ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗೆ ಹೊರಟ ಯೋಧ ಹನುಮಂತಪ್ಪ ಕುಟುಂಬದವರು

By ಡಾ. ಅನಂತ ಕೃಷ್ಣನ್
|
Google Oneindia Kannada News

ನವದೆಹಲಿ, ಫೆಬ್ರವರಿ 09 : ಸಿಯಾಚಿನ್‌ನಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರು ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯೋಧನ ಕುಟುಂಬ ಸದಸ್ಯರು ಧಾರವಾಡದಿಂದ ಹೊರಟಿದ್ದು, ಸಂಜೆಯ ವೇಳೆಗೆ ದೆಹಲಿ ತಲುಪುವ ನಿರೀಕ್ಷೆ ಇದೆ.

ಆರು ದಿನಗಳಿಂದ 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಹನುಮಂತಪ್ಪ ಕೊಪ್ಪದ ಅವರನ್ನು ಸೋಮವಾರ ಪತ್ತೆ ಹಚ್ಚಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಆರ್.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. [ಹನುಮಂತಪ್ಪ ಆರೋಗ್ಯ ವಿಚಾರಿಸಿದ ಮೋದಿ]

ದೆಹಲಿಗೆ ಹೊರಟ ಕುಟುಂಬ ಸದಸ್ಯರು : ಹನುಮಂತಪ್ಪ ಕೊಪ್ಪದ ಅವರ ಪತ್ನಿ, ಪುತ್ರಿ ಸೇರಿದಂತೆ ಐವರು ಕುಟುಂಬ ಸದಸ್ಯರು ದೆಹಲಿಗೆ ಆಗಮಿಸಲಿದ್ದಾರೆ. ಹನುಮಂತಪ್ಪ ಕೊಪ್ಪದ ಅವರ ಸಂಬಂಧಿಕರಾದ ಈಶ್ವರ ಕೊಪ್ಪದ ಅವರು ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ್ದು, ಧಾರವಾಡದ ಶಾಸಕರು ಕುಟುಂಬ ಸದಸ್ಯರು ದೆಹಲಿಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. [ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

'ಹನುಮಂತಪ್ಪ ಕೊಪ್ಪದ ಅವರ ಪತ್ನಿ, ಪುತ್ರಿ ನೇತ್ರಾ ಅವರು ಧಾಡವಾಡಕ್ಕೆ ಆಗಮಿಸುತ್ತಿದ್ದು, ಅಲ್ಲಿಂದ ಕಾರಿನ ಮೂಲಕ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಅವರು ದೆಹಲಿ ತಲುಪುವ ಸಾಧ್ಯತೆ ಇದೆ' ಎಂದು ಈಶ್ವರ ಕೊಪ್ಪದ ಹೇಳಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಟ್ವಿಟ್ ಮಾಡಿ ರಕ್ಷಣಾ ಸಚಿವ : ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಟ್ವಿಟ್ ಮಾಡಿದ್ದು, 'ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ, ನನ್ನ ಹಾರೈಕೆ ಅವರಿಗೆ ಇದೆ' ಎಂದು ತಿಳಿಸಿದ್ದಾರೆ.

ಹಿಮಪಾತ ಸಂಭವಿಸಿತ್ತು : ಫೆ.3ರಂದು ಮದ್ರಾಸ್ ರೆಜಿಮೆಂಟ್‌ಗೆ ಸೇರಿದ 10 ಯೋಧರು 19 ಸಾವಿರ ಅಡಿಗಳ ಎತ್ತರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾರೀ ಹಿಮಪಾತ ಸಂಭವಿಸಿತ್ತು. ಆಗ ಅಲ್ಲಿದ್ದ ಯೋಧರು ಹಿಮದಲ್ಲಿ ಸಿಲುಕಿದ್ದರು. ಕರ್ನಾಟಕದ ಹಾಸನದ ತೇಜೂರಿನ ಟಿ.ಟಿ ನಾಗೇಶ್, ಮೈಸೂರಿನ ಎಚ್​.ಡಿ.ಕೋಟೆ ತಾಲೂಕಿನ ಪಿ.ಎನ್. ಮಹೇಶ್ ಮತ್ತು ಧಾರವಾಡದ ಹನುಮಂತಪ್ಪ ಕೊಪ್ಪದ ಅವರು ಈ ಹಿಮಪಾತದಲ್ಲಿ ಸಿಲುಕಿದ್ದರು. ಇವರ ಪೈಕಿ ನಾಗೇಶ್ ಮತ್ತು ಮಹೇಶ್ ಮೃತಪಟ್ಟಿದ್ದಾರೆ.

English summary
Lance Naik Hanumanthappa condition is said to be stable, but not out of danger. Hanumanthappa Koppad's family members are on their way to Delhi, According to Eashwar Koppad, one of the relatives of the solider.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X