ಲೈಂಗಿಕ ಕಿರುಕುಳ: ಶಾಲೆಗಳಿಂದ ಶಿಕ್ಷಕರ ಎತ್ತಂಗಡಿ

ಈಗಾಗಲೇ ವಿದ್ಯಾರ್ಥಿನಿಯರ ಶಾಲೆಗಳಲ್ಲಿ ಪಾಠ ಹೇಳಿಕೊಡುತ್ತಿರುವ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ಸಾಮೂಹಿಕವಾಗಿ ವರ್ಗ ಮಾಡಲಾಗಿದೆ. ಸುಮಾರು 800 ಮಂದಿಯನ್ನು ಹೀಗೆ ವರ್ಗ ಮಾಡಲಾಗಿದೆ. ಆದರೆ ಶಿಕ್ಷಕರ ಒಕ್ಕೂಟ ಇದನ್ನು ತೀವ್ರವಾಗಿ ವಿರೋಧಿಸಿದೆ. ಇದರೊಂದಿಗೆ ವಿದ್ಯಾರ್ಥಿನಿಯರ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಿರುವ ಶಾಲೆಗಳು ಇಲ್ಲಿ ಮಾತ್ರ ಕಾಣುವಂತಾಗಿದೆ.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ವಿದ್ಯಾರ್ಥಿನಿಯರಿಗೆ ಶಿಕ್ಷಕಿಯರೂ ಮಾತ್ರ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾತ್ರ ಪಾಠ ಹೇಳಿಕೊಡಬೇಕು ಎಂದು ರಾಜ್ಯ ಶಿಕ್ಷಣ ಸಚಿವ ಸಿಂಕಂದರ್ ಸಿಂಗ್ ಮಾಲೂಕ್ ತಿಳಿಸಿದ್ದಾರೆ.
ಇದರ ವಿರುದ್ಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಎಲ್ಲಾ ಶಿಕ್ಷಕರೂ ಅತ್ಯಾಚಾರಿಗಳು ಎಂಬ ಭಾವನೆ ಮೂಡತ್ತದೆ ಎಂದು ಅವರು ಕಿಡಿಕಾರಿದ್ದಾರೆ. ಎಲ್ಲ ಪುರುಷರನ್ನೂ ಒಂದೇ ದೃಷ್ಟಿಯಿಂದ ನೋಡುವುದು ಸಾಧುವಲ್ಲ. ವಿದ್ಯಾರ್ಥಿಗಳು ನಮ್ಮ ಮನೆಯ ಮಕ್ಕಳಿದ್ದಂತೆ. ಇದು ಪ್ರಾಕ್ಟಿಕಲ್ ಆಗಿಯೂ ಇದು ಸಾಧ್ಯವಾಗದು. ಯಾವುದೇ ಶಾಲೆಯಲ್ಲಿ ಅಂತಹ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿದ್ದರೆ ಅಂತಹ ಶಾಲೆಯ ಆಪಾದಿತರಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಲ್ಲೆಡೆ ಕೂಗು ಕೇಳಿಬಂದಿದೆ.
ಪಂಜಾಬ್ ರಾಜ್ಯದಲ್ಲಿ 1 ಲಕ್ಷ ಮಂದಿ ಶಿಕ್ಷಕರಿದ್ದಾರೆ. ಇವರ ಪೈಕಿ ಶೇ. 60ರಷ್ಟು ಮಂದಿ ಶಿಕ್ಷಕರೇ ಇದ್ದಾರೆ.












Click it and Unblock the Notifications