ಪ್ರೇಯಸಿಯ ಹುಚ್ಚಾಟ: ಕಾರಿನ ತುಂಬಾ 3400 ಲಿಪ್‌ಸ್ಟಿಕ್ ಕಿಸ್; ಯುವಕನಿಗೆ 5,500 ರೂ. ದಂಡ

ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಬೇಕು, ಲಕ್ಷಾಂತರ ಲೈಕ್ಸ್ ಮತ್ತು ವೀವ್ಸ್ ಗಿಟ್ಟಿಸಿಕೊಳ್ಳಬೇಕು ಎಂಬ ಹುಚ್ಚು ಯುವಜನತೆಯನ್ನ ಯಾವ ಮಟ್ಟಕ್ಕೆ ಬೇಕಾದರೂ ಕೊಂಡೊಯ್ಯಬಲ್ಲದು ಎಂಬುದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಈ ವಿಲಕ್ಷಣ ಘಟನೆಯೇ ಉದಾಹರಣೆ. ಕೇವಲ ಒಂದು ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ಸೋಶಿಯಲ್ ಮೀಡಿಯಾಗಾಗಿ ಯುವಕನೊಬ್ಬ ತನ್ನ ಕಾರಿನ ಸ್ವರೂಪವನ್ನೇ ಬದಲಾಯಿಸಿ, ಇದೀಗ ಟ್ರಾಫಿಕ್ ಪೊಲೀಸರ ಅತಿಥಿಯಾಗಿರುವ ಜೊತೆಗೆ ದುಬಾರಿ ದಂಡವನ್ನು ತೆತ್ತಿದ್ದಾನೆ.

ಕಾರಿನ ತುಂಬಾ ಮುತ್ತಿನ ಸುರಿಮಳೆಗೈದ ಪ್ರೇಯಸಿಯಿಂದ ಯುವಕನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

Gwalior Man

ಕಾರಿನ ತುಂಬಾ 3,400 ಲಿಪ್‌ಸ್ಟಿಕ್ ಕಿಸ್ ಮಾಡಿದ್ದ ಪ್ರೇಯಸಿ

ಗ್ವಾಲಿಯರ್ ನಗರದ ನಿವಾಸಿಯಾಗಿರುವ ಆದಿತ್ಯ ಸಿಕರ್ವಾರ್ ಎಂಬ ಯುವಕನೇ ಸುದ್ದಿಯಾದ ವ್ಯಕ್ತಿ. ಈತನ ಪ್ರೇಯಸಿ, ಕಾರಿಗೆ ಹೊಸ ಲುಕ್ ನೀಡುವ ನೆಪದಲ್ಲಿ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಶ್ರಮ ವಹಿಸಿ ಕಾರಿನ ಹೊರಭಾಗದ ತುಂಬಾ ಲಿಪ್‌ಸ್ಟಿಕ್ ಹಚ್ಚಿಕೊಂಡು ಮುತ್ತು ನೀಡಿದ್ದಾಳೆ. ಅಂದಾಜು 3,400ಕ್ಕೂ ಹೆಚ್ಚು ಮುತ್ತಿನ ಅಚ್ಚುಗಳನ್ನ ಕಾರಿನ ಮೇಲೆ ಮೂಡಿಸಲಾಗಿದೆ.

ಕಾರಿನ ಬಾಗಿಲುಗಳು, ಬಾನೆಟ್, ಡಿಕ್ಕಿ, ಪಿಲ್ಲರ್‌ಗಳು ಸೇರಿದಂತೆ ಕಣ್ಣಿಗೆ ಕಾಣುವ ಪ್ರತಿಯೊಂದು ಭಾಗದಲ್ಲೂ ಕೆಂಪು ಬಣ್ಣದ ತುಟಿಯಚ್ಚುಗಳು ರಾರಾಜಿಸುತ್ತಿದ್ದವು. ಬಿಳಿ ಬಣ್ಣದ ಕಾರು ಸಂಪೂರ್ಣವಾಗಿ ಮುತ್ತಿನ ಕ್ಯಾನ್ವಾಸ್ ಆಗಿ ಮಾರ್ಪಟ್ಟಿತ್ತು. ಇದನ್ನು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ರಸ್ತೆಯಲ್ಲಿ ಹೋಗುವವರೆಲ್ಲರೂ ಈ ಕಾರನ್ನ ಕಣ್ಣರಳಿಸಿ ನೋಡುವಂತಾಗಿತ್ತು.

ಯಾವಾಗ ಈ ಕಾರಿನ ವಿಚಿತ್ರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವೋ, ಆಗ ಸಹಜವಾಗಿಯೇ ಗ್ವಾಲಿಯರ್ ಟ್ರಾಫಿಕ್ ಪೊಲೀಸರ ಗಮನಕ್ಕೂ ಇದು ಬಂದಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ, ವಾಹನದ ಮೂಲ ಸ್ವರೂಪವನ್ನ ಮನಬಂದಂತೆ ಬದಲಾಯಿಸುವುದು ಅಥವಾ ಇತರೆ ವಾಹನ ಸವಾರರ ಗಮನವನ್ನ ವಿಚಲಿತಗೊಳಿಸುವಂತಹ ಯಾವುದೇ ಮಾರ್ಪಾಡುಗಳನ್ನ ಮಾಡುವುದು ಅಪರಾಧವಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವೈರಲ್ ಆಗಿದ್ದ ವಿಡಿಯೋದಲ್ಲಿನ ಕಾರಿನ ರಿಜಿಸ್ಟ್ರೇಷನ್ ನಂಬರ್ ಆಧಾರದ ಮೇಲೆ ಹುಡುಕಾಟ ಶುರುಮಾಡಿದರು. ಅಂತಿಮವಾಗಿ ಈ ಕಾರು ಗ್ವಾಲಿಯರ್‌ನ ಥಾಟಿಪುರ ಪ್ರದೇಶಕ್ಕೆ ಸೇರಿದ್ದು ಎಂಬುದನ್ನು ಪತ್ತೆಹಚ್ಚಿ, ಕಾರು ಮಾಲೀಕ ಆದಿತ್ಯ ಸಿಕರ್ವಾರ್‌ನನ್ನ ವಿಚಾರಣೆಗಾಗಿ ಠಾಣೆಗೆ ಕರೆಸಿದರು.

ಯುವಕನಿಗೆ 5,500 ರೂ. ದಂಡ

ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಯುವಕ, ಕೇವಲ ತಮಾಷೆಗಾಗಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಉದ್ದೇಶದಿಂದ ಈ ರೀತಿ ಕಾರಿನ ಮೇಲೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಕಿಸ್ ಮಾಡಿಸಿದ್ದಾಗಿ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ. ವಾಹನದ ಹೊರನೋಟವನ್ನ ಹೀಗೆ ಸಂಪೂರ್ಣವಾಗಿ ಬದಲಾಯಿಸಿರುವುದು ವಾಹನ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಉಲ್ಲಂಘನೆಯಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಧರಮ್‌ವೀರ್ ಯಾದವ್, ಕಾರಿನ ಮಾಲೀಕನಿಗೆ ಮೋಟಾರು ವಾಹನ ಕಾಯ್ದೆಯಡಿ 5,500 ರೂಪಾಯಿಗಳ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇವಲ ದಂಡ ವಿಧಿಸಿ ಸುಮ್ಮನಾಗದ ಪೊಲೀಸರು, ತಕ್ಷಣವೇ ಕಾರನ್ನ ಸರ್ವೀಸ್ ಸ್ಟೇಷನ್‌ಗೆ ಕೊಂಡೊಯ್ದು ವಾಶ್ ಮಾಡಿಸಿ, ಅದರ ಮೇಲಿದ್ದ ಎಲ್ಲಾ 3,400 ಲಿಪ್‌ಸ್ಟಿಕ್ ಕಿಸ್ ಮಾರ್ಕ್‌ಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+