ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಪ್ರಿಯಕರನೊಂದಿಗೆ ಹಿಂದೂ ಯುವತಿ ಸಹಜೀವನ: ಕೋರ್ಟ್ ಅಸ್ತು

ಇನ್ನೂ 21 ವರ್ಷ ತುಂಬದ ಮುಸ್ಲಿಂ ಪ್ರಿಯಕರನೊಂದಿಗೆ 19 ವರ್ಷದ ವಯಸ್ಕ ಹಿಂದು ಯುವತಿ ಸಹಜೀವನ ನಡೆಸಬಹುದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.

By Prithviraj
|
Google Oneindia Kannada News

ಅಹಮದಾಬದ್, ನವೆಂಬರ್, 29: 19 ವರ್ಷದ ಹಿಂದೂ ಯುವತಿ ಮದುವೆಗೆ ಕನಿಷ್ಠ ವರ್ಷ ತುಂಬದ ತನ್ನ 20 ವರ್ಷದ ಅಪ್ರಾಪ್ತ ಮುಸ್ಲಿಂ ಪ್ರಿಯಕರನೊಂದಿಗೆ ಸಹಜೀವನ ನಡೆಸಬಹುದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.

ಗುಜರಾತಿನ ಬನಸ್ಕಾಂತ ಜಿಲ್ಲೆಯ ಧನೇರಾ ಎಂಬ ಕುಗ್ರಾಮವೊಂದರ ಮುಸ್ಲಿಂ ಯುವಕ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿಗಳಾದ ಅಕಿಲ್ ಖುರೇಷಿ ಮತ್ತು ಬಿರೇನ್ ವೈಷ್ಣವ್ ಅವರ ಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

Gujrat High Court lets Hindu girl live with Muslim boyfriend

"ಮದುವೆ ಮತ್ತು ಅದರ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ನಮ್ಮ ಸಮಾಜ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಸಹ ಜೀವನವೆಂಬುದು ಹೆಚ್ಚಾಗಿ ಮೆಟ್ರೋ ನಗರಗಳಲ್ಲಿ, ನಗರ ಪ್ರದೇಶಗಳಲ್ಲಿ ಮಾತ್ರ ನಾವು ಕಾಣುತ್ತೇವೆ. ಆದರೆ ಹಳ್ಳಿಯಂತಹ ಪ್ರದೇಶಗಳಲ್ಲಿ ಈಗಲೂ ಸಾಮಾಜಿಕ ಕಟ್ಟುಪಾಡುಗಳು ಹಲವು ಇವೆ.

ನಾವು ನಮ್ಮ ಸಂಪ್ರದಾಯಗಳನ್ನು ಗೌರವಿಸಬೇಕು ಆದರೆ, ಸಂಪ್ರಾದಾಯ, ಆಚಾರಗಳ ಹೆಸರಲ್ಲಿ ವ್ಯಕ್ತಿಯ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಯುವತಿ ಸಹ "ನನ್ನ ಪೋಷಕರೊಂದಿಗೆ ಇರಲು ನನಗೆ ಇಷ್ಟವಿಲ್ಲ. ನನ್ನ ಗೆಳೆಯನಿಗೆ 21 ವರ್ಷ ತುಂಬಿದ ನಂತರ ಅವನ ಜತೆ ಮದುವೆಯಾಗುವುದಾಗಿ" ಕೋರ್ಟ್ ಗೆ ತಿಳಿಸಿದ್ದಾಳೆ.

ಯುವತಿಯ ಹೇಳಿಕೆ ಆಧರಿಸಿ ತೀರ್ಪು ನೀಡಿದ ಕೋರ್ಟ್ "ಯುವತಿ ತನ್ನ ಮುಸ್ಲಿಂ ಪ್ರಿಯಕರನೊಂದಿಗೆ ಸಹಜೀವನ ನಡೆಸಬಹುದು ಆದರೆ ಆತ 21 ವರ್ಷ ತುಂಬುವ ವರೆಗೂ ಯುವತಿಯನ್ನು ಮದುವೆಯಾಗುವಂತಿಲ್ಲ" ಎಂದು ಸೂಚಿಸಿದೆ.

ಅಷ್ಟೇ ಅಲ್ಲದೆ 21 ವರ್ಷ ತುಂಬಿದ ನಂತರವಷ್ಟೇ ಯುವತಿಯನ್ನು ಮದುವೆಯಾಗಬೇಕೆಂದು ಯುವಕನಿಂದ ಕೋರ್ಟ್ ಮುಚ್ಚಳಿಗೆ ಪತ್ರ ಬರೆಸಿಕೊಂಡಿದೆ.

ಪ್ರಕರಣದ ವಿವರ:

ಮುಸ್ಲಿಂ ಸಮುದಾಯದ ಯುವಕ ಮತ್ತು ಹಿಂದೂ ಸಮುದಾಯ ಯುವತಿ ಒಟ್ಟಿಗೆ ಶಾಲೆಯಲ್ಲಿ ಓದಿಕೊಂಡಿದ್ದರು. ಮತ್ತು ಶಾಲಾ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು.

ಇಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದರು, ಯುವತಿ ತನ್ನ ಧರ್ಮವನ್ನೂ ಸಹ ಬದಲಾಯಿಸಿಕೊಳ್ಳಲು ತೀರ್ಮಾನಿಸಿದ್ದಳು, ಆದರೆ ಯುವತಿಗೆ 19 ವರ್ಷ ವಯಸ್ಸಾಗಿದ್ದರೂ ಯುವಕನಿಗೆ ಇನ್ನೂ 20 ವರ್ಷ ಮಾತ್ರ ಆಗಿತ್ತು.

ಭಾರತ ವಿವಾಹ ಕಾಯ್ದೆ ಪ್ರಕಾರ ಯುವಕನಿಗೆ ಇನ್ನೂ ಕನಿಷ್ಠ ವಯಸ್ಸು ಪೂರ್ಣಗೊಳ್ಳದೇ ಇರುವುದರಿಂದ ಇಬ್ಬರೂ ಕಳೆದ ಜುಲೈನಿಂದ ಸಹಜೀವನ ನಡೆಸುತ್ತಿದ್ದರು.

ಇದರಿಂದ ಕುಪಿತಗೊಂಡಿದ್ದ ಯುವತಿಯ ಪೋಷಕರು ಯುವತಿಯನ್ನು ಯುವಕನ ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿ ಇಟ್ಟಿದ್ದರು.

ಯುವತಿಯನ್ನು ಬಲವಂತವಾಗಿ ಗೃಹಬಂಧನದಲ್ಲಿ ಇಟ್ಟಿದ್ದು, ಕೂಡಲೇ ಯುವತಿಯನ್ನು ಕೋರ್ಟ್ ನಲ್ಲಿ ಹಾಜರು ಪಡಿಸಿಸುವಂತೆ ಯುವಕ ಹೇಬಿಯಾ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.

ಇದರಂತೆ ಯುವತಿಯನ್ನು ಕೋರ್ಟ್ ನಲ್ಲಿ ಹಾಜರು ಪಡಿಸಬೇಕೆಂದು ಕೋರ್ಟ್ ಬನಸ್ಕಾಂತ ಪೊಲೀಸರಿಗೆ ಸೂಚಿಸಿತ್ತು.

English summary
Gujarat high court permitted a 19-year-old Hindu girl to live-in with her Muslim boyfriend, who is just 20 years old and is currently ineligible for marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X