ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ಹರ್ಷವರ್ಧನ ನೇಮಕ
ನವದೆಹಲಿ, ಡಿಸೆಂಬರ್ 20: ಹಿರಿಯ ಅಧಿಕಾರಿ ಹರ್ಷವರ್ಧನ ಶ್ರಿಂಗ್ಲಾ ಅವರನ್ನು ಅಮೆರಿಕಕ್ಕೆ ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಿ ಗುರುವಾರದಂದು ಆದೇಶ ಹೊರಡಿಸಲಾಗಿದೆ.
ಭಾರತೀಯ ವಿದೇಶಿ ಸೇವೆಯ 1984ನೇ ಬ್ಯಾಚಿನ ಅಧಿಕಾರಿಯಾಗಿರುವ ಶ್ರಿಂಗ್ಲಾ ಅವರು ನವತೇಜ್ ಸಿಂಗ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಶ್ರಿಂಗ್ಲಾ ಅವರು ಶೀಘ್ರದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿದೆ.

ಶ್ರಿಂಗ್ಲಾ ಅವರು ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದೇ ವೇಳೆ ಹಿರಿಯ ಅಧಿಕಾರಿ ರಿವಾ ಗಂಗೂಲಿ ದಾಸ್ ಅವರನ್ನು ಬಾಂಗ್ಲಾದೇಶದ ನೂತನ ಹೈ ಕಮನಿಷನರ್ ಆಗಿ ನೇಮಿಸಲಾಗಿದೆ. ಸದ್ಯ ಅವರು ಸಾಂಸ್ಕೃತಿಕ ಸೌಹಾರ್ದತೆಯ ಭಾರತ ಕೌನ್ಸಿಲ್ ನ ಪ್ರಧಾನ ನಿರ್ದೇಶಕಿಯಾಗಿದ್ದಾರೆ.












Click it and Unblock the Notifications