ಏನ್ ಗುರು ಬೈಕ್‌ನ್ನು ಬಸ್ ಅಂತಾ ಮಾಡಿದ್ದಿಯಾ: 9500 ದಂಡ
ಈಗ ಸಮಾಜಿಕ ತಾಣಗಳನ್ನು ಓಪನ್ ಮಾಡಿದರೆ ಸಾಕು ವೈರಲ್ ವಿಡಿಯೋಗಳು ಸಖತ್ ಟ್ರೆಂಡ್ ಸೃಷ್ಟಿಸುತ್ತವೆ. ಈ ವಿಡಿಯೋಗಳನ್ನು ನೋಡಿದ ಜನ ಸಖತ್ ಎಂಜಾಯ್ ಮಾಡ್ತಾರೆ. ಇನ್ನು ಹಲವರು ಇವುಗಳನ್ನು ನೋಡಿ ಜೀವನದಲ್ಲಿ ಪಾಠ ಕಲಿತಾರೆ. ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ರಸ್ತೆಯಲ್ಲಿ ಬೈಕ್ ಓಡಿಸುವಾಗ ಅಬ್ಬಾಬ ಅಂದರೆ ಮೂರು ಜನರನ್ನು ಕೂಡಿಸಿಕೊಂಡು ಹೋಗುವುದನ್ನು ನೋಡಿರುತ್ತೇವೆ. ಇನ್ನು ಹೆಚ್ಚು ಅಂದರೆ ನಾಲ್ಕು.. ಇದನ್ನು ಮೀರಿ ಜನ ಕುಳಿತು ಕೊಳ್ಳಲು ಸಹ ಸ್ಥಳ ಈ ಬೈಕ್‌ನಲ್ಲಿ ಇರುವುದಿಲ್ಲ ಎನ್ನುವುದು ವಾಸ್ತವ. ಆದರೆ ಈ ಒಬ್ಬ ಮನುಷ್ಯ ಬೈಕ್‌ನಲ್ಲಿ ಕುಳಿಸಿಕೊಂಡ ಜನರನ್ನು ಒಮ್ಮೆ ಲೆಕ್ಕ ಹಾಕಿದರೆ, ಕಾರ್‌ನಲ್ಲೂ ಇಷ್ಟು ಜನರನ್ನು ಕುರಿಸಿಕೊಳ್ಳುವುದು ಕಷ್ಟ ಎಂಬ ಮಾತು ಬರುವುದು ಸತ್ಯ.

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬರಲ್ಲ, ಇಬ್ಬರಲ್ಲ 7 ಮಂದಿ ಬೈಕ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರೇ ಚಿಕ್ಕ ಚಿಕ್ಕ ಮಕ್ಕಳು. ಈ ವಿಡಿಯೋ ಸಿಂಭವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಬೈಕ್ ಮೇಲೆ ಕೂರಲು ಜಾಗವಿಲ್ಲದೇ ಯುವಕನೊಬ್ಬ ಮಗುವನ್ನು ಭುಜದ ಮೇಲೆ ಕೂರಿಸಿಕೊಂಡಿರುವುದು ಕಂಡು ಬರುತ್ತಿದೆ. ಈ ವಿಡಿಯೋವನ್ನು ಗಮನಿಸಿದ ಹಾಪುರ್ ಪೊಲೀಸರು ಕ್ರಮ ಕೈಗೊಂಡು 9500 ರೂ. ಡಂವನ್ನು ವಿಧಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ನಲ್ಲಿ 7 ಮಂದಿ ಪ್ರಯಾಣ ಮಾಡುತ್ತಿರುವುದು ಕಂಡು ಬರುತ್ತದೆ. ವೀಡಿಯೋ ನೋಡಿದರೆ ಇದು ಸಿನಿಮಾ ಶೂಟಿಂಗ್‌ನ ದೃಶ್ಯವೇನೋ ಅನಿಸುತ್ತಿದೆ. ಬೈಕ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದವರಲ್ಲಿ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ಆದರೆ, ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಬೈಕ ಸವಾರರ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ನೆಟ್ಟಿಗರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಹಾಪುರ್‌ನಲ್ಲಿ ಏಳು ಜನರು ಮೋಟಾರ್‌ಸೈಕಲ್ ಸವಾರಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಜನರಲ್ಲಿ ಚರ್ಚೆಗೆ ಕಾರಣವಾಗಿತ್ತು. ವಿಡಿಯೋ ವೈರಲ್ ಆದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಅಲ್ಲದೆ, ಪೊಲೀಸರು 22 ಸಾವಿರ ರೂ. ದಂಡ ವಿಧಿಸಿದ್ದಾರೆ.












Click it and Unblock the Notifications