ಹಾರ್ದಿಕ್ ಪಟೇಲ್ ಬಿಯರ್ ಕುಡಿಯುವ ವಿಡಿಯೋ ವೈರಲ್

Posted By:
Subscribe to Oneindia Kannada

ಅಹಮದಾಬಾದ್, ನವೆಂಬರ್ 14: ಗುಜರಾತ್ ಅಸೆಂಬ್ಲಿ ಚುನಾವಣೆ ಅಖಾಡದಲ್ಲಿ ಈಗ ವಿಡಿಯೋಗಳದ್ದೇ ಸದ್ದು, ಮೋದಿ ಹೊಗಳುವ ವಿಡಿಯೋ, ಮೋದಿ ತೆಗಳುವ ವಿಡಿಯೋಗಳ ಪೈಪೋಟಿ ನಡುವೆ ಹಾರ್ದಿಕ್ ಪಟೇಲ್ ವಿಡಿಯೋಗಳು ಜನಪ್ರಿಯತೆ ಗಳಿಸುತ್ತಿವೆ.

ಹಾರ್ದಿಕ್ ಪಟೇಲ್ ಅವರು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಸೆಕ್ಸ್ ಸಿಡಿ ರಿಲೀಸ್ ಆಗಿತ್ತು. ಈಗ ಹಾರ್ದಿಕ್ ಪಟೇಲ್ ಹಾಗೂ ಗೆಳೆಯರು ಸೇರಿ ಗುಂಡು ಹಾಕುವ ವಿಡಿಯೋವೊಂದು ಸ್ಥಳೀಯ ಟಿವಿ ಚಾನೆಲ್ ಗಳಲ್ಲಿ ಹರಿದಾಡುತ್ತಿವೆ.

Hardik Patel new video is out now, where he drinking beer

ಬಿಜೆಪಿ ತನ್ನ ಕೊಳಕು ರಾಜಕೀಯ ಶುರು ಮಾಡಿದ್ದು, ಯಾವುದೇ ವಿಡಿಯೋಗಳನ್ನು ನಂಬಬೇಡಿ ಎಂದು ಪಾಟೀದರ್ ಆಂದೋಲನದ ಮುಖಂಡನಾಗಿರುವ 24ರ ಹರೆಯ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಮಹಾತ್ಮಾ ಗಾಂಧೀಜಿಯ ನಾಡು ಗುಜರಾತಿನಲ್ಲಿ ಮದ್ಯ ಸೇವನೆ ನಿಷಿದ್ಧ. ಹೀಗಾಗಿ ಹಾರ್ದಿಕ್ ಅವರು ಮದ್ಯ, ಮಾನಿನಿಯರ ಜತೆಯಲ್ಲಿರುವ ವಿಡಿಯೋಗಳು ಸಹಜವಾಗಿ ವೈರಲ್ ಆಗುತ್ತಿವೆ.

ಕಳೆದ ಮೇ ತಿಂಗಳಿನಲ್ಲಿ ಮೋದಿ ಅವರು ಗುಜರಾತಿಗೆ ಆಗಮಿಸುವುದಕ್ಕೂ ಮುನ್ನ ಹಾರ್ದಿಕ್ ಪಟೇಲ್ ಹಾಗೂ ಸಂಗಡಿಗರು ತಲೆ ಬೋಳಿಸಿಕೊಂಡು 155 ಕಿಲೋ ಮೀಟರ್ ಗಳ ದೂರ ಪಾದಯಾತ್ರೆ ನಡೆಸಿದ್ದರು.

ಹಾರ್ದಿಕ್ ಪಟೇಲ್ ಅವರಿದ್ದಾರೆ ಎನ್ನುವ ಸೆಕ್ಸ್ ಸಿಡಿಗೂ ಬಿಜೆಪಿಗೂ ಏನು ಸಂಬಂಧವಿಲ್ಲ. ಇಂಥ ನೀಚ ಕೃತ್ಯಕ್ಕೆ ನಾವು ಕೈ ಹಾಕಿಲ್ಲ. ಇದು ನಕಲಿ ವಿಡಿಯೋ ಎಂದಾದರೆ ಹಾರ್ದಿಕ್ ಅವರು ಪೊಲೀಸರಿಗ್ ದೂರು ನೀಡಿಲ್ಲವೇಕೆ? ಎಂದು ಬಿಜೆಪಿ ಮುಖಂಡ ಮನ್ಸುಖ್ ಮಾಂದವಿಯಾ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The footage of a man resembling Hardik Patel, seen with an unidentified woman, appears to have been filmed on a hidden camera in a hotel room and has a time-stamp of May this year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ