ಹರಿಯಾಣ ಚುನಾವಣೆ ಬಳಿಕ ಅ. 8ರಂದು ಏನೇನು ನಡೆಯಲಿದೆ! ವಿವರ
ಬೆಂಗಳೂರು, ಸೆಪ್ಟಂಬರ್ 20: ಕೇಂದ್ರ ಲೋಕಸಭಾ ಚುನಾವಣೆಯಿಂದ ವಿಧಾನಸಭಾ ಚುನಾವಣೆ ಘೋಷಣೆಯಾದ ರಾಜ್ಯಗಳ ಪೈಕಿ ಹರಿಯಾಣವು ಪ್ರಮುಖವಾದದ್ದು. ಹರಿಯಾಣ ರಾಜ್ಯದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಆಗಿದ್ದು, ಪ್ರಣಾಳಿಕೆ ಬಿಡುಗಡೆ ಆಗಿವೆ. ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದು ಏನೇನೆಲ್ಲ ಆಗಲಿದೆ ಎಂಬು ಮುನ್ನೋಟ ಇಲ್ಲಿದೆ.
ಹರಿಯಾಣ ಒಂದೇ ಹಂತದಲ್ಲಿ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ಎದುರಿಸಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಎಣಿಕೆಯ ದಿನ ನಡೆಯುವ ಸಂಗತಿಗಳ ಕುರಿತು ವರದಿ ಇಲ್ಲಿದೆ.

ಅಕ್ಟೋಬರ್ 8ರಂದು ಮತ ಎಣಿಕೆ ನಡೆಯುವ ಸಂಬಂಧ ಕೇಂದ್ರಗಳ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿರುತ್ತದೆ. ಚುನಾವಣೆ ಆಯೋಗ ಅಧಿಕಾರಿಗಳಿಗೆ, ಮತ ಎಣಿಕೆ ಸಿಬ್ಬಂದಿಗೆ ಅಗತ್ಯ ಸೂಚನೆ, ತರಬೇತಿ ನೀಡಿರುತ್ತದೆ. ಅಂದು ಚುನಾವಣಾ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳೊಂದಿಗೆ ಚುನಾವಣಾಧಿಕಾರಿಗಳು ಹಾಗೂ ಇಸಿ ವಿಶೇಷ ವೀಕ್ಷಕರ ಸಮ್ಮುಖದಲ್ಲಿ ಎಲೆಕ್ಟ್ರಿಕ್ ವೋಟಿಂಗ್ ಮಷಿನ್ ಗಳನ್ನು (ಇವಿಎಂ) ಸ್ಟ್ರಾಂಗ್ ರೂಂನಿಂದ ಹೊರ ತರಲಾಗುತ್ತದೆ. ಇದೆಲ್ಲದರ ಪಾರದರ್ಶಕತೆಗಾಗಿ ಈ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗುತ್ತದೆ.
ಸಿಸಿಟಿವಿ ಕಣ್ಗಾವಲಿನಲ್ಲಿ ಮತ ಎಣಿಕೆ
ಅಲ್ಲಿಂದ ನೇರವಾಗಿ ಈ ಮತದಾನ ಯಂತ್ರಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿಯೇ ಮತದಾನ ಎಣಿಕೆಯ ಟೇಬಲ್‌ಗಳ ಮೇಲೆ ತಂದು ಇಡಲಾಗುತ್ತದೆ. ಈ ವೇಳೆ ಸಂಬಂಧಿಸಿದ ಸಿಬ್ಬಂದಿ ವಿಶಿಷ್ಟ ಐಡಿ ಸಂಖ್ಯೆ ಮತ್ತು ಸಹಿ ಮಾಡಿದ ಸೀಲ್ ಅನ್ನು ಪರಿಶೀಲಿಸುತ್ತಾರೆ. ನಂತರ ಅದೆಲ್ಲವನ್ನು ಅಭ್ಯರ್ಥಿಗಳು, ಅವರ ಸಂಬಂಧಿಸಿದ ಪ್ರತಿನಿಧಿಗಳಿಗೆ, ಪೋಲಿಂಗ್ ಏಜೆಂಟ್‌ಗಳಿಗೆ ತೋರಿಸಲಾಗುತ್ತದೆ.
ಹೀಗೆ ಮತ ಎಣಿಕೆ ಶುರುವಾಗುತ್ತದೆ. ನಂತರ ಯಂತ್ರದ ಬಟನ್ ಅನ್ನು ಒತ್ತಿದರೆ ಇವಿಎಂನಲ್ಲಿ ದಾಖಲಾದ ಪ್ರತಿಯೊಬ್ಬ ಅಭ್ಯರ್ಥಿ ಅವರ ಹೆಸರಿನ ಪಕ್ಕದಲ್ಲಿ ಪಡೆದುಕೊಂಡಿರುವ ಮತ ಪ್ರದರ್ಶನವಾಗುತ್ತದೆ. ಹೀಗೆ ಒಂದೊಂದಾಗೆ ಪರಿಶೀಲಿಸಲಾಗುತ್ತದೆ. ಎಣಿಕೆಯಾದ ಮತಗಳನ್ನು ಆಗಾಗ ಬಹಿರಂಗಪಡಿಸಲಾಗುತ್ತದೆ. ಸದ್ಯ ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಚುನಾವಣೆ ಆಯೋಗ ಮಾಡಿಕೊಂಡಿರುತ್ತದೆ.
ಇವಿಎಂ ಮಷಿನ್ ಎಣಿಕೆ ಮೊದಲೇ ಚುನಾವಣಾಧಿಕಾರಿಗಳು ಕಾಗದದ ಚೀಟಿಗಳನ್ನು ಎಣಿಸಲು VVPAT ಯಂತ್ರ ಬಳಕೆ ಮಾಡುತ್ತಾರೆ. ಮತ ಎಣಿಕೆ ಹಾಲ್‌ನೊಳಗೆ ಕ್ಯಾಮೆರಾ ಇರಲಿದ್ದು, ಸಾಮಾನ್ಯ ವೀಕ್ಷಕರು ಮತ್ತು ಪಕ್ಷದ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ಎಣಿಕೆ ಮಾಡುತ್ತಾರೆ.
VVPAT ಮತ್ತು EVM ಸಂಖ್ಯೆಗಳ ನಡುವೆ ಹೊಂದಾಣಿಕೆ ಕಂಡು ಬಾರದಿದ್ದಾರೆ. ಚುನಾವಣಾ ನಿಯೋಜಿತ ಸಿಬ್ಬಂದಿಯು ಮತ್ತೆ ಚೀಟಿ ಮತದಾನಗಳನ್ನು ಮರುಎಣಿಕೆ ಮಾಡುತ್ತಾರೆ. ಹೀಗೆ ವಿವಿಪ್ಯಾಟ್ ಮತ್ತು ಇವಿಎಂ ಮತಗಳ ಸಂಖ್ಯೆಗಿಂತ ವಿವಿಪ್ಯಾಟ್ ಸಂಖ್ಯೆಗಳನ್ನು ಪರಿಗಣಿಸಲಾಗುತ್ತದೆ. ಅದರ ಫಲಿತಾಂಶದ ಹಾಳೆಗಳಲ್ಲಿ ನಮೂದಿಸಲಾಗುತ್ತದೆ.
ಒಂದು ವೇಳೆ ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಒಂದು ಕ್ಷೇತ್ರದಲ್ಲಿ ಎಲ್ಲಾ ವಿವಿಪ್ಯಾಟ್ ಯಂತ್ರಗಳ ಮರು ಎಣಿಕೆ ಮಾಡುವ ಸಾಧ್ಯತೆ ಇರುತ್ತದೆ.












Click it and Unblock the Notifications