Haryana Assembly Election Results 2024: ಬಿಜೆಪಿ, ಕಾಂಗ್ರೆಸ್ ಬದಿಗಿಕ್ಕಿದ ಪಕ್ಷೇತರ ಅಭ್ಯರ್ಥಿ 'ಸಾವಿತ್ರಿ ಜಿಂದಾಲ್'
ನವದೆಹಲಿ, ಅಕ್ಟೋಬರ್ 08: ಹರಿಯಾಣದಲ್ಲಿರುವ ಹಿರಿಯ ಅಭ್ಯರ್ಥಿಗಳು ಹಾಗೂ ಮಹಿಳಾ ಅಭ್ಯರ್ಥಿಗಳಲ್ಲಿ ಉದ್ಯಮಿ ಓಂ ಪ್ರಕಾಶ್ ಜಿಂದಾಲ್ ಪತ್ನಿ ಸಾವಿತ್ರಿ ಜಿಂದಾಲ್ ಅವರು ಸಹ ಒಬ್ಬರು. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಇವರು ಪಕ್ಷೇತರವಾಗಿ ಹರಿಯಾಣ ಹಿಸಾರ್ ಕ್ಷೇತ್ರದಿಂದ ಕಣಕ್ಕಿಳಿದರು. ಗೆಲ್ಲುವ ಕುದುರೆಗೆ ಟಿಕೆಟ್ ನೀಡದೇ ಕೈ ಸುಟ್ಟುಕೊಂಡೆವಾ ಎಂದು ಬಿಜೆಪಿ ಈಗ ಯೋಚಿಸುತ್ತಿದೆ.
ಹೌದು, ಈವರೆಗಿನ ಮತ ಎಣಿಕೆ (ಬೆಳಗ್ಗೆ 10 ಗಂಟೆ) ಪ್ರಕಾರ, ಹಿಸಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ರಾಮ್ ನಿವಾಸ್ ರಾರಾ ಅವರಿಗಿಂತಲೂ ಪಕ್ಷೇತರ ಅಭ್ಯರ್ಥಿ ಸಾವಿತ್ರಿ ಜಿಂದಾಲ್ ಮುಂದಿದ್ದಾರೆ. ಬಹುತೇಕ ಗೆಲುಗಿನ ಹಾದಿ ಸಮೀಪಿಸಿರುವ ಇವರಿಗೆ ಟಿಕೆಟ್ ನೀಡದೇ ತಪ್ಪು ಮಾಡಲಾಯಿತೇ ಎಂದು ಬಿಜೆಪಿ ಪಶ್ಚಾತಾಪ ಪಡುವಂತಾಗಿದೆ.

ಪೊರ್ಬ್ಸ್ ನಿಯತಕಾಲಿಕೆ ಪ್ರಕಾರ, ಸಾವಿತ್ರಿ ಜಿಂದಾಲ್ ಅವರು ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಇವರ ಪುತ್ರ ಬಿಜೆಪಿಯಿಂದ ಹಾಲಿ ಸಂಸದರಾಗಿದ್ದಾರೆ. ಹೀಗಿದ್ದರೂ ಅವರು ಸ್ವಯಂ ಸಾಮಾನ್ಯ ಮಹಿಳೆಯಂತೆ ಕ್ಷೇತ್ರಾದ್ಯಂತ ಪ್ರಚಾರ ನಡೆಸಿದ್ದರು. ಅವರ ನಂಬಿಕೆಗೆ ಜನರು ಮೋಸ ಮಾಡದೆ, ಅಭಿವೃದ್ಧಿ ಪರ ಇಂಗಿತ ಹೊಂದಿರುವ ಸಾವಿತ್ರಿ ಅವರನ್ನು ಕೈ ಹಿಡಿದಿದ್ದಾರೆ.
ಇದೇ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಆಯ್ಕೆ ಆಗಿದ್ದರು. ಈ ಬಾರಿ ಟಿಕೆಟ್ ನೀಡದ ಬಿಜೆಪಿಯು ಹಿಸಾರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸಾಧಿಸುತ್ತಿರುವ ಮುನ್ನಡೆ, ಪಡೆಯುತ್ತಿರು ಮತಗಳನ್ನು ನೋಡಿ ದಂಗಾಗಿದೆ. ಸದ್ಯ ಹಿಸಾರ್ ಕ್ಷೇತ್ರದಿಂದ ಸಾವಿತ್ರಿ ಜಿಂದಾಲ್ ಆಯ್ಕೆ ಆಗುವುದ ಬಹುತೇಕ ಅಂತಿಮವಾಗಿದೆ. ಚುನಾವಣೆ ಆಯೋಗದಿಂದ ಅಧಿಕೃತ ಮಾಹಿತಿ ಹೊರ ಬರುವುದು ಬಾಕಿ ಇದೆ.
ಹರಿಯಾಣದಲ್ಲಿ ಬಿಜೆಪಿಗೆ ಮುನ್ನಡೆ
ಸದ್ಯ ಹರಿಯಾಣದಲ್ಲಿ ನಿರಂತರವಾಗಿ ಮುನ್ನಡೆ ಸಾಧಿಸುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ಟಕ್ಕರ್ ನೀಡಿದೆ. ಬಿಜೆಪಯ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಕೇವಲ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಬಿಜೆಪಿಯಿಂದ ಮೈತ್ರಿ ಕೊಡವಿಕೊಂಡು ಸ್ವತಂತ್ರವಾಗಿ ಕಣಕ್ಕಿಳಿದ ಜೆಜೆಪಿಗೆ ಒಂದು ಕ್ಷೇತ್ರವು ಈವರಗೆ ಸಿಕ್ಕಿಲ್ಲ. ಐಎನ್‌ಎಲ್‌ಡಿ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಅಲ್ಲಿ ಕಾಂಗ್ರೆಸ್ 51 ಸ್ಥಾನಗಳಲ್ಲಿ ಅಧಿಕ ಮತಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ನಡೆದ ಎರಡು ರಾಜ್ಯಗಳ ವಿಧಾನಸಭ ಚುನಾವಣೆಯಲ್ಲಿ ಒಂದರಲ್ಲಿ ಬಿಜೆಪಿಗೆ ಮತ್ತೊಂದರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗುವ ಭರವಸೆ ಮೂಡಿದೆ. ಸಂಜೆ ಹೊತ್ತಿಗೆ ಚುನಾವಣಾ ಅಧಿಕಾರಿಗಳು ಸ್ಪಷ್ಟ ಚಿತ್ರಣ ನೀಡಲಿದ್ದರೆ.












Click it and Unblock the Notifications