕ್ಷಗಳು ಭರ್ಜರಿ ಪ್ರಚಾರ ಭರಾಟೆಯಲ್ಲಿ ತೊಡಗಿವೆ. ಈ ಮಧ್ಯೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿಯು ರಾಜ್ಯದಲ್ಲಿ ನಿರುದ್ಯೋಗ ಸಾಂಕ್ರಾಮಿಕ ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
ಹರಿಯಾಣ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಹರಿಯಾಣದಲ್ಲಿ ಬಿಜೆಪಿಯು ನಿರುದ್ಯೋಗ ಸಾಂಕ್ರಾಮಿಕವನ್ನು ಹರಡುವ ಮೂಲಕ ಯುವಕರ ಭರವಸೆ, ಉದ್ಯೋಗಾಕಾಂಕ್ಷೆಯನ್ನು ಕಿತ್ತುಕೊಳ್ಳುತ್ತಿದೆ. ಯುವಕರ ಜೀವನವನ್ನು ರಾಜ್ಯದಲ್ಲಿ ನಾಶ ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಯುವಕರ ಹತಾಶೆ ಹೋಗಲಾಡಿ, ಪ್ರಗತಿಯ ಸಂಕಲ್ಪ: ಪ್ರಿಯಾಂಕ
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದರೆ, ವಲಸೆಗೆ ಬ್ರೇಕ್ ಹಾಕಲಾಗುವುದು. ಕುಟುಂಬಗಳ ನಾಶವಾಗುತ್ತಿರುವುದನ್ನು ತಡೆಯುತ್ತೇವೆ. ಯುವಕರೊಳಗೆ ಮೂಡಿರುವ ಹತಾಸೆಯನ್ನು ಹೋಗಲಾಡಿಸಿ, ಯುವ ಸಮಾಜವನ್ನು, ರಾಜ್ಯದ ಅಭಿವೃದ್ಧಿಯನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯುವ ಸಂಕಲ್ಪ ನಮ್ಮದಾಗಿದೆ ಎಂದು ಅವರು ಭರವಸೆ ನೀಡಿದರು.
1.8 ಲಕ್ಷ ಹುದ್ದೆಗಳು ಖಾಲಿ ಬಿಡಲಾಗಿದೆ!
ಪ್ರಸಕ್ತದಲ್ಲಿ ಹರಿಯಾಣ ರಾಜ್ಯದಲ್ಲಿ ಒಟ್ಟು 4.5 ಲಕ್ಷ ಸರ್ಕಾರಿ ಹುದ್ದೆಗಳ ಪೈಕಿ ಬರೋಬ್ಬರಿ 1.8 ಲಕ್ಷ ಹುದ್ದೆಗಳಿಗೆ ನೇಮಕಾತಿ ಆಗದೇ ಖಾಲಿ ಉಳಿಸಲಾಗಿದೆ. ಆಡಳಿತ ಪಕ್ಷ ನೇಮಕಾತಿ ಮಾಡದೆ ಖಾಲಿ ಉಲಿಸುವ ಮೂಲಕ ಯುವಕರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ಈ ವಿಚಾರದಲ್ಲಿನ ಸರ್ಕಾರದ ನಿರ್ಲಕ್ಷ್ಯ ಯುವಕರಿಗೆ ಮಾಡಿದ ಅನ್ಯಯವಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಹರಿಯಾಣದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಇಲ್ಲಿ ಬರೋಬ್ಬರಿ 2 ಲಕ್ಷ ಶಾಸ್ವತ ಉದ್ಯೋಗ ಸೃಷ್ಟಿ ಮಾಡಲಾಗುವುದು. ಅವುಗಳನ್ನು ನಿರುದ್ಯೋಗಿ ಯುವಕರಿಗೆ ಒದಗಿಸಿ ಯುವ ಭವಿಷ್ಯ ಹಸನು ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
हरियाणा में भाजपा ने बेरोजगारी की ऐसी महामारी फैलाई है कि होनहार युवाओं का जीवन बर्बाद हो रहा है।
— Priyanka Gandhi Vadra (@priyankagandhi) September 24, 2024
प्रदेश में कुल 4.5 लाख सरकारी पद हैं जिनमें से 1.8 लाख पद खाली पड़े हैं। भाजपा ने हरियाणा के युवाओं से भविष्य की सारी उम्मीदें छीनकर उनके साथ घोर अन्याय किया है।
कांग्रेस की सरकार…
ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ
ಒಟ್ಟಾರೆ ಹರಿಯಾಣದಲ್ಲಿ ಸದ್ಯ ಕಂಡು ಬರುತ್ತಿರುವ ನಿರುದ್ಯೋಗ ಸಮಸ್ಯೆ, ಕುಟುಂಬಗಳ ಎದುರಿಸುತ್ತಿರುವ ಸಮಸ್ಯೆ, ವಲಸೆಯಂತೆ ಸಮಸ್ಯೆಗಳಿಗೆ ಕಡಿವಾಣ ಹಾಕಲಾಗುವುದು. ಮೂಲಭೂತ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಿ ಇಡೀ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲಾಗುವುದು. ಅಭಿವೃದ್ಧಿಯಲ್ಲಿ ರಾಜ್ಯವನ್ನು ಮಾದರಿಯಾಗಿಸಲಾಗುವುದು. ಈ ಸಂಕಲ್ಪ ಹೊಂದಿರುವ ಕಾಂಗ್ರೆಸ್ ಪಕ್ಷ ಈ ಭಾರಿ ಅಧಿಕಾರಿ ಹಿಡಿಯಲಿದೆ ಎಂದು ತಿಳಿಸಿದರು.
ಸದ್ಯ ಹರಿಯಾಣದ ಚುನಾವಣೆ ಕಾವು ಏರುಗತಿಯಲ್ಲಿದ್ದು, ಅಬ್ಬರದ ಪ್ರಚಾರ ನಡೆಯುತ್ತಿದೆ. ಒಟ್ಟು 90 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅಕ್ಟೋಬರ್ 05 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 08ರಂದು ಮತ ಎಣಿಕೆ ನಡೆಯಲಿದ್ದು, ಅಂದು ಹರಿಯಾಣ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications