ಗುರ್ ಗಾಂವ್ ನಿವಾಸಿಗೆ ಶಾಕ್ ಕೊಟ್ಟ 'ಕರೆಂಟ್ ಬಿಲ್'
ಗುರ್ ಗಾಂವ್, ಸೆ.28: ಜೀವಮಾನದಲ್ಲೇ ಭರಿಸಲಾಗದಷ್ಟು ದೊಡ್ಡ ಮೊತ್ತ ಬಿಲ್ ಕಂಡು ಇಲ್ಲಿನ ನಿವಾಸಿಯೊಬ್ಬರು ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಮಾಡಿರುವ ಪ್ರಮಾದದಿಂದ ಗ್ರಾಹಕ ಎಚ್ ಎಸ್ ವರ್ಮ ಚೇತರಿಸಿಕೊಳ್ಳುತ್ತಿದ್ದಾರೆ.
ಎಚ್ ಎಸ್ ವರ್ಮ ಅವರು ತಮ್ಮ ಮನೆಗೆ ಎಲೆಕ್ಟ್ರಿಸಿಟಿ ಬಿಲ್ ನೋಡಿ ಅಚ್ಚರಿ, ಆಘಾತ ಅನುಭವಿಸಿದ್ದಾರೆ. ಪ್ರಸಾದ್ ಅವರಿಗೆ 85 ಕೋಟಿ ರು ಪಾವತಿಸುವಂತೆ ಬಿಲ್ ನಲ್ಲಿ ಸೂಚಿಸಲಾಗಿದೆ.

ಸಾಮಾನ್ಯವಾಗಿ 2, 000 ರು ನಿಂದ 6,000 ರು ತನಕ ಬಿಲ್ ಪಾವತಿಸಿ ಅಭ್ಯಾಸವಿದ್ದ ಎಚ್ ಎಸ್ ವರ್ಮ ಗೆ ಏಕಾಏಕಿ ಕೋಟಿಗಟ್ಟಲೇ ಮೊತ್ತದ ಬಿಲ್ ಬಂದಿದೆ.
ಏಕೆ ಹೀಗೆ?: 2,200 ರು ನಿಂದ 6,000 ರು ತನಕ ಬಿಲ್ ಕಟ್ಟುತ್ತಾ ಬಂದಿದ್ದೇನೆ. ಇತ್ತೀಚಿಗೆ ಮೀಟರ್ ಡಿಸ್ ಪ್ಲೇ ಹಾಳಾಗಿತ್ತು. ಈ ಬಗ್ಗೆ ವಿದ್ಯುಚ್ಛಕ್ತಿ ಮಂಡಳಿಗೆ ದೂರು ನೀಡಿದ್ದೆ. ಮೀಟರ್ ಬದಲಾಯಿಸಿದ್ದರು. ನಂತರ ಈ ರೀತಿ ಬಿಲ್ ಬಂದಿದೆ. ಬಿಲ್ ನೋಡಿ ನನ್ನ ಎದೆ ಬಡಿತವೇ ನಿಂತು ಹೋಗಿತ್ತು ಎಂದು ವರ್ಮ ಹೇಳಿದ್ದಾರೆ.
A Gurgaon resident gets an electricity bill over Rs. 85 crore for one month. pic.twitter.com/2aUp3RCzcg
— ANI (@ANI_news) September 27, 2015 ಅದರೆ, ಈ ರೀತಿ ಪ್ರಮಾದ ಇದೇ ಮೊದಲಲ್ಲ. ಎನ್ ಸಿಆರ್ ಪ್ರದೇಶದಲ್ಲಿ ಈ ರೀತಿ ಗ್ರಾಹಕರಿಗೆ ಶಾಕ್ ನೀಡುವುದು ಮಾಮೂಲಿಯಾಗಿದೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎಚ್ ಎಸ್ ವರ್ಮ ದೂರಿದ್ದಾರೆ. (ಎಎನ್ ಐ)












Click it and Unblock the Notifications